ಬಿಗ್ ಬಾಸ್ ಸೀಸನ್ ಏಳು ಮನರಂಜನೆ ನೀಡುತ್ತಾ ಮುಂದೆ ಸಾಗಿದೆ. ಪ್ರತಿ ದಿನ ಒಂದಲ್ಲಾ ಒಂದು ವಿಶೇಷ ನೋಡಲು ಸಿಗುತ್ತಿದೆ. ಈಗಾಗಲೇ ಏಳು ಯಶಸ್ವಿ ವಾರಗಳನ್ನು ಮುಗಿಸಿ, ಎಂಟನೇ ವಾರಕ್ಕೆ ಅಡಿಯಿಟ್ಟಿದೆ ಬಿಗ್ ಬಾಸ್‌. ಎಂಟನೇ ವಾರಕ್ಕೆ ಕಾಲಿಟ್ಟರೂ ಕೂಡಾ ಎಲ್ಲೂ ಬೋರ್ ಹೊಡೆಸದೆ ವಾರದಿಂದ ವಾರಕ್ಕೆ ಮನರಂಜನೆಯ ಮಟ್ಟವನ್ನು ಕೂಡಾ ಹೆಚ್ಚಿಸಿದೆ ಈ ಬಿಗ್ ಬಾಸ್ ಸೀಸನ್. ಮನೆಯೊಳಗೆ ಇರುವ ಸ್ಪರ್ಧಿಗಳಲ್ಲಿ ಕೆಲವರಂತೂ ಈಗಾಗಲೇ ಸಾಕಷ್ಟು ಯಶಸ್ವಿಯಾಗಿ ಮುನ್ನುಗುತ್ತಿದ್ದು, ಜನರ ಓಟುಗಳನ್ನು ಕೂಡಾ ಭರ್ಜರಿಯಾಗಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಗ್ ಬಾಸ್ ನ ಇವತ್ತಿನ ಎಪಿಸೋಡ್ ನ ಹೈಲೈಟ್ ಸೀನ್ ಗಳನ್ನು ವಾಹಿನಿ ಹಂಚಿಕೊಂಡಿದ್ದು, ಅದು ಎಲ್ಲರ ಗಮನವನ್ನು ಸೆಳೆದಿದೆ‌. ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಪ್ರಿಯಾಂಕ ಅವರು ಹಾಡು ಹೇಳುತ್ತಿರುವುದನ್ನು ನಾವು ನೋಡಬಹುದು. ಹಾಡಿನ ಜೊತೆಗೆ ಅಲ್ಲಿ ಮತ್ತೊಂದು ವಿಶೇಷ ಇದೆ. ಏನು ಆ ವಿಶೇಷ ಎಂದರೆ, ಪ್ರಿಯಾಂಕ ಅವರು ಹಾಡುಗಳನ್ನು ಹಾಡುವಾಗ ಮನೆಯಲ್ಲಿರುವ ಹುಡುಗರು ಡಾನ್ಸ್ ಮಾಡಬೇಕು. ಪ್ರಿಯಾಂಕ ಅವರ ಧ್ವನಿ ನಿಂತಾಗ ಮಾತ್ರವೇ ಡಾನ್ಸ್ ನಿಲ್ಲಬೇಕು ಎಂಬುದು ಕೂಡಾ ವಿಶೇಷ.

ಇದಕ್ಕಾಗಿ ಪ್ರಿಯಾಂಕ ಹಾಡುವಾಗ ಮನೆಯಲ್ಲಿರುವ ಹುಡುಗರಾದ ವಾಸುಕಿ ವೈಭವ್, ಚಂದನ್ ಆಚಾರ್ ,ಶೈನ್, ಹಾಗೂ ಕುರಿ ಪ್ರತಾಪ್ ಎಲ್ಲರೂ ಡಾನ್ಸ್ ಮಾಡಿದ್ದಾರೆ. ಇಲ್ಲಿರುವ ಇನ್ನೊಂದು ಕುತೂಹಲಕಾರಿ ವಿಷಯ ಏನೆಂದರೆ ಹುಡುಗರು ಹುಡುಗಿಯರಂತೆ ಡಾನ್ಸ್ ಮಾಡುವುದು. ಶೈನ್ ಶೆಟ್ರು ಹುಡುಗಿ ಗೆಟಪ್ ನಲ್ಲಿ ಸಖತ್ ಮಿಂಚಿದ್ದಾರೆ. ಅವರ ಮತ್ತೊಂದು ಹೊಸ ರೂಪ ಇಂದು ಕಂಡಿದೆ. ಹುಡುಗಿಯರ ಹಾಗೆ ಎಲ್ಲಾ ಹುಡುಗರು ಚೆನ್ನಾಗಿ ಕುಣಿಯುತ್ತಿರುವುದು ಪ್ರೋಮೋದಲ್ಲಿ ಕಂಡು ಬರುತ್ತಿದೆ. ಇನ್ನು ಈ ಸಿಂಗಿಂಗ್ ಮತ್ತು ಡಾನ್ಸಿಂಗ್ ನ ಮಜಾ ಪಡೆಯಲು ಇವತ್ತಿನ ಎಪಿಸೋಡನ್ನು ಮಿಸ್ ಮಾಡೋ ಹಾಗಿಲ್ಲ.

Photos credit :- colors kannada

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here