ಬಿಗ್ ಬಾಸ್ ಸೀಸನ್ 7 ರಲ್ಲಿ ಈ ವಾರ ಕೊಟ್ಟಂತಹ ಟಾಸ್ಕ್ ಒಂದರಲ್ಲಿ ತಮ್ಮ ಟಾರ್ಗೆಟ್ ಯಾರು ಎಂಬ ವಿಷಯದಲ್ಲಿ ನಾಲ್ವರು, ತಮ್ಮ ಟಾರ್ಗೆಟ್ ಶೈನ್ ಶೆಟ್ಟಿ ಮತ್ತು ವಾಸುಕಿ ವೈಭವ್ ಎಂದು ಹೇಳಿದ್ದಾರೆ. ಬಿಗ್ ಹೌಸ್ ನಲ್ಲಿರುವ ಸದಸ್ಯರಲ್ಲಿ ತಮಗೆ ಪ್ರಬಲ ಸ್ಪರ್ಧೆಯನ್ನು ನೀಡುವ ಸ್ಪರ್ಧಿ ಯಾರು? ಎಂಬರ್ಥದಲ್ಲಿ ನೀವು ಯಾರನ್ನು ಟಾರ್ಗೆಟ್ ಮಾಡುವಿರಿ ತಿಳಿಸಿ ಎನ್ನುವ ಟಾಸ್ಕ್ ಒಂದನ್ನು ನೀಡಲಾಗಿತ್ತು. ಇದರ ಪ್ರಕಾರ ಮನೆಯ ಸ್ಪರ್ಧಿಗಳು ತಮ್ಮ ಪ್ರಬಲ ಪ್ರತಿಸ್ಪರ್ಧಿ, ತಮ್ಮ ಟಾರ್ಗೆಟ್ ಎಂದು ಯಾರ ಹೆಸರು ಹೇಳುವರೋ, ಅವರ ಮುಖದ ಮೇಲೆ ಕೆಂಪು ಬಣ್ಣದಿಂದ ಮಾರ್ಕ್ ಮಾಡಬೇಕು.

ಈ ಸಂದರ್ಭದಲ್ಲಿ ವಾಸುಕಿ ವೈಭವ್, ಹರೀಶ್ ರಾಜ್ ,ಕುರಿ ಪ್ರತಾಪ್ ಮತ್ತು ಕಿಶನ್ ಈ ನಾಲ್ವರು ಕೂಡಾ ತಮ್ಮ ಟಾರ್ಗೆಟ್ ಶೈನ್ ಶೆಟ್ಟಿ ಎಂದು ಹೇಳಿದ್ದಾರೆ. ಗೇಮ್ ನಲ್ಲಿ, ಬುದ್ದಿಯಲ್ಲಿ, ಯೋಜನೆ ಮಾಡುವುದರಲ್ಲಿ ಹೀಗೆ ಹಲವು ವಿಚಾರಗಳಲ್ಲಿ ಶೈನ್ ಮುಂದೆ ಇರುವುದರಿಂದ ಅವರೇ ನಮ್ಮ ಪ್ರಬಲ ಎದುರಾಳಿ ಮತ್ತು ಈ ವಾರ ಅವರೇ ನಮ್ಮ ಟಾರ್ಗೆಟ್ ಎಂದು ಕಾರಣವನ್ನು ನೀಡಿದ್ದಾರೆ. ಅದೇ ರೀತಿ ಚಂದನ್ ಆಚಾರ್, ಪ್ರಿಯಾಂಕ, ಶೈನ್ ಮತ್ತು ಭೂಮಿ ಅವರು ತಮ್ಮ ಟಾರ್ಗೆಟ್ ವಾಸುಕಿ ವೈಭವ್ ಎಂದು ಹೇಳಿದ್ದಾರೆ. ನಾಗಿಣಿ ದೀಪಿಕಾ ದಾಸ್ ಅವರ ಕುರಿ ಪ್ರತಾಪ್ ಅವರನ್ನು ಟಾರ್ಗೆಟ್ ಎಂದಿದ್ದಾರೆ.

ಚಂದನಾ ಅವರು ತಮ್ಮ ಟಾರ್ಗೆಟ್ ಭೂಮಿ ಶೆಟ್ಟಿ ಎಂದು ಹೇಳಿದ್ದಾರೆ. ಹೀಗೆ ಮನೆಯಲ್ಲಿ ತಮ್ಮ ಪ್ರಬಲ ಪ್ರತಿಸ್ಪರ್ಧಿಗಳು ಯಾರೆಂಬುದನ್ನು ಸದಸ್ಯರು, ತಮ್ಮ ಪ್ರತಿಸ್ಪರ್ಧಿ ಮುಖದ ಮೇಲೆ ಕೆಂಪು ಮಾರ್ಕನ್ನು ಹಾಕಿದರು‌. ಇನ್ನು ಈ ವಾರದ ನಾಮಿನೇಷನ್ ಪ್ರಕ್ರಿಯೆ ಕೂಡಾ ಪೂರ್ಣಗೊಂಡಿದ್ದು ವಾರಾಂತ್ಯದ ಎಲಿಮಿನೇಷನ್ ಗೆ ಕಿಶನ್, ಹರೀಶ್ ರಾಜ್, ಚಂದನಾ, ದೀಪಿಕಾ ದಾಸ್ ಮತ್ತು ಚಂದನ್ ಆಚಾರ್ ಅವರು ನಾಮಿನೇಟ್ ಆಗಿದ್ದು ಇವರಲ್ಲಿ ಯಾರು ಈ ವಾರಾಂತ್ಯದಲ್ಲಿ ಮನೆಯಿಂದ ಹೊರ ಬರಲಿದ್ದಾರೆ ಎಂದು ಕಾದು ನೋಡಬೇಕು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here