ಬಿಗ್ ಬಾಸ್ 7 ರ ಯಶಸ್ವಿ ಸೀಸನ್ ಕೊನೆಯ ಹಂತಕ್ಕೆ ತಲುಪಿದೆ. ಇನ್ನು ಕೆಲವೇ ದಿನಗಳಲ್ಲಿ ನಮಗೆ ಈ ಸೀಸನ್ ನ ವಿನ್ನರ್ ಯಾರು? ಎಂಬುದಕ್ಕೆ ಉತ್ತರ ಸಿಗಲಿದೆ. ಮೊನ್ನೆಯಷ್ಟೇ ತಮ್ಮ 105 ದಿನಗಳ ಬಿಗ್ ಬಾಸ್ ಜರ್ನಿಯನ್ನು ಮುಗಿಸಿ ಪ್ರಿಯಾಂಕ ಮನೆಯಿಂದ ಹೊರ ಬಂದಿದ್ದಾರೆ. ಫಿನಾಲೇಗೆ ಬೇಕಿರುವುದು ಐದು ಮಂದಿ ಸ್ಪರ್ಧಿಗಳು. ಈಗ ಪ್ರಿಯಾಂಕ ಅವರ ನಿರ್ಗಮನದ ನಂತರ ಮನೆಯಲ್ಲಿ ಉಳಿದಿರುವ ಸದಸ್ಯರು ಆರು ಜನ. ಕುರಿ ಪ್ರತಾಪ್, ಶೈನ್ ಶೆಟ್ಟಿ, ದೀಪಿಕಾ ದಾಸ್, ಭೂಮಿ ಶೆಟ್ಟಿ, ಹರೀಶ್ ರಾಜ್, ಈಗಾಗಲೇ ಸೇಫ್ ಆಗಿ ಫಿನಾಲೇ ವೀಕ್ ತಲುಪಿರುವ ವಾಸುಕಿ ವೈಭವ್ ಇವರು ಮನೆಯಲ್ಲಿ ಇದ್ದಾರೆ.

ಇನ್ನು ಈ ವಾರ ಮಿಡ್ ವೀಕ್ ಎಲಿಮಿನೇಷನ್ ಇರುವುದು ಕೂಡಾ ಸತ್ಯ. ಈಗ ಮನೆಯಲ್ಲಿ ವಾಸುಕಿ ಅವರನ್ನು ಬಿಟ್ಟು ಉಳಿದ ಐದು ಜನರನ್ನು ನೋಡಿದಾಗ, ಶೈನ್ ಹಾಗೂ ಕುರಿ ಪ್ರತಾಪ್ ಇಬ್ಬರೂ ಕೂಡಾ ಎಲಿಮಿನೇಟ್ ಆಗುವ ಅವಕಾಶಗಳು ಸಾಧ್ಯವೇ ಇಲ್ಲ ಎನ್ನುವಂತೆ ಇದೆ ಪರಿಸ್ಥಿತಿ. ಅವರಿಬ್ಬರು ಫಿನಾಲೇ ತಪ್ಪದೇ ತಲುಪುತ್ತಾರೆ ಎಂಬ ದೃಢ ನಂಬಿಕೆ ಎಲ್ಲರಲ್ಲೂ ಇದ್ದೇ ಇದೆ. ಇನ್ನು ಉಳಿದವರು ಮೂವರು ಹರೀಶ್ ರಾಜ್, ಭೂಮಿ ಶೆಟ್ಟಿ ಹಾಗೂ ದೀಪಿಕಾ ದಾಸ್ ಅವರು. ಅದರಲ್ಲಿ ಇತ್ತೀಚಿನ ದಿನಗಳಲ್ಲಿ ದೀಪಿಕಾ ಅವರ ಕಂಟೆಂಟ್ ಕಡಿಮೆ ಎನ್ನುವಂತೆ ಕಾಣುತ್ತಿದೆ.

ಪ್ರಿಯಾಂಕ ಅವರ ಎಲಿಮಿನೇಷನ್ ದಿನ ಕೂಡಾ ಸುದೀಪ್ ಅವರು ಮನೆಯಲ್ಲಿ ಯಾರಿರಬೇಕು ಎಂದು ಪ್ರಿಯಾಂಕ ಹಾಗೂ ದೀಪಿಕಾ ನಡುವೆ ಆಯ್ಕೆ ಕೊಟ್ಟಾಗ, ಮನೆಯ ಎಲ್ಲ ಸದಸ್ಯರು ಪ್ರಿಯಾಂಕ ಎಂದಿದ್ದರು‌. ಇನ್ನು ಭೂಮಿಕಾ ಕಳೆದ ಎಲಿಮಿನೇಷನ್ ಸಮಯದಲ್ಲಿ ಹರೀಶ್ ರಾಜ್ ಮತ್ತು ದೀಪಿಕಾಗಿಂತ ಮೊದಲೇ ಸೇಫ್ ಆಗಿದ್ದವು. ದೀಪಿಕಾ ಕೆಲವೇ ವಾರಗಳ ಹಿಂದೆ ಪಕ್ಕಾ ಫಿನಾಲೇ ಸ್ಪರ್ಧಿ ಎನ್ನುವಂತೆ ಇದ್ದರು. ಆದರೆ ಅನಂತರದ ವಾರಗಳಲ್ಲಿ ಸ್ವಲ್ಪ ತೆರೆ ಮರೆಯಾದರು ಎಂಬಂತೆ ಆಗಿದೆ. ಒಟ್ಟಾರೆ ಈಗ ಊಹಿಸಿರುವ ಪ್ರಕಾರ ಹರೀಶ್ ರಾಜ್, ದೀಪಿಕಾ ದಾಸ್ ಹಾಗೂ ಭೂಮಿ ಶೆಟ್ಟಿ ಈ ಮೂವರಲ್ಲಿ ಒಬ್ಬರು ಮಿಡ್ ವೀಕ್ ಎಲಿಮಿನೇಷನ್ ಮೂಲಕ ಮನೆಯಿಂದ ಹೊರಬರಲಿದ್ದಾರೆ. ಆದರೆ ಯಾರು? ಕಾದು ನೋಡಬೇಕಿದೆ.

Credit :- colors kannada

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here