ಇಂದು ಬೆಳಿಗ್ಗೆ ಅಷ್ಟೇ ಬಿಗ್ ಬಾಸ್ ನ ಸೀಸನ್ ಏಳರ ಬಗ್ಗೆ ಒಂದು ರೋಚಕ ಸುದ್ದಿ ಹೊರ ಬಂದಿತ್ತು. ಅದೇನೆಂದರೆ ಬಿಗ್ ಬಾಸ್ ಮನೆಯೊಳಗೆ ಹೋದ ಸ್ಪರ್ಧಿಯೊಬ್ಬರು ಮೊದಲನೆಯ ದಿನವೇ ಮನೆಯಿಂದ ಹೊರಗೆ ಬಂದಿದ್ದಾರೆ ಎಂದು. ಮತ್ತೂ ವಿಶೇಷ ಏನೆಂದರೆ ಹಾಗೆ ಹೊರ ಬಂದವರು ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರು. ಅವರ ಮೇಲೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ಪ್ರೇಕ್ಷಕರಿಗೆ ಈ ಸುದ್ದಿ ಒಂದು ರೀತಿಯಲ್ಲಿ ನಿರಾಶೆಯನ್ನು ಮೂಡಿಸಿದ್ದು ಕೂಡಾ ನಿಜ. ರವಿ ಬೆಳಗೆರೆ ಅವರು ಇದ್ದಕ್ಕಿದ್ದಂತೆ ಹೊರ ಬಂದ ಕಾರಣವನ್ನು ಕೂಡಾ ತಿಳಿಯಲು ಪ್ರೇಕ್ಷಕರು ಆಸಕ್ತಿಯನ್ನು ತೋರಿಸಿದ್ದರು.

ರವಿ ಬೆಳಗೆರೆ ಅವರ ಆರೋಗ್ಯದಲ್ಲಿ ಉಂಟಾದ ವ್ಯತ್ಯಾಸದಿಂದಾಗಿ ಅವರು ಇಂದು ಬೆಳಗ್ಗೆ ಬಿಗ್ ಬಾಸ್ ಹೌಸ್ ನಿಂದ ಹೊರಗೆ ಬರಬೇಕಾಯಿತು. ಇನ್ನು ಅವರು ಆರೋಗ್ಯ ಸಮಸ್ಯೆಯಿಂದ ಹೊರ ಬಂದ ಮೇಲೆ ಮತ್ತೆ ಅವರು ಬಿಗ್ ಬಾಸ್ ಹೌಸ್ ಒಳಗೆ ಹೋಗುವರೋ, ಅಥವಾ ಹೊರಗೆ ಇರುವರೇ ಎಂಬ ಅನುಮಾನಗಳು ಕೂಡಾ ಆರಂಭವಾಗಿತ್ತು. ಈಗ ಅದಕ್ಕೆ ಉತ್ತರ ದೊರೆತಿದೆ. ಅಂದರೆ ರವಿ ಬೆಳಗೆರೆ ಅವರು ಬಿಗ್ ಬಾಸ್ ನಿಂದ ಹೊರಗುಳಿಯುವರೇ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

ಈಗ ಆಗಿರುವ ಬೆಳವಣಿಗೆಯೊಂದರಲ್ಲಿ ರವಿ ಬೆಳಗೆರೆ ಅವರು ಮತ್ತೆ ಬಿಗ್ ಬಾಸ್ ಶೋ ಪ್ರವೇಶ ಮಾಡಿದ್ದಾರೆ. ರವಿ ಬೆಳಗೆರೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಅವರು ಮತ್ತೆ ಬಿಗ್ ಬಾಸ್ ಹೌಸ್ ಗೆ ಮರಳಿದ್ದಾರೆ ಎಂಬ ಮಾಹಿತಿಯನ್ನು ಬಲ್ಲ ಮೂಲಗಳು ತಿಳಿಸಿವೆ. ಈ ಮೂಲಕ ರವಿ ಬೆಳಗೆರೆ ಅವರು ಮತ್ತೆ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here