ಬಿಗ್ ಬಾಸ್ ಸೀಸನ್ ಏಳರ ವಿಶೇಷಗಳಲ್ಲಿ ಪ್ರಮುಖವಾದ ಅಂಶ ಎಂದರೆ ಈ ಬಾರಿ ಎಲ್ಲಾ ಸ್ಪರ್ಧಿಗಳು ಕೂಡಾ ಸೆಲೆಬ್ರಿಟಿಗಳೇ‌ ಇದಲ್ಲದೆ ಇನ್ನೂ ಅನೇಕ ಆಕರ್ಷಣೆಗಳಿದ್ದು, ಅಂತಹ ಆಕರ್ಷಣೆಗಳಲ್ಲಿ ಮನೆಯ ಸದಸ್ಯರಲ್ಲಿ ಒಬ್ಬರಾದ ಶೈನ್ ಶೆಟ್ರು ಕೂಡಾ ಒಂದು ಆಕರ್ಷಣೆ ಆಗಿದ್ದಾರೆ. ಮನೆಯಲ್ಲಿರುವ ಸೆಲೆಬ್ರಿಟಿಗಳಲ್ಲಿ ಸದಸ್ಯರಲ್ಲಿ ಈ ಸೀಸನ್ ನಲ್ಲಿ ಬಾರಿ ಶೈನ್ ಪ್ರೇಕ್ಷಕರ ಗಮನವನ್ನು ತಮ್ಮತ್ತ ಸೆಳೆದಿದ್ದಾರೆ. ಜನರಿಗೆ ಭರ್ಜರಿ ಮನರಂಜನೆ ನೀಡುವಲ್ಲಿ ಯಶಸ್ಸನ್ನು ಪಡೆದಿದ್ದಾರೆ ಶೈನ್. ಸುದೀಪ್ ಅವರೇ ಹೇಳುವಂತೆ ಮನೆಯಿಂದ ಹೊರ ಹೋಗಲು ನಾಮಿನೇಟ್ ಆದವರಲ್ಲಿ ಶೈನ್ ಹೆಸರು ಇದ್ದರೆ, ಜನರಿಂದ ಹೆಚ್ಚು ಓಟು ಸಿಗುವುದು ಶೈನ್ ಗೆ‌. ಇದರಿಂದ ಶೈನ್ ಪಾಪುಲಾರಿಟಿ ಹೆಚ್ಚಾಗುತ್ತಿರುವುದು ನಿಜವಾಗಿದೆ.

ಏಳನೇ ವಾರದಲ್ಲಿ ಶೈನ್ ಅವರು ಮಿಂಚಿದ್ದಾರೆ. ಇದಕ್ಕೆ ಕಾರಣವೂ ಉಂಟು‌. ಏಕೆಂದರೆ ದೀಪಿಕಾ ಅವರ ಸೀಕ್ರೇಟ್ ಟಾಸ್ಕ್ ಗಾಗಿ ಶೈನ್ ತಾವು ಏಳು ತಿಂಗಳಿನಿಂದ ಬಿಟ್ಟಿದ್ದ ಗಡ್ಡ ಮೀಸೆ ಎಲ್ಲವನ್ನೂ ಬೋಳಿಸಿದ್ದಾರೆ‌. ಶೈನ್ ಅವರ ಹೊಸ ಲುಕ್ ಮತ್ತಷ್ಟು ಗಮನವನ್ನು ಸೆಳೆದಿದ್ದು, ಮನೆಯ ಸದಸ್ಯರಲ್ಲೂ ಆಶ್ಚರ್ಯವನ್ನು ಮೂಡಿಸಿದ್ದಾರೆ. ತನ್ನ ಮನರಂಜನೆ ಹಾಗೂ ಟಾಸ್ಕ್ ಗಳಲ್ಲಿ ಶೈನ್ ಚಟುವಟಿಕೆಯಿಂದ ಇರುವುದನ್ನು ನೋಡಿದರೆ ಶೈನ್ ಬಿಗ್ ಬಾಸ್ ಸೀಸನ್ ಏಳರ ಫಿನಾಲೇ ವಾರವನ್ನು ತಲುಪುವುದು ಖಚಿತ ಎನಿಸಿದೆ. ಬಾಸ್ ನೀಡುವ ಸಂಭಾವನೆ ಕೂಡಾ ಆಕರ್ಷಕವಾಗಿದೆ. ಜನರ ಮನಗೆದ್ದು ವಾರದಿಂದ ವಾರಕ್ಕೆ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಶೈನ್ ಅವರಿಗೆ ಬಿಗ್ ಬಾಸ್ ನೀಡುವ ಸಂಭಾವನೆ ಕೂಡಾ ಆಕರ್ಷಕವಾಗಿದೆ‌.

ಶೈನ್ ಶೆಟ್ಟಿ ಅವರಿಗೆ ವಾರಕ್ಕೆ 50 ಸಾವಿರ ರೂಪಾಯಿಗಳನ್ನು ಸಂಭಾವನೆಯಾಗಿ ನೀಡುತ್ತಿದ್ದೆ ಬಿಗ್ ಬಾಸ್‌. ಅವರು ಫಿನಾಲೆ ತಲುಪಿದರೆ ಅವರು ಬಿಗ್ ಹೌಸ್ ನಲ್ಲಿ 14 ವಾರಗಳನ್ನು ಪೂರೈಸುವರು. ಹೀಗೆ ಫಿನಾಲೇ ವಾರದವರೆಗೆ ಮನೆಯಲ್ಲೇ ಅವರು ಉಳಿದರೆ, ಬಿಗ್ ಬಾಸ್ ಕಡೆಯಿಂದ ಶೈನ್ ತಮ್ಮ ಸಂಭಾವನೆಯಾಗಿ ಒಟ್ಟು ಏಳು ಲಕ್ಷ ರೂಪಾಯಿಗಳನ್ನು ಪಡೆಯುವರು. ಪ್ರಸ್ತುತ ಶೈನ್ ಅವರ ಜನಪ್ರಿಯತೆ ನೋಡಿದರೆ ಅವರು ಫಿನಾಲೆ ಪ್ರವೇಶ ಮಾಡುವುದು ಖಚಿತ ಎನಿಸಿದೆ‌. ಬಹುತೇಕ ಎಲ್ಲರ ಅಭಿಪ್ರಾಯ ಕೂಡಾ ಇದೇ ಆಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here