ಈ ಬಾರಿಯ ಬಿಗ್ ಬಾಸ್ ಸೀಸನ್ 7 ಆರಂಭದಲ್ಲಿ   ಹಿರಿಯ ಪತ್ರಕರ್ತ ರವಿ ಬೆಳಗೆರೆ ಬಿಗ್​ಬಾಸ್​ ಮನೆಗೆ ಹೋದರಾದರೂ, ಕಾರಣಾಂತರಗಳಿಂದ ಅವರು ಅಲ್ಲಿ ಹೆಚ್ಚಿನ ದಿನಗಳು ಇರಲಿಲ್ಲ.   ಬಿಗ್ ಹೌಸ್ ನಲ್ಲಿ ಅತಿಥಿಯಾಗಿದ್ದ ರವಿ ಬೆಳಗೆರೆ  ಅವರು  ಮನೆಯ ಇತರ ಸದಸ್ಯರೊಂದಿಗೆ ಅವರ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಾ, ಹಲವು ಮಾಹಿತಿಯುತ ಹಾಗೂ ಆಸಕ್ತಿದಾಯಕ ವಿಷಯಗಳನ್ನು ತಿಳಿಸಿಕೊಡುತ್ತಿದ್ದರು .
ಅದರಲ್ಲಿ  ರವಿ ಬೆಳಗೆರೆ ಅವರು ನಟ ಶಂಕರ್​ನಾಗ್​ ಹಾಗೂ ನಟಿ ಮಂಜುಳಾ ಅವರಿಗೆ ಸಂಬಂಧಪಟ್ಟ ದುರಂತದ ವಿಷಯವನ್ನು ತಿಳಿಸಿದ್ದಾರೆ.

ಈ  ಸಂದರ್ಭದಲ್ಲಿ ಅವರು ಒಂದು ಕಥೆಯನ್ನು ಹೇಳಿದ್ದು, ಅದನ್ನು ಕೇಳಿದ ಹೌಸ್ ನ ಇತರೆ ಸ್ಪರ್ಧಿಗಳು ಹೌದಾ? ಎಂದು ವಿಸ್ಮಯ ಪಡುತ್ತಾ ಅವರ ಮಾತುಗಳನ್ನು ಕೇಳುತ್ತಿರುವುದನ್ನು ನಾವು ನೋಡಬಹುದಾಗಿದೆ. ನಟಿ ಮಂಜುಳಾ ಅವರ ಎದುರು ಮೊದಲ ಸಲ ಶಂಕರ್ ನಾಗ್ ಅವರನ್ನು ಕರೆದುಕೊಂಡು ಹೋಗಿ, ಇವರೇ ನಿಮ್ಮ ಸಿನಿಮಾ‌ ಹೀರೋ ಎಂದಾಗ, ಮಂಜುಳ ಅವರು ಯಾವ್ಯಾವುದೋ ಕೋತಿಯನ್ನೆಲ್ಲಾ ಕರೆ ತಂದು ಹೀರೋ ಎನ್ನುತ್ತೀರಿ ಎಂದಿದ್ದರಂತೆ.

ಈ ಮಾತನ್ನು ಮಂಜುಳ ಅವರು ಶಂಕರ್ ನಾಗ್ ಅವರ ಎದುರಿನಲ್ಲೇ ಹೇಳಿದ್ದರಂತೆ. ಆದರೆ ವಿಧಿಯಾಟ ಹೇಗಿತ್ತು ಎಂದರೆ, ಮುಂದೆ ಮಂಜುಳಾ ಬೆಂಕಿ ಅನಾಹುತದಲ್ಲಿ ಮೃತಪಟ್ಟಾಗ ಅವರ ಮೃತದೇಹವನ್ನು ತಂದವರೇ ಶಂಕರ್​ನಾಗ್​ ಎಂದು ರವಿ ಬೆಳಗೆರೆಯವರು ಕೆಲವು ಹಳೆಯ ನೆನಪುಗಳನ್ನು ಬಿಗ್ ಹೌಸ್ ಸ್ಪರ್ಧಿಗಳ ಜೊತೆ ಹಂಚಿಕೊಂಡಿದ್ದಾರೆ. ಮೊನ್ನೆ ಅವರು ಹಾಸ್ಯ ನಟ ದಿನೇಶ್ ಅವರ ನಿಜ ಜೀವನದ ‌ಹಾಸ್ಯ ಘಟನೆಗಳನ್ನು ಹಂಚಿಕೊಂಡಿದ್ದನ್ನು ಕೂಡಾ ನಾವಿಲ್ಲಿ ಸ್ಮರಿಸಬಹುದು.

ಟೀ ಕುಡಿಯುತ್ತಾ ರವಿ ಬೆಳಗೆರೆಯವರು ಶಂಕ್ರಣ್ಣನ್ನ ನೆನಪಿಸಿಕೊಂಡಾಗ..ಬಿಗ್‌ಬಾಸ್ | ಪ್ರತಿ ರಾತ್ರಿ 9ಕ್ಕೆ#BBK7 #BiggBoss #ColorsKannada

Colors Kannada यांनी वर पोस्ट केले बुधवार, १६ ऑक्टोबर, २०१९

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here