ಬಿಗ್ ಬಾಸ್ ಸೀಸನ್ 7 ರಲ್ಲಿ ಕಳೆದ ಎರಡು ದಿನಗಳ ಹಿಂದೆಯಷ್ಟೇ ದೀಪಿಕಾ ದಾಸ್ ಅವರ ತಾಯಿ ಮನೆಯೊಳಗೆ ಹೋಗಿ ಮಗಳ ಜೊತೆ ಮಾತನಾಡಿ ಬಂದಿದ್ದು ಒಂದು ದೊಡ್ಡ ಸುದ್ದಿಯಾಯಿತು. ನಿಜಕ್ಕೂ ಇದು ದೊಡ್ಡ ಸುದ್ದಿಯೇ ಆಯಿತು. ಏಕೆಂದರೆ ದೀಪಿಕಾ ಅವರು ಶೈನ್ ಬಗ್ಗೆ ತೋರಿದ ವರ್ತನೆ ಹಾಗೂ ಮಗಳಿಗೆ ಪದೇ ಪದೇ ಪರೋಕ್ಷವಾಗಿ ಶೈನ್ ಮತ್ತು ದೀಪಕ್ ನಡುವಿನ ವಿಚಾರದ ಬಗ್ಗೆಯೇ ಹೇಳಿದ್ದರಿಂದ ನೋಡುಗರು ಕೂಡಾ ಸ್ವಲ್ಪ ಅಸಮಾಧಾನವನ್ನು ಹೊರ ಹಾಕಿದರೆ, ಸಾಮಾಜಿಕ ಜಾಲ ತಾಣಗಳಲ್ಲಿ ಕೂಡಾ ಇದರ ಬಗ್ಗೆ ಚರ್ಚೆ ನಡೆದು, ಶೈನ್ ಬಗ್ಗೆ ದೀಪಿಕಾ ಅವರ ತಾಯಿ ತೋರಿದ ನಿರಾದರವನ್ನು ನೋಡಿ ಜನ ಬೇಸರಿಸಿಕೊಂಡಿದ್ದರು.

ಇನ್ನು ದೀಪಿಕಾ ಅವರ ತಾಯಿ ಮನೆಯಿಂದ ಹೊರ ಬಂದ ಮೇಲೆ ಅದರ ಪರಿಣಾಮ ಆಗದೇ ಇರುತ್ತದೆಯೇ? ಖಚಿತವಾಗಿ ಆಗಿದೆ. ಪ್ರತಿ ದಿನ ಬಿಗ್ ಬಾಸ್ ನೋಡುವವರಿಗೆ ಎಪಿಸೋಡ್ ನಲ್ಲಿ ದೀಪಿಕಾ ಹಾಗೂ ಶೈನ್ ಅವರ ನಡುವೆ ನಡೆಯುವ ಹಾಸ್ಯ, ಅವರ ನಡುವಿನ ಮಾತು ಕತೆ ಸುಮಾರು ಹತ್ತು ಹದಿನೈದು ನಿಮಿಷವಾದರೂ ಕ್ಯಾಮರಾ ಇವರ ಮೇಲೆ ಫೋಕಸ್ ಆಗುತ್ತಿತ್ತು. ಆದರೆ ನಿನ್ನೆಯ ಎಪಿಸೋಡ್ ನಲ್ಲಿ ದೀಪಿಕಾ ಹಾಗೂ ಶೈನ್ ಅವರ ನಡುವೆ ಯಾವುದೇ ದೀರ್ಘವಾದ ಮಾತು ಕತೆ ನಡೆಯುವ ದೃಶ್ಯ ನೋಡಲು ಸಿಗಲೇ ಇಲ್ಲ. ಬಹುಶಃ ತಮ್ಮ ತಾಯಿ ಪದೇ ಪದೇ ಹೇಳಿದ ಮಾತಿನಿಂದ ದೀಪಿಕಾ ಶೈನ್ ನಿಂದ ದೂರ ಉಳಿದರಾ? ಎಂಬ ಅನುಮಾನ ಮೂಡಿದೆ.

ತಮ್ಮ ತಾಯಿ ಅಷ್ಟು ಬಾರಿ ಹೇಳುತ್ತಿದ್ದಾರೆ ಎಂದರೆ ಹೊರಗೆ ಏನಾದರೂ ಜನಕ್ಕೆ ಏನಾದರೂ ತಪ್ಪು ಅನಿಸಿಕೆ ಬಂದಿರಬಹುದೇ? ಎಂಬ ಅನುಮಾನವನ್ನು ಕೂಡಾ ದೀಪಿಕಾ ಅವರ ಮನಸ್ಸಿನಲ್ಲಿ ಹುಟ್ಟು ಹಾಕಿರಬಹುದೇನೋ ಎನ್ನುವಂತಿದೆ ನಿನ್ನೆಯ ಎಪಿಸೋಡ್. ಕೊನೆಯ ಘಟ್ಟಕ್ಕೆ ಸೇರುತ್ತಿರುವ ಈ ಹಂತದಲ್ಲಿ ಇನ್ನು ದೀಪಿಕಾ ದಾಸ್ ಮತ್ತು ಶೈನ್ ತಮ್ಮ ನಡುವೆ ಅಂತರ ಕಾಪಾಡಿಕೊಳ್ಳುವರೋ ಅಥವಾ ಮೊದಲಿನಂತೆ ಖುಷಿಯಾಗಿ ಇರುವರೊ? ಕಾದು ನೋಡಬೇಕಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here