
ನಾಲ್ಕನೇ ವಾರ ಮುಗಿಸಿರುವ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ವಾರ ಕಳೆದಂತೆ ಒಬ್ಬೊಬ್ಬರು ಕಮ್ಮಿಯಾಗುತ್ತಿದ್ದಾರೆ. ಈ ವಾರ ನಾಮಿನೇಟ್ ಆಗಿದ್ದವರು ಚೈತ್ರ ಕೊಟ್ಟೂರು, ಭೂಮಿ ಶೆಟ್ಟಿ, ಚಂದನ್ ಆಚಾರ್, ರಾಜು ತಾಳಿಕೋಟೆ, ದೀಪಿಕಾ ದಾಸ್ , ಪ್ರಿಯಾಂಕ, ಶೈನ್ ಶೆಟ್ಟಿ. ಈ ಏಳು ಮಂದಿ ನಾಮಿನೇಟ್ ಸದಸ್ಯರಲ್ಲಿ ಈಗ ಬಿಗ್ ಹೌಸ್ ನಿಂದ ಹೊರಗೆ ಬಂದಿರುವವರು ಚೈತ್ರ ಕೊಟ್ಟೂರು. ಅಲ್ಲಿಗೆ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಗಿದಿದ್ದು, ನಾಲ್ಕನೇ ಸ್ಪರ್ಧಿ ಮನೆಯಿಂದ ಹೊರ ಬಂದಿದ್ದಾರೆ.
ಹೊರಬರುವಾಗ ಸ್ಪರ್ಧಿಗಳ ಜೊತೆ ಮಾತನಾಡಿದ ಚೈತ್ರ ಕೋಟೂರ್ ಅವರು
ಈ ಮನೆಯಲ್ಲಿ ನನ್ನನ್ನ ಯಾರೂ ಅರ್ಥ ಮಾಡಿಕೊಳ್ಳಲಿಲ್ಲ ಎಂದು ಹೇಳುತ್ತ ಕಣ್ಣೀರು ಸುರಿಸುತ್ತಾ ಚೈತ್ರ ಕೋಟೂರು ಹೊರಗೆ ಬಂದಿದ್ದಾರೆ. ತೆರೆ ಮೇಲೆ ಮಿಂಚುವ ಆಫರ್ ಗಳು ಬಂದಿದ್ದರೂ, ಅದನ್ನ ತಿರಸ್ಕರಿಸಿ ಬರವಣಿಗೆ ಬಗ್ಗೆ ಹೆಚ್ಚು ಗಮನ ಹರಿಸಿದ್ದ ಚೈತ್ರ ಕೋಟೂರು ಅದೃಷ್ಟ ಪರೀಕ್ಷೆಗಾಗಿ ಬಿಗ್ ಬಾಸ್’ ಮನೆಯೊಳಗೆ ಬಂದಿದ್ದರು.
ಆದರೆ ನಾಲ್ಕೇ ವಾರಕ್ಕೆ ಚೈತ್ರ ಕೋಟೂರು ಆಟ ಅಂತ್ಯಗೊಂಡಿದೆ.ಹೊರಬಂದು ಸುದೀಪ್ ಜೊತೆ ಮಾತನಾಡಿದ ಚೈತ್ರ ಕೋಟೂರ್ ನನ್ನ ಅರ್ದ ಸೀರೆಯನ್ನು ನಾನು ಮನೆಯಲ್ಲೇ ಬಿಟ್ಟು ಬಂದಿದ್ದೇನೆ, ಇನ್ನು ಅರ್ದ ಸೀರೆ ನಾನು ಹಾಕಿಕೊಂಡಿದ್ದೇನೆ ಎಂದು ವಿಚಿತ್ರ ಹೇಳಿಕೆ ಕೊಟ್ಟರು. ಚೈತ್ರ ಕೋಟೂರ್ ಈ ಮಾತಿನ ಮರ್ಮ ಏನು ಎಂಬುದು ಅವರಿಗಷ್ಟೇ ಗೊತ್ತು.
ನಾಲ್ಕನೇ ವಾರ ಎಲಿಮಿನೇಟ್ ಆದ ಸದಸ್ಯೆ ಚೈತ್ರಾ ಕೊಟ್ಟೂರ್ ಅವರ ದೊಡ್ಮನೆ ಅನುಭವ ಹೇಗಿತ್ತು? ಅವ್ರೇ ಹೇಳ್ತಿದ್ದಾರೆ ಕೇಳಿ!ಬಿಗ್ಬಾಸ್ | ಪ್ರತಿ ರಾತ್ರಿ 9ಕ್ಕೆ#BBK7 #BiggBoss #ColorsKannada
Colors Kannada यांनी वर पोस्ट केले रविवार, १० नोव्हेंबर, २०१९
ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.