ಬಿಗ್ ಬಾಸ್ ಆರಂಭವಾದಾಗಿನಿಂದ ಇದುವರೆವಿಗೂ ಬಿಗ್ ಬಾಸ್ ನ ಸೀಸನ್ ಗಳ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಿರೂಪಕ ಎಂದರೆ ಅದು ಬಾಲಿವುಡ್ ನಟ ಸಲ್ಮಾನ್ ಖಾನ್. ಈಗ ಬಿಗ್ ಬಾಸ್ ನ 13ನೇ ಆವೃತ್ತಿ ಆರಂಭವಾಗಿದ್ದು, ಅದರ ನಿರೂಪಣೆಯ ಜವಾಬ್ದಾರಿ ವಹಿಸಿರುವ ಸಲ್ಮಾನ್ ಖಾನ್ ಅವರು ಒಂದು ವಾರಕ್ಕೆ 31 ಕೋಟಿ ಸಂಭಾವನೆ ಪಡೆಯುವರು ಎಂದು ಹೇಳಲಾಗಿದೆ. ಅಂದರೆ ಪೂರ್ತಿ ಸೀಸನ್ ಮುಗಿಯೋ ವೇಳೆಗೆ ಅಂದರೆ ಒಟ್ಟು ಹದಿಮೂರು ವಾರ ಸಲ್ಲು ನಿರೂಪಣೆ ಮಾಡುತ್ತಿದ್ದು, ಆ ವೇಳೆಗೆ ಅವರಿಗೆ ಸಿಗುವ ಸಂಭಾವನೆ 400 ಕೋಟಿ ಎಂದು ಅಂದಾಜು ಮಾಡಲಾಗಿದೆ.

 

ಈ ವಿಷಯ ಕೇಳಿದ ಮೇಲೆ ಸ್ವಾಭಾವಿಕವಾಗಿಯೇ ಕನ್ನಡದಲ್ಲಿ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ನಿರೂಪಣೆಗೆ ಎಷ್ಟು ಸಂಭಾವನೆ ಪಡೆಯುವರು ಎಂಬ ಕುತೂಹಲ ಮೂಡುತ್ತದೆ. ಇಲ್ಲಿ ಒಂದಂತೂ ನಿಜ ಅದೇನೆಂದರೆ ಸುದೀಪ್ ಅವರು ಕೂಡಾ ತಮ್ಮ ನಿರೂಪಣೆಗಾಗಿ ದುಬಾರಿ ಸಂಭಾವನೆಯನ್ನು ಪಡೆಯುತ್ತಾರೆ ಎಂಬ ಮಾಹಿತಿ ಇದ್ದು, ಅಧಿಕೃತವಾಗಿ ಇದು ಎಲ್ಲೂ ಚರ್ಚೆ ನಡೆದಿಲ್ಲವಾದರೂ, ದುಬಾರಿ ಸಂಭಾವನೆ ಪಡೆಯುವುದಂತೂ ವಾಸ್ತವ ಎಂಬುದನ್ನು ಯಾರೂ ನಿರಾಕರಿಸುವಂತಿಲ್ಲ.

ವರದಿಗಳ ಪ್ರಕಾರ ಕಿಚ್ಚ ಸುದೀಪ್ ಅವರು ನಿರೂಪಣೆಗಾಗಿ, ಬಿಗ್ ಬಾಸ್ ಜೊತೆ ಐದು ವರ್ಷಗಳ ಅಂಗ್ರಿಮೆಂಟ್ ಮಾಡಿಕೊಂಡಿದ್ದು. ಐದು ಆವೃತ್ತಿಗಳ ನಿರೂಪಣೆಗಾಗಿ ಸುದೀಪ್ ದೊಡ್ಡ ಮೊತ್ತವನ್ನು ಪಡೆದಿದ್ದಾರೆ ಎನ್ನಲಾಗಿದೆ. ಬಲ್ಲ ಮೂಲಗಳ ಪ್ರಕಾರ ಅವರು ಐದು ಆವೃತ್ತಿಗಾಗಿ 20 ಕೋಟಿ ರೂಪಾಯಿಗಳ ಸಂಭಾವನೆಯನ್ನು ಸ್ವೀಕರಸಿದ್ದಾರೆ ಎನ್ನಲಾಗಿದೆ. ಐದು ಆವೃತ್ತಿಗೆ 20 ಕೋಟಿ ಎಂದರೆ ಒಂದು ಆವೃತ್ತಿಗೆ 4 ಕೋಟಿ ಎಂದಾಗುತ್ತದೆ. ಇನ್ನು ಈಗಾಗಲೇ ಆರು ಆವೃತ್ತಿಗಳನ್ನು ಮುಗಿಸಿರುವ ಸುದೀಪ್ ಅವರ ಡೀಲ್ 2020 ಕ್ಕೆ ಮುಗಿಯಲಿದ್ದು, ಅದಾದ ಮೇಲೆ ಅವರ ಸಂಭಾವನೆ ಕೂಡಾ ಮತ್ತಷ್ಟು ಹೆಚ್ಚಾಗಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here