ಕೆಲವು ದಿನಗಳ ಹಿಂದೆಯಷ್ಟೇ ಬಿಗ್ ಬಾಸ್ ಖ್ಯಾತಿಯ ಹುಚ್ಚ ವೆಂಕಟ್ ಅವರ ಗಲಾಟೆಗಳ ವಿಡಿಯೋಗಳು, ಚೆನ್ನೈನಲ್ಲಿ ಅಲೆದಾಡುತ್ತಿದ್ದ ದೃಶ್ಯಗಳು ಮಾದ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದೆಲ್ಲದರ ನಂತರ ಈಗ ಹುಚ್ಚ ವೆಂಕಟ್ ಅವರು ತಾನು ಮೊದಲಿನಂತೆ ಚಿತ್ರರಂಗದಲ್ಲಿ ಕ್ರಿಯಾಶೀಲನಾಗಬೇಕು ಎಂದು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಇಂದು ಹುಚ್ಚ ವೆಂಕಟೇಶ್ ಅವರು ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಾ ಇತ್ತೀಚಿಗೆ ಜನರು ನನ್ನ ನೋಡಿ ಭಯ ಪಡುತ್ತಿದ್ದಾರೆ. ಆದರೆ ಆ ರೀತಿ ಮಾಡಬೇಡಿ. ಈಗಾಗಲೇ ನಡೆದು ಹೋಗಿರುವ ಮತ್ತು ಹಳೆಯ ವಿಷಯಗಳನ್ನು ನಾನು ಮತ್ತೆ ಹೊರ ತೆಗೆಯಲು ಇಷ್ಟ ಪಡುವುದಿಲ್ಲ ಎಂದಿದ್ದಾರೆ.

ಅಭಿಮಾನಿಗಳಿಗೆ ತನ್ನನ್ನು ನೋಡಿ ಭಯ ಪಡಬೇಡಿ ಎಂದಿದ್ದು, ನಾನು ಸುಮ್ಮನೆ ಗಲಾಟೆ ಮಾಡುವವನಲ್ಲ, ಕೆಟ್ಟವರಿಗೆ ನಾನು ಕೆಟ್ಟವನು ಹಾಗೂ ಒಳ್ಳೆಯವರಿಗೆ ನಾನು ಒಳ್ಳೆಯವನು ಎಂದು ಹೇಳಿದ್ದಾರೆ. ನನ್ನ ನೋವನ್ನು ಕಿಚ್ಚ ಸುದೀಪ್ ಅವರು ಅರ್ಥ ಮಾಡಿಕೊಂಡರುವರು ಎನ್ನುತ್ತಾ ಮತ್ತೊಮ್ಮೆ ಬಿಗ್​ಬಾಸ್​ಗೆ ಹೋಗುವ ಆಸೆ ಕೂಡಾ ನನಗಿದೆಯೆಂದು ತಿಳಿಸಿದ್ದಾರೆ. ಮತ್ತೆ ಬಿಗ್ ಬಾಸ್ ಗೆ ಹೋಗುವ ಅವಕಾಶ ಸಿಕ್ಕರೆ ನಾನಲ್ಲಿ ಮತ್ತೆ ಗಲಾಟೆ ಮಾಡುವುದಿಲ್ಲ, ಬದಲಿಗೆ ಜನರನ್ನು ರಂಜಿಸುವ ಕೆಲಸ ಮಾಡುವೆ ಎಂದು ಹೇಳಿದ್ದಾರೆ.

ಸಿನಿಮಾಗಳಲ್ಲಿ ನಟಿಸಲು ಬಯಸಿದ್ದು, ಬೇರೆ ಬ್ಯಾನರ್ ಗಳಲ್ಲಿ ಅವಕಾಶ ಸಿಕ್ಕರೆ ನಟಿಸುವೆ, ತಿಳಿಸಿ ಎಂದು ಮನವಿ ಮಾಡಿದ್ದಾರೆ. ಅಲ್ಲದೆ ಯಾವುದಾದರೂ ರಿಯಾಲಿಟಿ ಶೋಗಳಿಗೆ ಸ್ಪರ್ಧಿಯಾಗಿ ಅಥವಾ ಜಡ್ಜ್ ಆಗಿ ಹೋಗುವ ಆಸೆ ಕೂಡಾ ತನಗಿದೆ ಎಂದಿದ್ದಾರೆ. ಇನ್ನು ಚೆನ್ನೈನಲ್ಲಿ ಅಲೆದಾಡಿದ ಬಗ್ಗೆ ಅವರು ಪ್ರತಿಕ್ರಿಯೆ ನೀಡುತ್ತಾ, ಶೂಟಿಂಗ್ ಎಂದು ಅಲ್ಲಿಗೆ ಹೋದಾಗ ನನ್ನ ಪರ್ಸ್ ಕಳುವಾಗಿತ್ತು ಎಂದಿದ್ದಾರೆ. ಅಪ್ಪ ಶೂಟಿಂಗ್ ಗೆ ಹಣ ನೀಡಲಿಲ್ಲವೆಂಬ ಅವರ ಮೇಲಿನ ಕೋಪಕ್ಕೆ ಕಾರಿನ ಗಾಜು ಒಡೆದೆ ಎಂದು ಹೇಳುತ್ತಾ, ಇನ್ನು ಮುಂದೆ ನಾನು ಹಣ ಗಳಿಸಬೇಕು ಎಂದು ಹೇಳಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here