ಈ ಬಾರಿ ಬಿಗ್ ಬಾಸ್ ಸೀಸನ್ 7 ರಲ್ಲಿ ಮನೆಯೊಳಗೆ ಇರುವ ಸ್ಪರ್ಧಿಗಳನ್ನು ಭೇಟಿ ಮಾಡಲು ಆಗಾಗ ಅವರ ಕುಟುಂಬದವರು ಭೇಟಿ ನೀಡಿದ್ದನ್ನು ನಾವು ಗಮನಿಸಿದ್ದೇವೆ. ಕೆಲವು ದಿನಗಳ ಹಿಂದೆ ಭೂಮಿ ಶೆಟ್ಟಿ ಅವರ ಮಾವ, ಕಳೆದೆರಡು ದಿನಗಳ ಹಿಂದೆ ಚಂದನಾ ಅವರ ತಾಯಿ ಮನೆಯೊಳಗೆ ಬಂದಿದ್ದರು. ಭೂಮಿ ಶೆಟ್ಟಿ ತಮ್ಮ ಮಾವನನ್ನು ನೋಡಿ ಕಣ್ಣೀರು ಸುರಿಸಿದ್ದರು. ಮೊನ್ನೆ ಚಂದನಾ ಕೂಡಾ ತಮ್ಮ ತಾಯಿಯನ್ನು ನೋಡಿ ಸಿಕ್ಕಾಪಟ್ಟೆ ಅತ್ತು ಸುರಿದು, ತಾಯಿಯನ್ನು ಅಪ್ಪಿ ಕೊಂಡಿದ್ದು ಕೂಡಾ ಎಲ್ಲರೂ ನೋಡಿದ್ದರು. ಈಗ ಇವರೆಲ್ಲರ ನಂತರ ಬಿಗ್ ಹೌಸ್ ನಲ್ಲಿ ಸಾಕಷ್ಟು ಹೆಸರು ಮಾಡಿರುವ ದೀಪಿಕಾ ದಾಸ್ ಅವರ ತಾಯಿ ಮನೆಯೊಳಗೆ ಭೇಟಿ ನೀಡಿದ್ದರು.

ದೀಪಿಕಾ ದಾಸ್ ಅವರ ತಾಯಿ ಮನೆಯೊಳಗೆ ಬಂದಾಗ ಅಲ್ಲಿ ಏನೇನು ನಡೆಯಬಹುದೆಂಬ ನಿರೀಕ್ಷೆಗಳು ಸಿಕ್ಕಾಪಟ್ಟೆ ಇದ್ದವು. ಪದ್ಮಾ ಅವರು ಮನೆಯೊಳಗೆ ಬಂದಾಗ, ಮಗಳನ್ನು ನೋಡಿ ಅವರೇ ಅತ್ತರು. ಮಗಳಿಗಾಗಿ ತಮ್ಮ ಕೈಯಲ್ಲಿ ಮಗಳ ಇಷ್ಟದ ತಿಂಡಿಯ ಬಾಕ್ಸ್ ಹಿಡಿದು ಬಂದಿದ್ದರು. ಅವರು ಮಗಳನ್ನು ತಬ್ಬಿ ಅಳುವಾಗ, ಶೈನ್ ಅವರಿಗೆ ಏನನಿಸಿತೋ ಗೊತ್ತಿಲ್ಲ, ಅವರ ಸಹಾಯಕ್ಕೆ ಮುಂದೆ ಹೋದ ಶೈನ್ ಕೈಲಿದ್ದ ಬಾಕ್ಸ್ ನೀಡುವಂತೆ ಕೇಳಿದಾಗ ಅವರಿಗೆ ಶಾಕ್ ಕಾದಿತ್ತು. ದೀಪಿಕಾ ಅವರ ತಾಯಿ ಸ್ವಲ್ಪ ಗಟ್ಟಿಯಾಗಿಯೇ, ಬಿಡಿ ಎಂದು ಹೇಳಿ ಬಾಕ್ಸ್ ಶೈನ್ ಅವರಿಗೆ ನೀಡಲು ನಿರಾಕರಣೆ ಮಾಡಿದರು.

ಶೈನ್ ಇಂತಹುದೊಂದು ಪ್ರತಿಕ್ರಿಯೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಆದರೂ ಶೈನ್ ಪದ್ಮಾ ಅವರ ಪ್ರತಿಕ್ರಿಯೆಯಿಂದ ವಿಚಲಿತರಾಗದೇ, ತಮ್ಮ ಭಾವನೆಗಳನ್ನು ಮುಖದಲ್ಲಿ ತೋರಿಸಿಕೊಳ್ಳದೆ ಟಾಸ್ಕ್ ಮುಗಿಸಿದರು. ದೀಪಿಕಾ ಅವರ ತಾಯಿ ಶೈನ್ ಅವರ ಜೊತೆ ಹೆಚ್ಚಾಗಿ ಏನೂ ಮಾತನಾಡಲಿಲ್ಲ.‌ ಬದಲಿಗೆ ಮಗಳಿಗೆ ಮರ್ಯಾದೆ ಕಾಪಾಡುವ ಬಗ್ಗೆ, ಪರೋಕ್ಷವಾಗಿ ಶೈನ್ ಬಗ್ಗೆ ಹೆಚ್ಚು ಮಾತನಾಡಿದರು. ಇನ್ನು ದೀಪಿಕಾ ಇದೆಲ್ಲಾ ತಮಾಷೆಯಷ್ಟೇ ಎಂದು ತಮ್ಮ ತಾಯಿಗೆ ಬಹಳಷ್ಟು ಸಮಜಾಯಿಷಿ ನೀಡಿದ್ದು ಕೂಡಾ ಹೌದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here