ಬಿಗ್‌ಬಾಸ್‌ ಮನೆಯಲ್ಲಿ ಕಳೆದ ಕೆಲವು ದಿನಗಳಿಂದ ನೀಡುತ್ತಿರುವ ಟಾಸ್ಕ್ ಗಳಲ್ಲಿ ನಡೆಯುತ್ತಿದೆ ಸಿಕ್ಕಾಪಟ್ಟೆ ಜಿದ್ದಾ ಜಿದ್ದಿನ ಸ್ಪರ್ಧೆ ಮತ್ತು ಸ್ಪರ್ಧಿಗಳು ಕೂಡಾ ಟಾಸ್ಕ್ ನಲ್ಲಿ ವಿಪರೀತ ಉದ್ರೇಕಗೊಂಡು ಕೂಗಾಡಿ, ಅರಚಾಡಿ ಗಲಾಟೆ ಮಾಡಿಕೊಳ್ಳುತ್ತಿರುವುದು ಕೂಡಾ ಎಲ್ಲರಿಗೂ ತಿಳಿದೇ ಇದೆ. ಇನ್ನು ಬಿಗ್ ಬಾಸ್ ನೀಡುವ ಟಾಸ್ಕ್‌ನಲ್ಲಿ ಕೂಡಾ ಎರ್ರಾ ಬಿರ್ರಿ ಆಡುವ ಭರದಲ್ಲಿ ಆಟದ ಕಡೆ ಗಮನ ನೀಡದೇ ಹೋದರೆ ಏನಾದರೂ ಒಂದಾಗುವುದು ಮಾತ್ರ ಖಚಿತ. ರಣರಂಗ ಟಾಸ್ಕ್ ನಡೆಯುವ ಸಂದರ್ಭದಲ್ಲೇ ಸಣ್ಣ ಪುಟ್ಟ ಗಾಯಗಳನ್ನು ಮಾಡಿಕೊಂಡಿದ್ದರು ಸ್ಪರ್ಧಿಗಳು. ಕೆಲವು ದಿನಗಳ ಹಿಂದೆ ಸುಜಾತ ಅವರು ಕೂಡಾ ಕಾಲು ಮುರಿದುಕೊಂಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ಈಗ ವಾಹಿನಿಯು ಅಪ್ಲೋಡ್ ಮಾಡಿರುವ ಪ್ರೋಮದಲ್ಲಿ ಇಂದಿನ ಟಾಸ್ಕ್ ನಲ್ಲಿ ಸಪ್ತಾಶ್ವ ತಂಡದ ಕ್ಯಾಪ್ಟನ್‌ ದೀಪಿಕಾ ದಾಸ್‌ ಅವರು ಪೆಟ್ಟು ಮಾಡಿಕೊಂಡಿರುವುದನ್ನು ನೋಡಬಹುದಾಗಿದೆ. ನಿನ್ನೆ ನೀಡಿದಂತಹ ಕಿತ್ತಳೆ ಮಂಡಿ ಟಾಸ್ಕ್ ನಲ್ಲೇ ಸಾಕಷ್ಟು ಗಲಾಟೆ ಮಾಡಿಕೊಂಡಿದ್ದರು ಮನೆಯ ಸದಸ್ಯರು. ಆಗಲೂ ದೀಪಿಕಾ ದಾಸ್ ಅವರು ರೇಗಾಡಿದ್ದು ಕೂಡಾ ಸುದ್ದಿಯಾಗಿತ್ತು. ಇಂದಿನ ಟಾಸ್ಕ್ ನಲ್ಲಿ ಎತ್ತರದ ಟ್ಯಾಂಕ್ ನಲ್ಲಿ ನೀರು ತುಂಬಿಸಬೇಕು ಹಾಗೂ ಲೀಕೇಜ್ ತಡೆಯುವ ಸವಾಲನ್ನು ನೀಡಿದ್ದು, ಅದರಲ್ಲಿ ಕೂಡಾ ಎರಡೂ ತಂಡಗಳ ನಡುವೆ ತೀವ್ರ ಪೈಪೋಟಿ ನಡೆದಿದೆ.

ಮತ್ತೊಮ್ಮೆ ಕಿರುಚಾಟ, ಕೂಗಾಟ, ಗಲಾಟೆ ಕಂಡಿದ್ದು, ಅದು ಸ್ವಲ್ಪ ಹೆಚ್ಚಾಗಿಯೇ ಇದೆ. ಈ ಟಾಸ್ಕ್ ನಲ್ಲಿ ದೀಪಿಕಾ ದಾಸ್ ಟ್ಯಾಂಕ್‌ ಬಳಿ ನಿಂತುಕೊಂಡಿದ್ದು, ಅಲ್ಲಿಂದ ಕೆಳಗೆ ಬಿದ್ದಿದ್ದಾರೆ. ಬಿದ್ದ ಪರಿಣಾಮ ಅವರಿಂದ ನಡೆಯುವುದಕ್ಕೆ ಆಗಿಲ್ಲ. ಆಗ ಕಿಶನ್ ದೀಪಿಕಾ ಅವರನ್ನು ಎತ್ತಿಕೊಂಡೇ ಕನ್‌ಫೇಶನ್ ರೂಮ್‌ಗೆ ಕರೆದುಕೊಂಡು ಹೋಗಿರುವುದನ್ನು ನೋಡಬಹುದಾಗಿದೆ. ಈ ರೇಂಜಿಗೆ ದೀಪಿಕಾ ದಾಸ್ ಗೆ ಎಫೆಕ್ಟ್ ಆಗಿದ್ದಾದರೂ ಹೇಗೆ, ಅಲ್ಲೇನು ನಡೆಯಿತು ಎಂಬುದನ್ನು ತಿಳಿಯಲು ಇವತ್ತಿನ ಎಪಿಸೋಡ್ ವರೆಗೆ ಕಾಯಬೇಕಿದೆ.

Photos :- colors kannada

ನೀರು ತುಂಬ್ಸಿ, ಲೀಕೇಜ್ ತಡಿಯಬೇಕು! ಆದ್ರೆ ನೀರಿನ ಜೊತೆ ಕೋಪ, ಮನಸ್ತಾಪವೂ ಲೀಕ್ ಆಗ್ತಿದೆ!ಬಿಗ್‌ಬಾಸ್ | ಪ್ರತಿ ರಾತ್ರಿ 9ಕ್ಕೆ#BBK7 #BiggBoss #ColorsKannada

Colors Kannada यांनी वर पोस्ट केले बुधवार, १३ नोव्हेंबर, २०१९

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here