ಬಿಗ್ ಬಾಸ್ ಕನ್ನಡ ಸೀಸನ್ 7 ರಲ್ಲಿ ಒಂದು ಭಾವನಾತ್ಮಕ ಘಟನೆಯು ನಡೆದು ಎಲ್ಲರ ಗಮನ ಸೆಳೆಯಿತು. ಈ ಬಾರಿ ಬಿಗ್ ಹೌಸ್ ನಲ್ಲಿ ತನ್ನ ಮಾತು ಹಾಗೂ ಧೈರ್ಯದಿಂದಲೇ ಹೆಸರಾಗಿರುವ ಭೂಮಿ ಶೆಟ್ಡಿ ಅವರಿಗೆ ಒಂದು ದೊಡ್ಡ ಸರ್ಪ್ರೈಸ್ ಅನ್ನೇ ನೀಡಿದೆ ಬಿಗ್ ಬಾಸ್ ಶೋ. ನಿನ್ನೆಯ ದಿನ ಭೂಮಿ ಶೆಟ್ಟಿ ಅವರಿಗೆ ಮರೆಯಲಾಗದ ನೆನಪನ್ನು ಉಳಿಸುವ ದಿನವಾದರೆ, ಪ್ರೇಕ್ಷಕರಿಗೆ ಇದೊಂದು ಭಾವನಾತ್ಮಕ ಸಂಚಿಕೆಯಾಗಿತ್ತು ಎಂಬುದು ಕೂಡಾ ನಿಜ. ಇಂತಹ ವಿಶೇಷ ಕ್ಷಣಗಳಿಗೆ ಕಾರಣವಾದುದು ಭೂಮಿ ಶೆಟ್ಟಿ ಅವರನ್ನು ಕಳೆದ ನಾಲ್ಕು ವರ್ಷದಿಂದ ಮಾತನಾಡಿಸದ ಅವರ ಮಾವ ಬಿಗ್ ಬಾಸ್ ಮನೆಗೆ ಬಂದು ಮಾತನಾಡಿಸಿದ್ದಾರೆ ಹಾಗೂ ಉಡುಗೊರೆಯನ್ನು ನೀಡಿದ್ದಾರೆ.

ಭೂಮಿ ಅವರ ಮಾವನಿಗೆ, ಆಕೆ ನಟನಾ ರಂಗ ಅಥವಾ ಆ್ಯಕ್ಟಿಂಗ್ ಫೀಲ್ಡನ್ನು ಪ್ರವೇಶ ಮಾಡುವುದು ಇಷ್ಟವಿರಲಿಲ್ಲ. ಆದರೆ ತನ್ನ ಆಸಕ್ತಿ ನಟನೆ ಎಂದು ಭೂಮಿ ಅವರು ಮಾವನ ಮಾತನ್ನ ಮೀರಿ ಧಾರಾವಾಹಿಯಲ್ಲಿ ನಟಿಸುವ ಮೂಲಕ ನಟನಾ ರಂಗಕ್ಕೆ ಕಾಲಿಟ್ಟೇ ಬಿಟ್ಟರು. ಅದರಿಂದ ಬೇಸರ ಮಾಡಿಕೊಂಡ ಅವರ ಮಾವ ಕಳೆದ ನಾಲ್ಕು ವರ್ಷಗಳಿಂದಲೂ ಕೂಡಾ ಭೂಮಿ ಅವರ ಜೊತೆ ಮಾತನಾಡುತ್ತಿರಲಿಲ್ಲ.‌ ಈ ವಿಷಯವನ್ನು ಶೋನಲ್ಲಿ ಭೂಮಿ ಅವರು ಹೇಳಿ, ಅವರನ್ನು ಕ್ಷಮಾಪಣೆ ಕೇಳಬೇಕು ಎಂದು ಕೂಡಾ ಹೇಳುತ್ತಾ ಕಣ್ಣೀರು ಸುರಿಸಿದ್ದರು. ಭೂಮಿ ಅವರ ಮಾತು ಕೇಳಿದ ಬಿಗ್ ಬಾಸ್ ಭೂಮಿ ಅವರಿಗೆ ಖುಷಿ ನೀಡುವ ಕೆಲಸವನ್ನು ಮಾಡಿದ್ದಾರೆ.

ಬಿಗ್ ಬಾಸ್ ಮನೆಗೆ ಭೂಮಿ ಅವರ ಮಾವನನ್ನು ಕರೆಸಲಾಗಿತ್ತು. ಮೊದಲು ಭೂಮಿ ಅವರ ಮಾವ ಬಂದಿದ್ದಾರೆ ಎಂದಾಗ ನಂಬಲಿಲ್ಲವಾದರೂ, ಎದುರಿಗೆ ಬಂದ ಮಾವನನ್ನು ನೋಡಿ ಭೂಮಿ ಕಣ್ಣೀರಿಟ್ಟಿದ್ದಾರೆ. ಮನೆಗೆ ಬಂದ ಭೂಮಿ ಅವರ ಮಾವ ತಮ್ಮ ಜೊತೆಯಲ್ಲಿ ಭೂಮಿಗಾಗಿ ಅವಳ ಇಷ್ಟದ ಫಿಶ್ ಹಾಗೂ ಹೊಸ ಬಟ್ಟೆಯನ್ನು ತಂದು ಕೊಟ್ಟಿದ್ದಾರೆ. ಅವರ ಮಾವ ನಾಲ್ಕು ವರ್ಷದ ಮನಸ್ತಾಪವನ್ನು ಮರೆತು ಭೂಮಿಯನ್ನು ಮಾತನಾಡಿಸಿ, ತಾವೇ ಅವರಿಗೆ ಕೈತುತ್ತು ತಿನಿಸಿ ಅವರೂ ಕೂಡ ಭಾವುಕರಾಗಿ ಕಣ್ಣೀರಿಟ್ಟ ಭಾವನಾತ್ಮಕ ಘಟನೆಗೆ ನಿನ್ನೆಯ ಸಂಚಿಕೆ ಸಾಕ್ಷಿಯಾಯಿತು.

ಅಲ್ಲದೆ ಅವರು ತನಗೆ ಭೂಮಿ ಮೇಲೆ ಕೋಪ ಏನಿಲ್ಲ, ನಮ್ಮ ಮನೆಯಲ್ಲಿ 30 ಜನರು ಒಟ್ಟಿಗೆ ಇದ್ದು, ನಮ್ಮನ್ನೆಲ್ಲಾ ಬಿಟ್ಟು ಇವಳು ಬೆಂಗಳೂರಿಗೆ ಬಂದದಕ್ಕೇ ಬೇಜಾರಾಗಿತ್ತು ಅಷ್ಟೇ ಎಂದ ಅವರು ಮನೆಯಿಂದ ಹೋಗುವಾಗ , ಯಾರ ಜೊತೆಗೂ ಜಗಳ ಆಡಬೇಡ. ಅಲ್ಲಿ ಮನೆಯಿದೆ ಎಂಬುದು ನೆನಪಿರಲಿ, ಮನೆಯ ಗೌರವ ಉಳಿಯುವಂತೆ ನಡೆದು ಕೋ, ಸೋತರೂ ಪರವಾಗಿಲ್ಲ ಆದರೆ ಎಲ್ಲರೊಂದಿಗೂ ಒಳ್ಳೆಯ ರೀತಿಯಲ್ಲಿ ನಡೆದುಕೊಂಡು ಮುಂದೆ ಹೋಗಬೇಕು ಎಂದು ಸಲಹೆಯನ್ನು ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here