ಚಾಮರಾಜನಗರ: ಜಮೀನಿಗೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ಬೇಲಿ ತಗುಲಿ ಒಂಟಿಸಲಗ ಬಲಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗಂಡ್ಲುಪೇಟೆ ತಾಲೂಕಿನಲ್ಲಿ ನಡೆದಿದೆ.
ಕುರುಬರಹುಂಡಿ ಗ್ರಾಮದಲ್ಲಿ ಈ ದುರತ ಸಂಭವಿಸಿದೆ. ಜಮೀನು ಮಾಲೀಕ ಶಿವರಾಜು ತನ್ನ ಜಮೀನು ರಕ್ಷಣೆಗಾಗಿ ತಂತಿಬೇಲಿ ಅಳವಡಿಸಿ ಅದಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ. ಈ ತಂತಿಬೇಲಿ ತಗುಲಿ ಆನೆ ಮೃತಪಟ್ಟಿದೆ.
ಘಟನೆ ಬಳಿಕ ಜಮೀನು ಮಾಲೀಕ ಶಿವರಾಜು ಪರಾರಿಯಾಗಿದ್ದಾನೆ. ಅರಣ್ಯ ಅಧಿಕಾರಿಗಳು ಆರೋಪಿಗಾಗಿ ಶೋಧ ನಡೆಸಿದ್ದಾರೆ.
Disclaimer: This Story is auto-aggregated by a Syndicated Feed and has not been Created or Edited By City Big News Staff.