
ಬಿಗ್ ಬಾಸ್ ಸೀಸನ್ 7 ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಳೆದ ವಾರದಲ್ಲಿ ನೀಡಲಾದ ರಣರಂಗ ಟಾಸ್ಕ್ ನಿಂದಾಗಿ ಬಿಗ್ ಹೌಸ್ ವಾರ್ ಫೀಲ್ಡ್ ಆಗಿತ್ತು. ಇನ್ನು ಈ ವಾರ ಆರಂಭವಾಗುತ್ತಲೇ ಬಿಗ್ ಹೌಸ್ ನಿಂದ ಮನೆಯ ಸದಸ್ಯರನ್ನು ಇದ್ದಕ್ಕಿದ್ದಂತೆ ಘೋಷಣೆಯ ಮೂಲಕ ತಮಗೆ ಅಗತ್ಯವಿರುವ ಸಾಮಗ್ರಿಗಳೊಂದಿಗೆ ಮನೆಯಿಂದ ಹೊರಗೆ ಬರುವಂತೆ ಆದೇಶ ನೀಡಲಾಯಿತು. ಅದರಂತೆ ಬಹಳ ಬೇಗ ಬೇಗನೇ ಎಲ್ಲರೂ ತಮ್ಮ ಅಗತ್ಯದ ವಸ್ತುಗಳನ್ನು ಸಿದ್ಧ ಮಾಡಿಕೊಂಡಾಗ, ಎರಡು ನಿಮಿಷ ಅವಕಾಶದಲ್ಲಿ ಎಲ್ಲರೂ ಸಾಮಗ್ರಿಗಳ ಸಮೇತ ಹೊರ ಬರಬೇಕು ಎಂದು ಕೂಡಾ ಸೂಚನೆ ನೀಡಲಾಯಿತು.
ಹೀಗೆ ಮನೆಯಿಂದ ಹೊರ ಬಂದವರಿಗೆ ಮತ್ತೆ ಮನೆಯೊಳಗೆ ಹೋಗುವ ದಾರಿ ಹೇಗೆ? ಎಂಬುದಕ್ಕೆ ಇಂದಿನ ಪ್ರೋಮೋ ಉತ್ತರ ನೀಡಿದೆ. ಇಂದು ಟಾಸ್ಕ್ ಒಂದನ್ನು ನೀಡಿದ್ದು, ಅದರ ಪ್ರಕಾರ ಮನೆಯೊಳಗೆ ಹೋಗಲು ಕಿತ್ತಳೆ ಹಣ್ಣಿನ ಟಾಸ್ಕ್ ನೀಡಿದ್ದು, ಟಾಸ್ಕ್ ನ ಅನುಸಾರ ಕಿತ್ತಳೆ ಹಣ್ಣನ್ನು ಕಾಲುಗಳ ಮಧ್ಯೆ ಇಟ್ಟು ಒಂದು ನಿರ್ದಿಷ್ಟ ಸ್ಥಳಕ್ಕೆ ತಲುಪಿಸಿ ಅವುಗಳನ್ನು ಸಂಗ್ರಹಿಸಬೇಕು. ಸಂಗ್ರಹಿಸಿದರೇ ಗೆದ್ದಂತೆ ಅಲ್ಲ. ಅದರ ಜೊತೆಗೆ ಸಂಗ್ರಹಿಸಿದ ಕಿತ್ತಳೆ ಹಣ್ಣುಗಳನ್ನು ಜೋಪಾನವಾಗಿ ಸಂರಕ್ಷಣೆ ಕೂಡಾ ಮಾಡಬೇಕು ಎಂಬ ನಿಯಮ ಹೇಳಲಾಗಿದೆ.
ಟಾಸ್ಕ್ ನಲ್ಲಿ ದೀಪಿಕಾ ದಾಸ್, ಶೈನ್ ಹಾಗೂ ಇನ್ನಿತರರು ಬಹಳ ಜೋರಾಗಿ ಅರಚುತ್ತಾ, ಮಾತಿನ ಚಕಮಕಿ ನಡೆಸುತ್ತಿರುವ ದೃಶ್ಯಗಳು ಪ್ರೋಮೋ ದಲ್ಲಿ ಕಾಣುತ್ತಿದೆ. ಅದು ಮಾತ್ರವಲ್ಲದೇ ಕಿತ್ತಳೆ ಹಣ್ಣನ್ನು ಸಂಗ್ರಹಿಸುವ ಸಮಯದಲ್ಲಿ ಒಬ್ಬರ ಮೇಲೊಬ್ಬರು ಬಿದ್ದು ಟಾಸ್ಕ್ ಮಾಡುತ್ತಿರುವುದು ಕಾಣುತ್ತಿದೆ. ಒಟ್ಟಾರೆ ಕಿತ್ತಳೆ ಹಣ್ಣಿನ ಟಾಸ್ಕ್ ನಿಂದ ಮತ್ತೊಮ್ಮೆ ಬಿಗ್ ಹೌಸ್ ನಲ್ಲಿ ಸ್ಪರ್ಧಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇನ್ನು ಏನೆಲ್ಲಾ ಆಗಲಿದೆ ಎಂಬುದಕ್ಕೆ ಇಂದಿನ ಬಿಗ್ ಬಾಸ್ ನೋಡಬೇಕಿದೆ.ಈ ಮಧ್ಯೆ ಯಾರು ಯಾರನ್ನು ಮುಟ್ಟಿ ಆಟ ಆಡಿದ್ದಾರೆ ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
https://m.facebook.com/story.php?story_fbid=1412200048962159&id=102459466602897
ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.