ಬಿಗ್ ಬಾಸ್ ಆರನೇ ಸೀಸನ್ ಆರಂಭವಾಗಿದೆ. ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡುವ ಕನ್ನಡದ ಜನಪ್ರಿಯ ಕಾರ್ಯಕ್ರಮದ ಮೊದಲ ಅತಿಥಿಯಾಗಿ ಉತ್ತರ ಕರ್ನಾಟಕದ ಹುಡುಗಿ ಸೋನು ಪಾಟೀಲ್ ಅವರು ಪ್ರವೇಶ ಪಡೆದಿದ್ದಾರೆ.‌ಹಲವು ಕಿರುಚಿತ್ರಗಳಲ್ಲಿ‌ ನಟಿಸುತ್ತಿರು ಸೋನು ಪಾಟೀಲ್ ನೋಡಲು ಚುರುಕಾಗಿದ್ದಾರೆ. ಎರಡನೇ ಸ್ಪರ್ಧಿ ಹೆಸರು ಆ್ಯಂಡ್ರೂ ಜಯಪಾಲ್ ಇವರು 150 ಕೆ ಜಿ ಇರುವುದೇ ಇವರ ಹೈಲೈಟ್. ಮೂರನೇ ಸ್ಪರ್ಧಿ ಕನ್ನಡದ ಜನಪ್ರಿಯ ಕಿರುತೆರೆ ನಟಿ ಮತ್ತು ನಿರೂಪಕಿ ಜಯಶ್ರೀ. ಮಾಯಾಮೃಗ ಸೇರಿದಂತೆ ಹಲವು ಯಶಸ್ವಿ ಧಾರಾವಾಹಿಯ ಮೂಲಕ ಮನೆಮಾತಾದ ಜಯಶ್ರೀ ಬಿಗ್ ಬಾಸ್ ಮನೆಯ ಮೂರನೆ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ. ಇನ್ನು ಬಿಗ್ ಬಾಸ್ ಮನೆಯ ನಾಲ್ಕನೇ ಸ್ಪರ್ಧಿ m.j. ರಾಕೇಶ್. ಮೂಲತಃ ರಾಜಸ್ಥಾನದವಾರಾದ ರಾಕೇಶ್ ಬೆಂಗಳೂರಿನ ರೇಡಿಯೋ‌ ಒಂದರಲ್ಲಿ‌ RJ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.‌

ಬಿಗ್ ಬಾಸ್ ಮನೆಯ ಐದನೇ ಸ್ಪರ್ಧಿಯಾಗಿ ಒಗ್ಗರಣೆ ಡಬ್ಬಿ ಕಾರ್ಯಕ್ರಮದ ಮೂಲಕ ಮನೆಮಾತಾದ ಮುರಳಿ ಅವರು ಎಂಟ್ರಿ ಕೊಟ್ಟಿದ್ದಾರೆ. ಖಾಸಗಿ ಕಾರ್ಯಕ್ರಮದ ಮೂಲಕ ಮನೆಮಾತಾದ ಮುರಳಿ ಅವರು ಬಿಗ್ ಬಾಸ್ ಮನೆಗೆ ಐದನೇ ಸ್ಪರ್ಧಿಯಾಗಿ ಎಂಟ್ರಿ‌ ಕೊಟ್ಟಿದ್ದಾರೆ.
ಬಿಗ್ ಬಾಸ್ ಮನೆಯ ಆರನೇ ಸ್ಪರ್ಧಿಯಾಗಿ ರಂಗಭೂಮಿ ಕಲಾವಿದೆ ಹಾಗೂ ಚಲನಚಿತ್ರ ನಟಿ ಪಾಂಡವಪುರ ತಾಲ್ಲೂಕಿನ ಅಕ್ಷತಾ ಪಾಂಡವಪುರ ಎಂಟ್ರಿ ಕೊಟ್ಟಿದ್ದಾರೆ.

ಬಿಗ್ ಬಾಸ್ ಮನೆಯ ಏಳನೇ ಸ್ಪರ್ಧಿಯಾಗಿ ಮಂಗಳೂರು ಮೂಲದ ರಕ್ಷಿತ ರೈ ಅವರು‌ ಎಂಟ್ರಿ ಕೊಟ್ಟಿದ್ದಾರೆ. ಕ್ರಿಕೆಟರ್ ಆಗಿರುವ ರಕ್ಷಿತ್ ರೈ ಅವರು ಬಿಗ್ ಬಾಸ್ ಮನೆಗೆ ಏಳನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ‌.ಬಿಗ್ ಬಾಸ್ ಮನೆಗೆ ಎಂಟನೇ ಸ್ಪರ್ಧಿಯಾಗಿ ಮಾತಿನ ಮಲ್ಲಿ ಎಂದೇ ಖ್ಯಾತಿಯಾದ ರೇಡಿಯೋ ಜಾಕಿ , ವಿವಾದಾತ್ಮಕದಲ್ಲೂ ಹೆಸರು ಮಾಡಿದ ರಾಪಿಡ್ ರಶ್ಮಿ ಕಾಲಿಟ್ಟಿದ್ದಾರೆ.

ಇನ್ನು ಬಿಗ್ ಬಾಸ್ ಮನೆಯ ಒಂಭತ್ತನೇ ಸ್ಪರ್ಧಿಯಾಗಿ ತೃತೀಯ ಲಿಂಗಿಯಾದ  ಆಡಮ್  ಪಾಶಾ ಕಾಲಿಟ್ಟಿದ್ದಾರೆ. ಆಡಮ್ ಪಾಶಾ ಮೂಲತಃ ಡಾನ್ಸರ್ ಆಗಿದ್ದಾರೆ.  ಅವರು ಚೆನೈ ಮೂಲದವರಾದರು ಸಹ ಕನ್ನಡ ಚೆನ್ನಾಗಿ ಮಾತಾಡಬಲ್ಲರು.

ಹತ್ತನೇ ಸ್ಪರ್ಧಿಯಾಗಿ ಕವಿತಾ ಚಿನ್ನು ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಮನೆಮಾತಾದ ಕವಿತಾ ಶ್ರೀನಿವಾಸ ಕಲ್ಯಾಣ ಎಂಬ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here