ಬಿಗ್ ಬಾಸ್ ಮನೆಯಲ್ಲೊಂದು ಹೊಸ ವಿಶೇಷ ಕಂಡು ಬಂದಿದೆ. 10ನೇ ವಾರದಲ್ಲಿ ಇಂತಹುದೊಂದು ವಿಶೇಷವನ್ನು ನೋಡಲು ಸಿಕ್ಕಿರುವುದು ಹಲವರಲ್ಲಿ ಕುತೂಹಲವನ್ನು ಮೂಡಿಸಿದೆ. ಟಾಸ್ಕ್ ಗಾಗಿ ಮನೆಯ ಸದಸ್ಯರನ್ನು ಜೋಡಿಗಳನ್ನಾಗಿ ಮಾಡಲಾಗಿದೆ. ಈ ಜೋಡಿಗಳ ನಡುವೆ ಒಂದು ಜೋಡಿ ಮಾತ್ರ ವಿಶೇಷ ಎನಿಸಿದ್ದು, ಈ ನವ ಜೋಡಿಯ ಆತ್ಮೀಯತೆ, ಅವರ ನಡುವಿನ ಒಡನಾಟವನ್ನು ಮನೆಉ ಕ್ಯಾಪ್ಟನ್ ಕೂಡಾ ಕಣ್ತುಂಬ ನೋಡಿ ಆನಂದಿಸಿದ್ದಾರೆ. ಬಿಗ್ ಬಾಸ್ ನ ಸೂಚನೆಯಂತೆ ಮನೆಯಲ್ಲಿ ಶೈನ್ ಚೈತ್ರಾ ಕೊಟ್ಟೂರು, ದೀಪಿಕಾ ಚಂದನ್ ಆಚಾರ್, ಕುರಿ ಪ್ರತಾಪ್ ಚಂದನ, ಕಿಶನ್ ಪ್ರಿಯಾಂಕ ಹಾಗೂ ಹರೀಶ್ ರಾಜ್ ಭೂಮಿ ಟಾಸ್ಕ್ ಗಾಗಿ ಜೋಡಿಗಳಾಗಿದ್ದಾರೆ. ಇನ್ನು ವಾಸುಕಿ ವೈಭವ್ ಅವರು ಮನೆಯ ಕ್ಯಾಪ್ಟನ್ ಆಗಿ ತಮ್ಮ ಕಾರ್ಯಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ.

ಮತ್ತೊಂದು ವಿಶೇಷ ಏನೆಂದರೆ ಈ ವಾರದ ಟಾಸ್ಕ್ ಗಳಲ್ಲಿ ಗೆದ್ದವರಿಗೆ ಬಹುಮಾನ ಕೂಡಾ ಇರುವುದರಿಂದ ಎಲ್ಲರೂ ಟಾಸ್ಕನ್ನು ಬಹಳ ಚೆನ್ನಾಗಿ ಮಾಡಲು ಸಜ್ಜಾಗಿದ್ದಾರೆ. ಜೋಡಿಗಳನ್ನು ಮಾಡಿದ ಮೇಲೆ ಮನೆಯಲ್ಲಿ ಈಗ ಶೈನ್ ಮತ್ತು ಚೈತ್ರ ಕೊಟ್ಟೂರು ಅವರ ಜೋಡಿ ಸಾಕಷ್ಟು ಗಮನ ಸೆಳೆದಿದೆ. ಇಷ್ಟು ದಿನ ದೀಪಿಕಾ ಹಿಂದೆ ಹಾಡುಗಳನ್ನು ಹೇಳುತ್ತಾ ಸುತ್ತುತ್ತಿದ್ದ ಶೈನ್ ಈಗ ಹೊಸ ಜೋಡಿ ಸಿಕ್ಕ ಮೇಲೆ ಚೈತ್ರ ಕೊಟ್ಟೂರು ಅವರೊಡನೆ ಬಹಳ ಆತ್ಮೀಯರಾಗಿ ಬಿಟ್ಟಿದ್ದಾರೆ. ಶೈನ್ ಚೈತ್ರ ಅವರಿಗಾಗಿ ಹಾಡುಗಳನ್ನು ಹಾಡುತ್ತಿದ್ದಾರೆ.

ಬಗೆ ಬಗೆಯ ಹಾಡುಗಳ ಮೂಲಕ ಚೈತ್ರ ಕೊಟ್ಟೂರು ಅವರನ್ನು ವರ್ಣಿಸುತ್ತಾ ಶೈನ್ ಭರ್ಜರಿ ಮನರಂಜನೆಯನ್ನು ನೀಡುತ್ತಿದ್ದಾರೆ. ವಾಸುಕಿ ಶೈನ್ ಮತ್ತು ಚೈತ್ರ ನಡುವಿನ ಆತ್ಮೀಯತೆಯನ್ನು ನೋಡುತ್ತಾ, ಅದನ್ನು ಕಣ್ತುಂಬಿ ಕೊಂಡಿದ್ದಾರೆ. ವಿಷಯ ಏನೇ ಆದರೂ ಕೂಡಾ ಶೈನ್ ಮಾತ್ರ ಮನರಂಜನೆ ಮಾತ್ರ ಭರ್ಜರಿಯಾಗಿ ನೀಡುವುದರಲ್ಲಿ ತಾನು ಹಿಂದೆ ಬೀಳುವುದಿಲ್ಲ ಎನ್ನುವಂತೆ ಚೈತ್ರ ಅವರ ಜೊತೆ ಜೋಡಿಯಾಗಿ ಕಾಣಿಸಿಕೊಂಡು, ಬಿಗ್ ಹೌಸ್ ನ ಒಂದು ಹೊಸ ಜೋಡಿ ಎಂಬಂತೆ ರಂಜಿಸುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here