ರಾಜ್ಯದಲ್ಲಿ ದಿನ ಕಳೆದಂತೆ ಕೊರೊನಾ ಸೋಂಕಿನ ಭೀತಿ ಕೂಡಾ ಹೆಚ್ಚಾಗುತ್ತಿದೆ. ಜನರು ಕೂಡಾ ಕೊರೊನಾ ಸೋಂಕು ಕುರಿತಾಗಿ ಭಯ ಪಡುವ ಪರಿಸ್ಥಿತಿ ಉಂಟಾಗಿದೆ ಎಂಬುದರಲ್ಲಿ ಅನುಮಾನ ಇಲ್ಲ. ಕೆಲವು ಕಡೆಗಳಲ್ಲಿ ಸೋಂಕಿನ ಲಕ್ಷಣ ಕಂಡು ಬಂದರೂ ಜನರು ನೆಗಡಿ, ಕೆಮ್ಮು, ಜ್ವರದ ಮಾತ್ರೆಗಳನ್ನು ಬಳಿಸಿ ಸುಮ್ಮನಾಗುತ್ತಿದ್ದಾರೆ. ಆದರೆ ಸರ್ಕಾರ ಮೆಡಿಕಲ್ ಶಾಪ್ ಗಳಲ್ಲಿ ಹಾಗೆ ಮಾತ್ರೆಗಳನ್ನು ನೀಡದಂತೆ, ಅಲ್ಲದೇ ಅಂತಹವರ ಹೆಸರನ್ನು ನಮೂದು ಮಾಡಿ ಮಾಹಿತಿ ನೀಡುವಂತೆ ಸೂಚನೆಗಳನ್ನು ನೀಡುತ್ತಿದೆ ಎನ್ನಲಾಗಿದೆ. ಸೋಂಕು ನಿಯಂತ್ರಣ ಒಂದು ಪ್ರಶ್ನೆಯಂತಾಗುತ್ತಿದೆ.‌

ಈ ಬೆಳವಣಿಗೆಗಳ ನಡುವೆ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಸುಧಾಕರ್ ಅವರ ತಂದೆ ಕೆಮ್ಮು ಮತ್ತು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು ಎಂಬ ಸುದ್ದಿ ಬಂದಿತ್ತು. ಅಲ್ಲದೇ ಕೊರೊನಾ ಆಗಿರಬಹುದೆಂದು ಶಂಕೆ ಕೂಡಾ ಮೂಡಿತ್ತು. ಈಗ ಈ ಅನುಮಾನ ದೃಢ ವಾಗಿದೆ. ಸಚಿವರ ತಂದೆಗೆ ಕೊರೊನಾ ಪಾಸಿಟಿವ್ ಎಂದು ತಿಳಿದು ಬಂದಿದೆ‌. ಈ ವಿಷಯವನ್ನು ಖುದ್ದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಅವರೇ ಟ್ವೀಟ್ ಮಾಡುವ ಮೂಲಕ ಎಲ್ಲರಿಗೂ ತಿಳಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಂದೆಗೆ ಕೊರೊನಾ ಸೋಂಕು ಇರೋದು ದೃಢಪಟ್ಟ ಹಿನ್ನೆಲೆಯಲ್ಲಿ ಈ ಬಗ್ಗೆ ಟ್ವೀಟ್​ ಮಾಡಿರುವ ಡಾ.ಸುಧಾಕರ್ ಅವರು “ನನ್ನ ತಂದೆಯವರ ಕೋವಿಡ್​ ಪರೀಕ್ಷಾ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಕುಟುಂಬದ ಇತರೆ ಸದಸ್ಯರ ವರದಿಗಾಗಿ ಆಂತರಿಕವಾಗಿ ಕಾಯುತ್ತಿದ್ದೇನೆ. ನಿಮ್ಮೆಲ್ಲರ ಹಾರೈಕೆ ಇರಲಿ” ಎಂದು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here