ಭಾರತವು ಸ್ವಿಸ್ ಬ್ಯಾಂಕಿನಲ್ಲಿ ಕಾಳ ಧನ ಇಟ್ಟಿರುವವರ ಮಾಹಿತಿಯನ್ನು ಪಡೆಯಲು ಈಗಾಗಲೇ ಮನವಿ ಮಾಡಿದ್ದ ವಿಷಯ ತಿಳಿದಿದ್ದೇ. ಅದರಲ್ಲಿ ಈಗ ಭಾರತ ತನ್ನ ಪ್ರಜೆಗಳ ಸ್ವಿಸ್ ಬ್ಯಾಂಕ್ ಖಾತೆ ವಿವರಗಳನ್ನು ಹೊಸ ಸ್ವಯಂಚಾಲಿತ ಮಾಹಿತಿ ವಿನಿಮಯ ಒಪ್ಪಂದದಡಿಯಲ್ಲಿ ಪಡೆದುಕೊಂಡಿದೆ, ಇದು ವಿದೇಶದಲ್ಲಿ ಸಂಗ್ರಹವಾಗಿರುವ ಕಪ್ಪು ಹಣದ ವಿರುದ್ಧದ ಸರ್ಕಾರದ ಹೋರಾಟದ ಪ್ರಮುಖ ಮೈಲಿಗಲ್ಲು ಎಂದು ಹೇಳಲಾಗುತ್ತಿದೆ. ಸ್ವಯಂಚಾಲಿತ ಮಾಹಿತಿ ವಿನಿಮಯ (ಎಇಒಐ) ಕುರಿತ ಜಾಗತಿಕ ಮಾನದಂಡಗಳ ಚೌಕಟ್ಟಿನೊಳಗೆ ಸ್ವಿಟ್ಜರ್ಲೆಂಡ್‌ನ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ (ಎಫ್‌ಟಿಎ) ಹಣಕಾಸು ಖಾತೆಗಳ ಮಾಹಿತಿಯನ್ನು ವಿನಿಮಯ ಮಾಡಿಕೊಂಡ 75 ದೇಶಗಳಲ್ಲಿ ಭಾರತವೂ ಸೇರಿದೆ ಎಂದು ಎಫ್‌ಟಿಎ ವಕ್ತಾರರು ಪಿಟಿಐಗೆ ಮಾಹಿತಿಯನ್ನು ನೀಡಿದ್ದಾರೆಂದು ತಿಳಿಸಲಾಗಿದೆ

ಮುಂದಿನ ಪಟ್ಟಿಯ ವಿನಿಮಯವು ಸೆಪ್ಟೆಂಬರ್ 2020 ರಲ್ಲಿ ನಡೆಯಲಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಎಇಒಐ ಚೌಕಟ್ಟಿನಡಿಯಲ್ಲಿ ಭಾರತವು ಮೊದಲ ಬಾರಿಗೆ ಸ್ವಿಸ್ ಅಧಿಕಾರಿಗಳಿಂದ ವಿವರಗಳನ್ನು ಪಡೆದುಕೊಂಡಿದೆ, ಇದು ಹಣಕಾಸು ಖಾತೆಗಳ ಮಾಹಿತಿ ವಿನಿಮಯಕ್ಕಾಗಿ ಪ್ರಸ್ತುತ ಸಕ್ರಿಯವಾಗಿರುವ ಖಾತೆಗಳು ಮತ್ತು 2018 ರಲ್ಲಿ ಮುಚ್ಚಲ್ಪಟ್ಟ ಖಾತೆಗಳ ಬಗ್ಗೆ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ‌. ಭಾರತ ಸರ್ಕಾರ ಹಾಗೂ ಸ್ವಿಜರ್ಲೆಂಡ್ ನಡುವೆ ನಡೆದಿರುವ ಒಪ್ಪಂದದ ಅನ್ವಯ ಮಾಹಿತಿಯನ್ನು ಹಂಚಿಕೆ ಮಾಡಿಕೊಳ್ಳಲಿದ್ದು, ಭಾರತದಲ್ಲಿ ತೆರಿಗೆ ವಂಚಿಸಿ ವಿದೇಶಿಗಳಲ್ಲಿ ಕಪ್ಪು ಹಣವಾಗಿಟ್ಟಿದ್ದ ಪತ್ತೆಯಲ್ಲಿ ನೆರವಾಗಲಿದೆ.

ಈ ಮಾಹಿತಿ ವಿನಿಮಯವನ್ನು ಕಟ್ಟುನಿಟ್ಟಾದ ಗೌಪ್ಯತೆ ಷರತ್ತುಗಳಿಂದ ನಿಯಂತ್ರಿಸಲಾಗುತ್ತದೆ ಮತ್ತು ಎಫ್‌ಟಿಎ ಅಧಿಕಾರಿಗಳು ಖಾತೆಗಳ ಸಂಖ್ಯೆಯ ಬಗ್ಗೆ ಅಥವಾ ಸ್ವಿಸ್ ಬ್ಯಾಂಕುಗಳ ಭಾರತೀಯ ಗ್ರಾಹಕರೊಂದಿಗೆ ಸಂಬಂಧಿಸಿದ ಹಣಕಾಸಿನ ಸ್ವತ್ತುಗಳ ಪ್ರಮಾಣದ ಬಗ್ಗೆ ನಿರ್ದಿಷ್ಟ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಒಟ್ಟು 75 ರಾಷ್ಟ್ರಗಳು ತಮ್ಮ ದೇಶದ ನಾಗರಿಕರ ವಿವರಗಳ ಬೇಡಿಕೆಯನ್ನು ಸ್ವಿಸ್ ಸರ್ಕಾರದ ಮುಂದೆ ಇಟ್ಟಿತ್ತು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here