ಬಿಗ್‌ಬಾಸ್‌ ಮನೆಯಲ್ಲಿ ಎಲ್ಲದಕ್ಕಿಂತ ರೋಚಕ ಹಾಗೂ ಆಸಕ್ತಿಕರ ಎಂದರೆ ಅದು ನಾಮಿನೇಷನ್ ಪ್ರಕ್ರಿಯೆ. ಏಕೆಂದರೆ ನಾಮಿನೇಷನ್ ಮುಗಿದ ನಂತರ ಎಲ್ಲರ ವರ್ತನೆಯಲ್ಲಿ ಅದರಲ್ಲೂ ವಿಶೇಷವಾಗಿ ನಾಮಿನೇಟ್ ಆದ ಸದಸ್ಯರ ವರ್ತನೆಯಲ್ಲಿ ದೊಡ್ಡ ವ್ಯತ್ಯಾಸ ಕಂಡುಬರುತ್ತದೆ. ಮನೆಯ ಇಷ್ಟು ದಿನದ ಲೆಕ್ಕಾಚಾರಗಳೆಲ್ಲಾ ಅದಲು ಬದಲಾಗಿ ಬಿಡುತ್ತದೆ. ಆದರೆ ನಾಮಿನೇಷನ್ ಕನ್ಫೇಶನ್ ರೂಮ್‌ನಲ್ಲಿ ನಡೆದಾಗ, ಯಾರು ಯಾರನ್ನು ನಾಮಿನೇಟ್ ಮಾಡಿದ್ದರು ಎನ್ನುವುದು ಮಾತ್ರ ಮನೆಯ ಸದಸ್ಯರಿಗೆ ತಿಳಿಯುವುದಿಲ್ಲ. ಬದಲಿಗೆ ನಾಮಿನೇಟ್ ಆದವರು ಯಾರೆಂಬುದು ಮಾತ್ರ ಸದಸ್ಯರಿಗೆ ಬಿಗ್ ಬಾಸ್ ತಿಳಿಸುವರು‌ ನಡೆಯೋ ವೋಟಿಂಗ್ ಪ್ರಕ್ರಿಯೆ ಬಗ್ಗೆ ಪಕ್ಕಾ ಮಾಹಿತಿ ಸಿಗೋದಿಲ್ಲ.

ಆದರೆ ಈ ವಾರ ಬಿಗ್‌ಬಾಸ್‌ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಕನ್ಫೇಷನ್ ರೂಮಿನಲ್ಲಿ ನಡೆದಿದಲ್ಲ. ಬದಲಿಗೆ ಎಲ್ಲರ ಎದುರಿನಲ್ಲೇ, ಗಾರ್ಡನ್ ಏರಿಯಾದಲ್ಲಿ ನಡೆದಿದೆ. ಗಾರ್ಡನ್ ಏರಿಯಾದ ನಿಗಧಿತ ಸ್ಥಳದಲ್ಲಿ ಮನೆಯ ಎಲ್ಲಾ ಸದಸ್ಯರ ಫೋಟೋಗಳನ್ನು ಇಟ್ಟು, ಅಲ್ಲೇ ಎದುರಲ್ಲಿ ಉರಿಯುತ್ತಿರುವ ಬೆಂಕಿಯನ್ನು ಇಟ್ಟು, ನಾಮಿನೇಟ್ ಮಾಡುವ ಸದಸ್ಯರ, ಯಾರನ್ನು ನಾಮಿನೇಟ್ ಮಾಡಲು ಬಯಸುವರೋ ಅವರ ಫೋಟೋವನ್ನು ಬೆಂಕಿಗೆ ಹಾಕಿ, ಕಾರಣ ಕೊಡುವಂತೆ ಸೂಚಿಸಲಾಗಿದೆ.

ಈಗ ಅದರ ಪ್ರೋಮೋ ಬಿಡುಗಡೆ ಆಗಿದ್ದು, ಅದರಲ್ಲಿ ಜೈಜಗದೀಶ್ ಅವರು ಶೈನ್‌ ಅವರ ಫೋಟೋ ಬೆಂಕಿಗೆ ಹಾಕಿ ಗ್ರೂಪಿಸಂ ಮಾಡುತ್ತಿದ್ದಾರೆ ಎಂದು ಕಾರಣ ನೀಡಿದ್ದಾರೆ. ಸುಜಾತಾ ಅವರು ತಮ್ಮ ಕಾಲಿಗೆ ಪೆಟ್ಟಾಗಲು ಕಾರಣವಾದ ಕಿಶನ್‌ನ ಫೋಟೊ ಬೆಂಕಿಗೆ ಹಾಕಿ ತಾನು ಈ ರೀತಿ ನಿಲ್ಲಲು ಕಾರಣ ಕಿಶನ್ ಎಂದಿದ್ದಾರೆ. ವಾಸುಕಿ ವೈಭವ್ ಚೈತ್ರ ಕೊಟ್ಟೂರ್ ಅವರನ್ನು ನಾಮಿನೇಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇನ್ನುಳಿದಂತೆ ಯಾರು ಯಾರನ್ನು ಯಾವ ಕಾರಣಕ್ಕೆ ನಾಮಿನೇಟ್ ಮಾಡಲಿದ್ದಾರೆ ಹಾಗೂ ಕೊನೆಗೆ ಮನೆಯಿಂದ ಹೊರ ನಡೆಯಲು ನಾಮಿನೇಟ್ ಆಗುವವರು ಯಾರೆಂದು ಇಂದು ರಾತ್ರಿ ನೋಡಬೇಕಿದೆ‌. ನೇರ ನಾಮಿನೇಷನ್ ಮನೆಯಲ್ಲಿ ಎಂತಹ ಬದಲಾವಣೆ ತರುತ್ತದೆ ಎಂಬುದು ಕೂಡಾ ತಿಳಿಯುತ್ತದೆ.

ಉರಿಯೋ ಬೆಂಕಿಗೆ ತುಪ್ಪ ಅಲ್ಲ, ತುಪಾಕಿ ಸುರಿಯುತ್ತಿದ್ದಾರೆ! ಕನ್‌ಫೆಷನ್ ರೂಮಿನ ಗೌಪ್ಯದಲ್ಲಲ್ಲ, ಎಲ್ಲರ ಎದುರು ನಡೆಯಲಿದೆ ಈ ವಾರದ ನಾಮಿನೇಷನ್.ಬಿಗ್‌ಬಾಸ್ | ಪ್ರತಿ ರಾತ್ರಿ 9ಕ್ಕೆ#BBK7 #BiggBoss #ColorsKannada

Colors Kannada यांनी वर पोस्ट केले रविवार, ३ नोव्हेंबर, २०१९

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here