ತನ್ನ ರಾಪ್ ಹಾಡುಗಳಿಂದ ಅದರಲ್ಲೂ ಮೂರೇ ಮೂರು ಪೆಗ್ಗಿಗೆ ಹಾಡಿನಿಂದ ರಾಜ್ಯದ ಜನರನ್ನು ಹುಚ್ಚೆದ್ದುಕುಣಿಯುವಂತೆ ಮಾಡಿದ್ದ ಕನ್ನಡದ ಫೇಮಸ್ ರಾಪರ್ ಚಂದನ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನೂ ಕುಣಿಸುತ್ತಿದ್ದಾರೆ.

ಬಿಗ್ ಬಾಸ್  ಶುರುವಾಗಿ 60 ದಿನಗಳಾದವು ಅದರಂತೆ ಮೊದಲ ದಿನ ದಿಂದಲೂ ವೀಕ್ಷಕರನ್ನು ಮತ್ತು ಬಿಗ್ ಬಾಸ್ ಯ ಸದಸ್ಯರನ್ನು ರಂಜಿಸುತ್ತಾ ಬಂದಿರುವ ಏಕೈಕ ಸದಸ್ಯ ಈ ಚಂದನ್.!

ಬಿಗ್ ಬಾಸ್ ನೀಡುವ ಪ್ರತೀ ಟಾಸ್ಕ್ ನಲ್ಲಿಯೂ ತನಗೆ ಸಿಕ್ಕ ಸಾಧನವನ್ನು ಬಳಸಿ ತನ್ನ ಮ್ಯಾಜಿಕ್ ಬೆರಳುಗಳಿಂದಲೇ ಮ್ಯೂಸಿಕ್ ಮಾಡಿ ಅದಕ್ಕೊಂದು ತಕ್ಕದಾದ ಪದಪ್ರಯೋಗಿಸಿ ಇಡೀ ಬಿಗ್ ಬಾಸ್ ಮನೆ ಬೋರಾಗಂತೆ ನೋಡಿಕೊಂಡಿರುವ ಕ್ರೆಡಿಟ್ ಚಂದನ್ ಶೆಟ್ಟಿ ಅವರದ್ದು.!

ಟಾಸ್ಕ್ ಇಲ್ಲದಸಮಯದಲ್ಲೂ ಬಾತ್ ರೂಮ್ ನಲ್ಲಿ ಸಿಗುವ ಟೂತ್ ಬ್ರಸ್ ಹಾಗೂ ಇನ್ನಿತರ ಸಾಮಾಗ್ರಿಗಳಲ್ಲಿ ಮತ್ತು ಅಡುಗೆ ಮನೆಯಲ್ಲಿ ಸಿಗುವ ಸ್ಪೂನ್ ಸೌಟುಗಳಲ್ಲಿಯೂ ಚಂದನ್ ಸೌಂಡಿಂಗ್ ಸಕ್ಕತಾಗಿ ವರ್ಕೌಟ್ ಆಗಿದೆ

ಹಾಗೆಯೇ ನೋಡುಗರು ಚಂದನ್ ಅವರನ್ನು ಬಿಗ್ ಬಾಸ್ ಮನೆಯಲ್ಲಿ ಉಳಿಸುಕೊಳ್ಳುವಲ್ಲಿ ಅವರ ಸಂಗೀತದ ಪಾತ್ರ ಬಹುಮುಖ್ಯವಾಗಿದೆ ಎಂದು ಹೇಳಬಹುದು.!

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here