ನನ್ನ ಮತ್ತು ಕುಮಾರಸ್ವಾಮಿ ಅವರ ನಡುವೆ ವ್ಯತ್ಯಾಸವಿದೆ. ನಾನಾಗಿಯೇ ಜೆಡಿಎಸ್ ಬಿಟ್ಟಿಲ್ಲ, ನನ್ನನ್ನು ಪಕ್ಷ ಬಿಡುವಂತೆ ಮಾಡಲಾಯಿತು. ಬಿಜೆಪಿ ಕೋಮವಾದಿ ಪಕ್ಷವಾಗಿದ್ದು, ಜೆಡಿಎಸ್ ಸೆಕ್ಯೂಲರ್ ಆಗಿದೆ. ಇಂದಿಗೂ ನಾನು ಜೆಡಿಎಸ್ ಬಿಟ್ಟಿದ್ದನ್ನು ಇಂದಿಗೂ ಸಮರ್ಥಿಸಿಕೊಳ್ಳುತ್ತೇನೆ ಅಂತಾ ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಖಾನ್  ಹೇಳಿದ್ದಾರೆ‌.

ಚಾಮರಾಜಪೇಟೆ  ಕ್ಷೇತ್ರದ ಜನ ನನ್ನನ್ನು ರಾಜಕೀಯ ವ್ಯಕ್ತಿ ಎಂದು ಭಾವಿಸಿಲ್ಲ ಬದಲಾಗಿ  ಚಾಮರಾಜಪೇಟೆಯ ಕ್ಷೇತ್ರದ   ಜನ ನನ್ನನ್ನು ಮನೆಯ ಮಗ ಅಂತಾ ತಿಳಿದು  ಆಶೀರ್ವದಿಸಿ ಗೆಲ್ಲಿಸಿದ್ದಾರೆ ಎಂದು ಚಾಮರಾಜಪೇಟೆಯ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ನಾನು ಚಾಮರಾಜಪೇಟೆ ಕ್ಷೇತ್ರಕ್ಕೆ ಅಭಿವೃದ್ಧಿ ಮಾಡಿ
ಮುಂದಿನ ದಿನಗಳಲ್ಲಿ ಅವರ ಸೇವೆ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸುತ್ತೇನೆ. ಮುಂಬರುವ ಐದು ವರ್ಷಗಳಲ್ಲಿ ಕ್ಷೇತ್ರಕ್ಕೆ ಇನ್ನು ಅನೇಕ ಅಭಿವೃದ್ಧಿ ಕೆಲಸ ಕಾರ್ಯ ಮಾಡುತ್ತೇನೆ ಅಂತಾ ಅಂದ್ರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here