ಬಿಗ್ ಬಾಸ್ 5 ಸೀಸನ್ ಮುಗಿದಿದೆ.ಈ ಬಾರಿಯ ಬಿಗ್ ಬಾಸ್ ಷೋನಲ್ಲಿ ಕಿರಿಕ್ ಹುಡುಗಿ ಸಂಯುಕ್ತಾ ಹೆಗಡೆ ಮಾಡಿದ ಕಿರಿಕ್ ಬಿಟ್ಟರೆ.ಇನ್ನಾವುದೇ ಅಡಚಣೆ ಇಲ್ಲದೇ ಸರಾಗವಾಗಿ ಬಿಗ್ ಬಾಸ್ ಷೋ ನಡೆಯಿತು.ಈ ಬಾರಿಯ ಬಿಗ್ ಬಾಸ್ ನಲ್ಲಿ ಎಲ್ಲರ ನಿರೀಕ್ಷೆಯಂತೆ ಚಂದನ್ ಶೆಟ್ಟಿ ಗೆದ್ದಿದ್ದಾರೆ.ಚಂದನ್ ಶೆಟ್ಟಿ ಗೆಲುವಿನ ಮೂಲ ಹುಡುಕುತ್ತಾ ಹೊರಟರೆ ಹಲವು ಕಾರಣಗಳು ಸಿಗುತ್ತವೆ.ಅವುಗಳಲ್ಲಿ ಚಂದನ್ ಯಾರ ಬಳಿಯೂ ಅನವಶ್ಯಕಥೆಯಾಗಿ ಮಾತನಾಡುತ್ತಿರಲಿಲ್ಲ.ಎಷ್ಟು ಬೇಕೋ ಅಷ್ಟೇ ಮಾತಾಡುತ್ತಿದ್ದ ಚಂದನ್ ತನಗೆ ವಹಿಸಿದ ಕೆಲಸಗಳನ್ನು ಮಾಡುತ್ತಿದ್ದರು.ಆರಂಭಿಕ ದಿನಗಳಲ್ಲಿ ಚಂದನ್ ಸ್ವಲ್ಪ ಸೈಲೆಂಟ್ ಆಗಿಯೇ ಇದ್ದರು‌.

ಬಿಗ್ ಬಾಸ್ ಗೆ ಹೋಗುವ ಮುನ್ನವೇ ತನ್ನ ವಿಭಿನ್ನ ಶೈಲಿಯ ಮ್ಯೂಸಿಕ್ ನಿಂದ ಕನ್ನಡ ರ್ಯಾಪ್ ಲೋಕದಲ್ಲಿ ಸಂಚಲನ ಸೃಷ್ಟಿಸಿದ್ದ ಚಂದನ್ ಶೆಟ್ಟಿ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಸಿಕ್ಕ ಒಂದು ಡಬ್ಬ ಬಿಗ್ ಮನೆಯ ಖದರ್ ಹೆಚ್ಚಿಸಿತ್ತು.ಬಿಡುವಿನ ವೇಳೆಗಳಲ್ಲಿ ಡಬ್ಬ ಹಿಡಿದು ಕುಳಿತು ಎರಡು ಏಟು ಹಾಕುತ್ತಿದ್ದಂತೇ ಬಿಗ್ ಬಾಸ್ ಮನೆಯ ಇತರ ಸ್ಪರ್ಧಿಗಳು ತಮಗರಿವಿಲ್ಲದಂತೇ ಮೈಮರೆಯುವಂತೆ ಮಾಡಿದ್ದು ಚಂದನ್ ಶೆಟ್ಟಿ ಅವರ ಮ್ಯೂಸಿಕ್.

 

ಚಂದನ್ ಬಿಗ್ ಬಾಸ್ ಮನೆಯಲ್ಲಿ ಶೃತಿ ಗಾಗಿಯೇ ಮಾಡಿದ್ದ ಬಿಟ್ಟಿರಲಾರೆ ಹಾಡು ಬಿಗ್ ಬಾಸ್ ಮನೆಯಲ್ಲಿ ಮತ್ರವಲ್ಲದೇ ಕನ್ನಡ ಕಿರುತೆರೆ ವೀಕ್ಷಕರಿಗೂ ಹುಚ್ಚು ಹಿಡಿಸಿತ್ತು. ಸಂಗೀತದಿಂದಲೇ ಎಲ್ಲರ ಹೃದಯ ಗೆದ್ದರು ಚಂದನ್ ಶೆಟ್ಟಿ. ಬಿಗ್ ಬಾಸ್ ವಿಜೇತರಾಗುವಂತೆ  ಮಾಡುವಲ್ಲಿ ಚಂದನ್ ಅಷ್ಟೇ ಪಾಲು ಚಂದನ್ ಅವರ ಸಂಗೀತಕ್ಕೂ ಸೇರುತ್ತದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here