ಬಿಗ್ ಬಾಸ್ ಸೀಸನ್ ಏಳರ ಎರಡನೇ ಎಲಿಮಿನೇಷನ್ ನಲ್ಲಿ ಮನೆಯಿಂದ ಹೊರಗೆ ಬಂದವರು ನಿರೂಪಕಿ ಚೈತ್ರ ವಾಸುದೇವನ್ ಅವರು. ಆದರೆ ಅವರು ಮನೆಯಿಂದ ಹೋಗುವಾಗ, ವೀಕೆಂಡ್ ನ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಅವರಿಂದ ವೇದಿಕೆ ಮೇಲೆ ತಮ್ಮ ವರ್ತನೆಗೆ ಬುದ್ಧಿ ಮಾತು ಕೇಳಬೇಕಾಯಿತು‌. ಹೌದು ವಾರದ ಕೊನೆಯಲ್ಲಿ ಎಂದರೆ ಭಾನುವಾರದ ಎಪಿಸೋಡ್ ನಲ್ಲಿ ಸುದೀಪ್ ಅವರ ಜೊತೆ ವೇದಿಕೆಯ ಮೇಲಿದ್ದ ಚೈತ್ರ ಅವರು ವರ್ತನೆ ಸ್ವಲ್ಪ ಅತಿ ಎನಿಸಿದ್ದು ವಾಸ್ತವ. ಸ್ವತಃ ಸುದೀಪ್ ಅವರು ಕೂಡಾ ಅದು ಗಮನಕ್ಕೆ ಬಂದು ಆಕೆಯನ್ನು ತರಾಟೆಗೆ ತೆಗದುಕೊಂಡರು.

ಮನೆಯಿಂದ ಹೊರ ಬಂದ ಚೈತ್ರ ವಾಸುದೇವನ್ ಅವರಿಗೆ ಅವರ ಜರ್ನಿಯ ವಿಡಿಯೋ ತೋರಿಸಲಾಯಿತು‌. ಅದರಲ್ಲಿ ಸುಜಾತ ಅವರು “ಫೈವ್ ಸ್ಟಾರ್ ಹೊಟೇಲ್ ಇಂದ ಬಂದವರ ರೀತಿ ಇಲ್ಲಿದ್ದರೆ ಸರಿ ಬರಲ್ಲ” ಎಂದಯ ಚೈತ್ರ ಅವರಿಗೆ ಹೇಳಿದ ದೃಶ್ಯ ಕೂಡಾ ಇತ್ತು. ಈ ಜರ್ನಿ ವೀಡಿಯೋ ನೋಡಿದ ನಂತರ ಚೈತ್ರ ಅವರು ವಿಡಿಯೋದಲ್ಲಿ ತಪ್ಪಿದೆ ಎಂದು, ಆ ಡೈಲಾಗ್ ನನಗೆ ಹೇಳಿದ್ದಲ್ಲ, ಇನ್ನು ಆರುನೂರು ಜನ ಹುಡುಗರ ಬಗ್ಗೆ ಜಸ್ಟ್ ಬಿಲ್ಡಪ್ ಗೆ ಹೇಳಿದ್ದು, ಆ ವಿಡಿಯೋ ತೆಗೆಯಿರಿ. ನಾನು ಎಷ್ಟು ಚೆನ್ನಾಗಿ ಮೇಕಪ್ ಮಾಡ್ಕೊಳ್ತಿದ್ದೆ, ಆ ವಿಡಿಯೋ ಹಾಕದೆ, ಮೇಕಪ್ ಇಲ್ದೇ ಇರೋ ವಿಡಿಯೋ ಹಾಕಿದ್ದೀರಾ ಎಂದು ಮಾತನಾಡಿದರು.

ಆಕೆಯ ಮಾತನ್ನೆಲ್ಲಾ ಕೇಳಿದ ನಂತರ ಸುದೀಪ್ ಅವರು ಇಷ್ಟು ಸೀಸನ್ ಗಳಲ್ಲಿ ಜರ್ನಿ ವಿಡಿಯೋ ನೋಡಿ ಭಾವುಕರಾದರೇ ಹೊರತು ನಿಮ್ಮ ತರ ತಪ್ಪುಹುಡುಕಲಿಲ್ಲ ಎಂದು ಹೇಳಿ ಇದು ಸರಿ ಇಲ್ಲ ಎಂದಿದ್ದಾರೆ. ಅನಂತರ ಚೈತ್ರ ಅವರು ಸುದೀಪ್ ಅವರನ್ನು ಮೆಚ್ಚಿಸಲು ಪ್ರಯತ್ನ ಪಟ್ಟಾಗ , ಸುದೀಪ್ ಅವರು ನೇರವಾಗಿಯೇ ನನ್ನ ಮೆಚ್ಚಿಸಲು ಬರಬೇಡಿ. ಅಷ್ಟಿಲ್ಲದೆ ನಾನು 25 ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಇಲ್ಲ‌‌. ನೀವು ಬದಲಾದರೆ ಮಾತ್ರ ಬೆಳೆಯೋಕೆ ಸಾಧ್ಯ ಇದು ನಾನು ಸೀರಿಯಸ್ ಆಗಿ ಹೇಳ್ತಾ ಇದ್ದೀನಿ ಎಂದು ಅವರು ಚೈತ್ರ ಅವರಿಗೆ ಬುದ್ಧಿ ಮಾತು ಹೇಳಿ ಕಳುಹಿಸಿದ್ದಾರೆ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here