ಬಿಗ್ ಬಾಸ್ ಸೀಸನ್ 7 ಅಂತಿಮ ಘಟ್ಟವನ್ನು ತಲುಪಲು ಇನ್ನು ಕೆಲವೇ ದಿನಗಳು ಉಳಿದಿವೆ. ಈ ವಾರದ ಅಂದರೆ ಹನ್ನೆರಡನೆಯ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಗಿದಾಗಿದೆ. ಈ ವಾರ ನಾಮಿನೇಟ್ ಅಗಿದ್ದವರಲ್ಲಿ ಒಬ್ಬರು ಮನೆಯಿಂದ ಹೊರ ಬಂದಿದ್ದಾರೆ. ಅಲ್ಲಿಗೆ ಈ ವಾರ ನಾಮಿನೇಟ್ ಆದವರಲ್ಲಿ ಯಾರು ಮನೆಯಿಂದ ಹೊರ ಬರಲಿದ್ದಾರೆ ಎಂಬ ಪ್ರೇಕ್ಷಕರ ಪ್ರಶ್ನೆಗೆ ಉತ್ತರ ಸಿಕ್ಕಿ, ಹನ್ನೆರಡನೇ ವಾರಕ್ಕೆ ತಮ್ಮ ಬಿಗ್ ಹೌಸ್ ಜರ್ನಿಯನ್ನು ಪೂರ್ತಿ ಮಾಡಿ ಮಳೆಯಿಂದ ಹೊರಗೆ ಬಂದಿದ್ದಾರೆ ಈ ವಾರ ಎಲಿಮಿನೇಟ್ ಆದ ಸದಸ್ಯರು. ಈ ವಾರ ಎಲಿಮಿನೇಟ್ ಆಗಲು ನಾಮಿನೇಟ್ ಆಗಿದ್ದವರು
ಕಿಶನ್, ದೀಪಿಕಾ ದಾಸ್, ಚಂದನ್ ಆಚಾರ್, ಚಂದನಾ, ಹರೀಶ್ ರಾಜ್ ಮತ್ತು ಭೂಮಿ.

ಕಳೆದ ವಾರ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದ ಸ್ಪರ್ಧಿ ಚೈತ್ರ ಕೊಟ್ಟೂರು ಅವರು ಎರಡನೇ ಬಾರಿ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದರು. ಅದಕ್ಕೂ ಹಿಂದಿನ ವಾರ ನೋ ಎಲಿಮಿನೇಷನ್ ವೀಕ್ ಆದ್ದರಿಂದ ಯಾರೊಬ್ಬರೂ ಕೂಡಾ ಎಲಿಮಿನೇಟ್ ಆಗಿರಲಿಲ್ಲ. ಈ ವಾರ ನಾಮಿನೇಟ್ ಆದವರಲ್ಲಿ ತಮ್ಮ ಜರ್ನಿ ಮುಗಿಸಿ ಹೊರ ಬಂದವರು ಮತ್ತಾರೂ ಅಲ್ಲ, ಬಿಗ್ ಹೌಸ್ ನಲ್ಲಿ ವಯಸ್ಸಿನಲ್ಲಿ ಎಲ್ಲರಿಗಿಂತ ಕಿರಿಯವರಾಗಿರುವ ಚಂದನಾ ಅವರು.

ನಾಮಿನೇಟ್ ಆಗಿದ್ದವರಲ್ಲಿ ಸುದೀಪ್ ಅವರು ಚಂದನಾ ಅವರ ಹೆಸರನ್ನು ಘೋಷಣೆ ಮಾಡಿದರು. ಇನ್ನು ಇವತ್ತಿನ ಸಂಚಿಕೆಯಲ್ಲಿ ಚಂದನಾ ಅವರ ಸುದೀಪ್ ಅವರ ಜೊತೆಗೆ ವೇದಿಕೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದ ಅಂದರೆ ನಾಮಿನೇಟ್ ಆಗಿದ್ದ ದೀಪಿಕಾ, ಕಿಶನ್, ಚಂದನ್ ಆಚಾರ್, ಹರೀಶ್ ರಾಜ್ ಮತ್ತು ಭೂಮಿ ಅವರು ಸೇಫ್ ಆಗಿ, ಹದಿಮೂರನೇ ವಾರಕ್ಕೆ ಎಂಟ್ರಿ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here