ರಾಜ್ಯ ರಾಜಕಾರಣದಲ್ಲಿ ಅತಿ ಹೆಚ್ಚು ನೋವುಂಡ ನಾಯಕ ಅಂದರೆ ಅದು ಯಡಿಯೂರಪ್ಪ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದಮೇಲೆ ಅನುಭವಿಸಿದ ನೋವು ಯಡಿಯೂರಪ್ಪ ಮುಖ್ಯಮಂತ್ರಿ ಆಗುವ ಮುನ್ನಾದಿನಗಳು ಅನುಭವಿಸಿದ ನೋವು ಮತ್ತು ಯಡಿಯೂರಪ್ಪ ಯುವಕನಾಗಿದ್ದ ಅನುಭವಿಸಿದ ನೋವುಗಳ ಪ್ರಮಾಣ ಬಹುದೊಡ್ಡದೇ..

ತನ್ನದೇ ಸ್ವಂತ ಬಲದಿಂದ ಉನ್ನತ ಸ್ಥಾನಕ್ಕೆ ಏರಿದ ರಾಜ್ಯದ ಏಕೈಕ ನಾಯನ ಹೆಸರೇ ಬಿ.ಎಸ್.ಯಡಿಯೂರಪ್ಪ ಯಡಿಯೂರಪ್ಪ ಚಿಕ್ಕವಯಸ್ಸಿನಲ್ಲೇ ತುರ್ತು ಪರಿಸ್ಥಿತಿ ವಿರುದ್ದ ಸಿಡಿದೆದ್ದಿರು.! ಜೈಲಿನಲ್ಲಿದ್ದುಕೊಂಡೇ ಜನನಾಯಕನಾಗಿದ್ದು ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವ ಗುಣಗಳನ್ನು ಎತ್ತಿ ತೋರಿಸುವಂತದ್ದು. ಯಡಿಯೂರಪ್ಪ ಅವರ ಬಗ್ಗೆ ಹೇಳಬೇಕಾದ ಕಥೆ ಇದು
ಯಡಿಯೂರಪ್ಪ ಅವರ ಸಿಟ್ಟು ಮತ್ತು ಅದರ ಹಿಂದಿನ ಅರ್ಥಗರ್ಭಿತ ಮುಖ ಬೇರೆ ಇತ್ತು

೧೯೭೫ ರ ಸಮಯದಲ್ಲಿ ಪ್ರಧಾನಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಈ ವೇಳೆ ಸಂಘ ಪರಿವಾರಗಳಿದೆ ನಿಷೇದ ಹೇರಲಾಗಿತ್ತು. ಎಲ್ಲಾ ನಾಯಕರು ಭೂಗತರಾಗಿದ್ದರು.
ಆ ಯುವಕನು ಕೂಡ ಭೂಗತನಾಗಿದ್ದನು ತುರ್ತು ಪರಿಸ್ಥಿತಿ ವಿರುದ್ದ ಸತ್ಯಾಗ್ರಹ ನಡೆಸಿ ಬಂಧನಕ್ಕೊಳಗಾಗಿ ಬಳ್ಳಾರಿ ಜೈಲು ಸೇರಿದ್ದ ಆ ಕೆಚ್ಚೆದೆಯ ಯುವಕ
ಬಳ್ಳಾರಿ ಜೈಲಿನಲ್ಲಿ ಖೈದಿಗಳ ಉಪಟಳ ಹೆಚ್ಚಾಗಿತ್ತು ,ಸಣ್ಣ ಪ್ರಮಾಣದ ಕೇಸುಗಳಲ್ಲಿ ಜೈಲು ಸೇರಿದ್ದ ಶಿಕಾರಿಪುರದ ಖೈದಿಗಳಿಗೆ ದೊಡ್ಡ ರೌಡಿಗಳಿಂದ ನಿತ್ಯ ಕಿರುಕುಳ ಕೊಡಲಾಗಿತ್ತು.

ಊಟ , ನೀರು ಹೀಗೆ ಸಣ್ಣ ಸಣ್ಣ ವಿಷಯಗಳಲ್ಲೂ ಕಿರುಕುಳ ನೀಡಲಾಗಿತ್ತು ಇದರಿಂದ ಸಿಟ್ಟಿಗೆದ್ದ ಯುವಕ ಸತ್ಯಾಗ್ರಹ ಶುರು ಮಾಡಿದ್ದ. ಮಧ್ಯಾಹ್ನದಲ್ಲಿಯೇ ಏಕಾ ಏಕಿ ಉಪವಾಸ ಆರಂಭಿಸಿ ಖೈದಿಗಳ ರಕ್ಷಣೆ ಮತ್ತು ಅವ್ಯವಸ್ಥೆ ಬಗ್ಗೆ ದಂಗೆಯಿದ್ದ. ತನ್ನ ಶಿಖಾರಿಪುರದ ಸಹ ಖೈದಿಗಳ ಜೊತೆ ಸೇರಿ ಪ್ರತಿಭಟಿಸಿದ್ದ. ಇದನ್ನ ಖಂಡ ಕಾರಾಗೃಹ ಸಿಬ್ಬಂದಿ ದೊಡ್ಡ ರೌಡಿಗಳನ್ನು ಹಾಗೂ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಖೈದಿಗಳನ್ನ ಯುವಕನ ಮೇಲೆ ಛೂ ಬಿಟ್ಟಿದ್ದರು.

ಇದರಿಂದ ದೊಡ್ಡ ಪ್ರಮಾಣದ ಗಲಾಟೆ ನಡೆದು ಹೋಗಿತ್ರು ಸಿಟ್ಟಿಗೆದ್ದ ಯುವಕ ಕೈಗೆ ಸಿಕ್ಕ ಕುರ್ಚಿಯನ್ನು ತೆಗೆದುಕೊಂಡು ರೌಡಿಗೆ ಹೊಡೆದಿದ್ದರು. ಇದರಿಂದ ಪ್ರಭಾವಿತರಾದ ಸಹ ಖೈದಿಗಳು ದೊಡ್ಡ ದೊಡ್ಡ ಖೈದಿಗಳಿಗೆ ಸಿಕ್ಕ ಸಿಕ್ಕ ವಸ್ತುಗಳಿಂದ ಹೊಡೆದು ಪಾಠ ಕಲಿಸಿದ್ದರು. ಈ ಅನಿರೀಕ್ಷಿತ ಘಟನೆಯಿಂದ ಕೇವಲ ಶಿಖಾರಿಪುರಕ್ಕೆ ಪರಿಚಯವಾಗಿದ್ದ ಆ ಯುವಜ ರಾತ್ರೋ ರಾತ್ರಿ ರಾಜ್ಯದಲ್ಲಿ ಹೆಸರುವಾಸಿಯಾದ ಆ ಯುವಕ ಬೇರಾರು ಅಲ್ಲ ರಾಜ್ಯದ ಇಂದಿನ ಬಲಿಷ್ಠ ನಾಯಕ ಬಿ.ಎಸ್.ಯಡಿಯೂರಪ್ಪ.

ಚಿಕ್ಕ ವಯಸ್ಸಿನಲ್ಲೇ ಕೋಪ , ಸಿಟ್ಟು ಹೋರಾಟದ ಮೂಲಕವೇ ಬದುಕು ಕಟ್ಟಿಕೊಂಡ ನಾಯಕ ಯಡಿಯೂರಪ್ಪ.!
ಸಾಮಾನ್ಯ ಪುರಸಭೆಯ ನಾಯಕನಾದ ಬಿ‌.ಎಸ್.ವೈ ಮುಖ್ಯಮಂತ್ರಿ ಆದ ಕಥೆ ಮಾತ್ರ ರೋಚಕ.! ರಾಜಗಾದಿ ಏರಲು ಯಡಿಯೂರಪ್ಪ ಸವೆಸಿದ್ದು ಕಲ್ಲು ಮುಳ್ಳಿನ ಕಣ್ಣೀರಿನ ಕಠಿಣದ ಹಾದಿ
ಬಿ.ಎಸ್.ವೈ ಹುಟ್ಟು ಹೋರಾಟಗಾರ ಬಿ.ಎಸ್.ಯಡಿಯೂರಪ್ಪ ಹೋರಾಟದ ಜೀವನವೇ ರೋಚಕ.

ಒಂದಷ್ಟು ಹುಡುಗರ ಜೊತೆ , ರೈತರ ಜೊತೆ ಸೇರಿ ತಪ್ಪುಗಳ ವಿರುದ್ದ ದ್ವನಿ ಎತ್ತುತ್ತಿದ್ದ ಯಡಿಯೂರಪ್ಪ ರೈಸ್ ಮಿಲ್ ನಲ್ಲಿ ಗುಮಾಸ್ತನಾಗಿ ದುಡಿದಿದ್ದರು ಎಂಬುದು ಗಮನಾರ್ಹ. ಮಂಡ್ಯ ಜಿಲ್ಲೆಯ ಬೂಕನಕೆರೆ ಗ್ರಾಮದ ಯಡಿಯೂರಪ್ಪ ಸಮಾಜಮುಖಿ ಹೋರಾಟಗಳಿಗೆ ಖ್ಯಾತಿಯಾದವರು. ಯಡಿಯೂರಪ್ಪ ಅಂದು ಇಂದು ಎಂದೂ ನಿಂತ ನೀರಲ್ಲ. ಕಾಲಿಗೆ ಚಕ್ರ ಕಟ್ಡಿಕೊಂಡ ಯಡಿಯೂರಪ್ಪ ನಿರಂತರ ದುಡಿಯುವ ಕರ್ಮಯೋಗಿ ಅಪ್ಪಟ ದೇಶ ಭಕ್ತ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಖಿನ ಬೂಕನಕೆರೆಯ ನಿವಾಸಿಯಾದ ಬಿ.ಎಸ್.ವೈ ಮಂಡ್ಯದಲ್ಲಿ ಬಿ.ಎ ಪದವಿಯ ವಿದ್ಯಾಭ್ಯಾಸ ಮುಗಿಸಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಎರಡನೇ ದರ್ಜೆಯ ಗುಮಾಸ್ತನಾಗಿ ಸೇವೆ ಸಲ್ಲಿಸುತ್ತಿದ್ದ ಬಿ.ಎಸ್.ವೈ ದೇಶ ಭಕ್ತಿ ಅವರನ್ನು ಆರ್.ಎಸ್.ಎಸ್ ಸೇರಲು ಪ್ರೇರೇಪಿಸಿತ್ತು.

ಅದಕ್ಕಾಗಿ ಬೆಂಗಳೂರಿಗೆ ತೆರಳಿ ಆರ್.ಎಸ್.ಎಸ್ ಸಂಘಟನೆಯಲ್ಲಿ ಸಕ್ರಿಯರಾದರು ನಂತರ ೧೯೬೩ ರಲ್ಲಿ ಶಿಖಾರಿಪುರದತ್ತ ಮುಖ ಮಾಡಿದ್ದರು. ಶಿಖಾರಿಪುರದ ರೈಸ್ ಮಿಲ್ ಮಾಲೀಕ ವೀರಭದ್ರಶಾಸ್ತ್ರಿ ತನ್ನ ರೈಸ್ ಮಿಲ್ ಗೆ ಕೆಲಸಗಾರನ ಹುಡುಕಾಟದಲ್ಲಿದ್ದರು ಆಗ ಅವರಿಗೆ ಕಣ್ಣಿಗೆ ಬಿದ್ದಿದ್ದೇ ಬಿ.ಎಸ್.ಯಡಿಯೂರಪ್ಪ. ರೈಸ್ ಮಿಲ್ ನಲ್ಲಿಯೇ ಕೆಲಸ ಮಾಡುತ್ತಿದ್ದ ಬಿ.ಎಸ್.ವ೧೯೬೩ ರಲ್ಲಿ ಶಿಖಾರಿಪುರದ ವೀರಭದ್ರ ಶಾಸ್ತ್ರಿಯವರ
ಮಗಳು ಮೈತ್ರಾದೇವಿಯವರನ್ನು ಮದುವೆ ಆದರು. ನಂತರ ಕುಟುಂಬ ಸಮೇತ ಶಿಖಾರಿಪುರದಲ್ಲೇ ನೆಲೆನಿಂತರು.

ತದನಂತರ RSS ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಬಿ.ಎಸ್.ವೈ ದಿನೇ ದಿನೇ ಶಿಖಾರಿಪುರದ ಯುವ ನಾಯಕರಾಗಿದ್ದರು. ತಾಲ್ಲೂಕಿನ ಕಾರ್ಯನಿರ್ವಾಹಕರಾದರು ೧೯೭೨ ರಲ್ಲಿ ಜನಸಂಘದ ಅದ್ಯಕ್ಷರಾದರು ಅಲ್ಲಿಂದ ಯಡಿಯೂರಪ್ಪ ರಾಜಕೀಯ ಜೀವನ ಶುರುವಾಯಿತು.ಶಿಖಾರಿಪುರದಲ್ಲಿ ಹೋರಾಟಗಳ ಮೂಲಕ ಹಂತ ಹಂತವಾಗಿ ಜನಮಾನಸದಲ್ಲಿ ನೆಲೆ ನಿಂತ ಯಡಿಯೂರಪ್ಪ ಅವರು ತನ್ನ ಜೊತೆಯಿದ್ದ ಎಲ್ಲರನ್ನೂ ಬೆಳೆಸುತ್ತಾ ಬಂದರು ಯಡಿಯೂರಪ್ಪ ಬೆಳೆದಂತೆ ಯಡಿಯೂರಪ್ಪ ಅವರನ್ನು ಕೊಲ್ಲಲು ಸಂಚು ರೂಪಿಸಲಾಯಿತು.

ಆದರೆ ಅವ್ಯಾವುವು ಪುರಸಭೆಯಿಂದ ವಿಧಾನಸಭೆ ವರೆಗೂ ಯಡಿಯೂರಪ್ಪ ಬರುವುದನ್ನು ತಡೆಯಲಾಗಲಿಲ್ಲ. ಪುರಸಭೆ ಚುನಾವಣೆಯಲ್ಲಿ ಜಾತಿಯ ಬೆಂಬಲ ಸಿಗದೆ ಇದ್ದಾಗ ತನ್ನ ಸ್ನೇಹಿತರು ಮತ್ತು RSS ಸದಸ್ಯರ ಬೆಂಬಲದಿಂದ ಪುರಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಗೆದ್ದು ತನ್ನ ಖದರ್ ತೋರಿಸಿದ್ದರು ಈ ಹಂತದಲ್ಲೂ ಯಡಿಯೂರಪ್ಪ ಹತ್ಯೆಗೆ ಸಂಚು ರೂಪಿಸಲಾಗಿತ್ತು ೧೯೭೭ ರಲ್ಲಿ ಪುರಸಭೆ ಅದ್ಯಕ್ಷರಾದ ಸಮಯದಲ್ಲಿ ಶಿಖಾರಿಪುರದ ಅಭಿವೃದ್ಧಿ ಕಾರ್ಯಗಳನ್ನು ಬಿ.ಎಸ್.ವೈ ಕೈಗೊಂಡಿದ್ದರು.

ದಿನೇ ದಿನೇ ಯಡಿಯೂರಪ್ಪ ವರ್ಚಸ್ಸು ಹೆಚ್ಚಾಗಿತ್ತು. ೧೯೭೮ ರ ಜೂನ್ ೨೦ ಬೆಳಗಿನ ಜಾವದ ಎಂಟು ಗಂಟೆ ಸಮಯದಲ್ಲಿ ಯಡಿಯೂರಪ್ಪ ಪುರಸಭೆಗೆ ಹೊರಟಾಗ ವ್ಯಕ್ತಯೋರ್ವ ಮಾರಕಾಸ್ತ್ರಗಳಿಂ ಮಾರಣಾಂತಿಕ ಹಲ್ಲೆ ನಡೆಸಿದ್ದ ಇದರಿಂದ ಬಿ.ಎಸ್.ವೈ ತಲೆಗೆ ಪೆಟ್ಟಾಗಿ ಸುಮಾರು ಒಂದು ತಿಂಗಳು ಕಾಲ ಯಡಿಯೂರಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಆಗಿತ್ತು. ಇದರಿಂದ ಇಡೀ ಶಿಖಾರಿಪುರದ ಜನತೆ ಅಘೋಷಿತ ಬಂದ್ ಆಚರಿಸಿದರು.ಶಿಖಾರಿಪುರದಲ್ಲಿ ಅಂದು ಯಡಿಯೂರಪ್ಪ ಪರ ನಡೆದ ಪ್ರತಿಭಟನೆ ಮತ್ತು ಅಘೋಷಿತ ವಾತಾವರಣ ಇಂದಿಗೂ ರಾಜ್ಯದ ಜನತೆ ಮರೆಯಲಾರದ ಘಟನೆಯಾಗಿಯೇ ಉಳಿದಿದೆ.

ಇದಾದ ನಂತರ ೧೯೭೮ ರಲ್ಲಿ ವಿಧಾನ ಸಭೆ ಚುನಾವಣಾ ಘೋಷಿಸಿತು ಆದರೆ ಯಡಿಯೂರಪ್ಪ ಅವರಿಗೆ ಟಿಕೆಟ್ ಸಿಗಲಿಲ್ಲ. ಯಡಿಯೂರಪ್ಪ ಅವರಿಗೆ ಟಿಕೆಟ್ ಸಿಗುತ್ತದೆ ಎಂದು ಸಾವಿರಾರು ಬೆಂಬಲಿಗರು ಬೆಂಗಳೂರಿನಲ್ಲಿ ಜಮಾಯಿಸಿದ್ದರು ಆದರೆ ಎನ್.ಡಿ.ಎ ಮೈತ್ರಿಕೂಟ ದೆಹಲಿಯಲ್ಲಿ ರಾಜ್ಯದ ಟಿಕೇಟ್ ಪ್ರಕಟಿಸಿತ್ತು ಇದರಿಂದ ಕಂಗಾಲಾದ ಬಿ.ಎಸ್.ವೈ ಬೆಂಬಲಿಗರು ದೆಹಲಿಗೆ ತೆರಳಲು ಯಡಿಯೂರಪ್ಪ ಅವರಿಗೆ ಫಂಡ್ ಕಲೆಕ್ಟ್ ಮಾಡಿದ್ದರು ಆದರೆ ಇದೆಲ್ಲವನ್ನು ಯಡಿಯೂರಪ್ಪ ನಿರಾಕರಿಸಿ ಸಂಯಮದಿಂದ ಶಿಖಾರಿಪುರಕ್ಕೆ ತೆರಳಿ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿ ಪಕ್ಷದ ಹೈಕಮಾಂಡ್ ಮನಗೆದ್ದಿದ್ದರು.!

ಎಂದೂ ಪ್ರಚಾರಕ್ಕಾಗಿ ಹೋರಾಟ ಮಾಡಿದವರಲ್ಲ ಆಡಳಿತದ ಹಾದಿ ತಪ್ಪಿದಾಗ ಹೋರಾಟದ ಮೂಲಕ ಸರ್ಕಾರದ ಕಣ್ತೆರೆಸಿದ ಕೀರ್ತಿ ಯಡಿಯೂರಪ್ಪ ಅವರದ್ದು.! ೧೯೭೩ ರ
ವಿಧಾನಸಭೆಯ ಚುನಾವಣೆಯನ್ನು ೨೩೦೦೦ ಮತಗಳ ಅಂತರದಿಂದ ಗೆಲ್ಲುವ ಮೂಲಕ ಯಡಿಯೂರಪ್ಪ ತನ್ನ ಸಾಮರ್ಥ್ಯವನ್ನು ದೆಹಲಿಗೂ ಸಾರಿದ್ದರು.ರಾಮಕೃಷ್ಣ ಹೆಗಡೆ ಕಾಲದಲ್ಲಿ ಸಚಿವ ಸ್ಥಾನದ ಅವಕಾಶ ಬಂದರೂ ಬಿ.ಜೆ.ಪಿ ಯಲ್ಲೇ ಉಳಿದು ತನ್ನ ನಿಷ್ಠೆ ಪ್ರದರ್ಶಿಸಿದ ಯಡಿಯೂರಪ್ಪ ಬರಪೀಡಿತ ಪ್ರದೇಶಗಳಲ್ಲಿ ಸೈಕಲ್ ಮೂಲಕ ಸಂಚರಿಸಿ ನೊಂದವರ ಕಣ್ಣೀರು ಹೊರೆಸಿದ ಯಡಿಯೂರಪ್ಪ ಬಕರ್ ಹುಕುಂ ಸಾಗುವಳಿ ಅವರ ಪರ ೧೯೮೭ ರಲ್ಲಿ ನಡೆಸಿದ ಹೋರಾಟ ಯಡಿಯೂರಪ್ಪ ಅವರಿಗೆ ರಾಜಕೀಯ ವರ್ಚಸ್ಸು ಹೆಚ್ಚಿಸಿತು.

ಬರಗಾಲ ಆವರಿಸಿದಾಗ ಸೈಕಲ್ ನಲ್ಲಿ ತೆರಳಿ ಬರಪೀಡಿತ ಅದ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ ಕೀರ್ತಿ ಯಡಿಯೂರಪ್ಪ ಅವರದ್ದು ನಂತರ ಎಸ್.ಎಂ ಕೃಷ್ಣ ಆಡಳಿತಾವಧಿಯಲ್ಲಿ ಕೂಲಿಗಾಗಿ ಕಾಳು ಯೋಜನೆಯಲ್ಲಿ ನಡೆದ ಅವ್ಯವಹಾರ ಬಯಲಿಗೆಳೆದು ದೇಶದಲ್ಲಿ ಗಮನ ಸೆಳೆದರು. ಸಿ.ಓ.ಡಿ ತನಿಖೆ ಆಗುವಂತೆ ಮಾಡಿದರು. ಜೀತ ವಿಮುಕ್ತಿ ಹೋರಾಟದ ಮೂಲಕ ೧೭೦೦ ಜೀತದಾಳುಗಳನ್ನು ಮುಕ್ತಿಗೊಳಿಸಿದ ಯಡಿಯೂರಪ್ಪ ಬಿ.ಜೆ.ಪಿ ರಾಜ್ಯಾದ್ಯಕ್ಷರಾಗಿದ್ದ ಸಮಯದಲ್ಲಿ ೧೯೮೮ ರಲ್ಲಿ ಬಸವನ ಬಾಗೇವಾಡಿ ಯಿಂದ ಬೆಂಗಳೂರಿನ ವರೆಗೆ ಯಡಿಯೂರಪ್ಪ ನಡೆಸಿದ ರೈತಜಾಥಾ ಎಂದಿಗೂ ರಾಜ್ಯ ರಾಜಕೀಯದಲ್ಲಿ ಮರೆಯುವಂತಿಲ್ಲ.

ರೈತ ಜಾಥಾದ ಮೂಲಕ ಯಡಿಯೂರಪ್ಪ ರೈತನಾಯಕ ಎಂಬುದನ್ನು ಜಗಜ್ಜಾಹೀರು ಮಾಡಿದ್ದರು.
ಜನತಾದಳ ಸರ್ಕಾರದಲ್ಲಿ ರಾಚಯ್ಯ ಅರಣ್ಯ ಸಚಿವರಾಗಿದ್ದ ಸಂಧರ್ಭದಲ್ಲಿ ಕಂದಾಯ ಇಲಾಖೆಯ ಸಿ.ಮತ್ತು ಡಿ ವರ್ಗೀಕರಣದ ಭೂಮಿಯನ್ನು ಅರಣ್ಯ ಇಲಾಖೆಗೆ ವಹಿಸಬೇಕೆಂಬ ಮಸೂದೆ ಮಂಡಿಸುತ್ತಿದ್ದರು ಆಗ ದಾವಿಸಿದ ಯಡಿಯೂರಪ್ಪ ಈ ಮಸೂದೆ ಮಂಡನೆಯಿಂದ ಬಕರ್ ಹುಕುಂ ರೈತರು ಬೀದಿ ಪಾಲಾಗುತ್ತಾರೆ , ಹಿಂದುಳಿದ ವರ್ಗಗಳ ರೈತರು ಬೀದಿಗೆ ಬರುತ್ತಾರೆ ಎಂದು ಯಡಿಯೂರಪ್ಪ ಶಾಂತ ಹಾಗೂ ಮನಕಲಕುವ ಪ್ರತಿಭಟನೆ ಮೂಲಕ ರಾಚಯ್ಯ ಕಣ್ಣು ತೆರೆಸಿದ ಕೀರ್ತಿ ಯಡಿಯೂರಪ್ಪ ಅವರದ್ದು. ಆ ಸಮಯದಲ್ಲಿ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ಈ ಮಸೂದೆ ಅಂಗಿಕಾರವಾಗುತ್ತದೆ ಪ್ರತಿಭಟಿಸಿ ಪ್ರಯೋಜನ ಇಲ್ಲ ಎಂದು ಕೈ ಕಟ್ಟಿ ಕುಳಿತಿತ್ತುಎಂಬುದು ಗಮನಿಸಬೇಕಾದ ಅಂಶವಾಗಿತ್ತು.!

ಆದರೆ ಯಡಿಯೂರಪ್ಪ ಸಧನದ ಭಾವಿಗಿಳಿದು ಪ್ರತಿಭಟಿಸಿ ಕಣ್ಣೀರು ಹಾಕಿದ್ದರು ಇದನ್ನ ಗಮನಿಸಿದ್ದ ವಾಟಾಳ್ ನಾಗರಾಜ್ ಸಭಾಪತಿಗಳ ಗಮನಕ್ಕೆ ಈ ವಿಷಯ ಮುಟ್ಟಿಸಿದ್ದರು ಇದನ್ನಿ ಮನಗೊಂಡ ಸಭಾದ್ಯಕ್ಷರು ಯಡಿಯೂರಪ್ಪ ಅವರಿಗೆ ಮಾತನಾಡಲು ಅವಕಾಶ ಕೊಟ್ಟಿದ್ದರು.ನಾನು ಮೂಕ ಸಾಕ್ಷಿ , ರಾಮಯ್ಯನವರು ಹಿರಿಯ ಮಂತ್ರಿಗಳು ಹಿಂದುಳಿದ ವರ್ಗದಿಂದ ಬಂದ ಅವರೇ ಹಿಂದುಳಿದ ವರ್ಗದ ರೈತರು ಸಾಗುವಳಿ ಮಾಡುತ್ತಿರುವ ಭುವಿಯನ್ನು ತೆರವು ಗೊಳಿಸುವ ಮಸೂದೆ ಮಂಡಿಸುತ್ತಿದ್ದಾರಲ್ಲ ಎಂದು ದುಃಖವಾಗಿದೆ ಮತ್ತು ನಾ ಇರುವಾಗಲೆ ಈ ಮಸೂಧೆ ಅಂಗಿಕಾರಕ್ಕೆ ಬರುತ್ತದೆ ಎಂದು ಬೇಸರದಿಂದ ಕುರ್ಚಿಯಿಂದ ಕೆಳಗಿದ್ದೇನೆ ಎಂದು ತಮ್ಮ ನೋವು ತೋಡಿಕೊಂಡಿದ್ದರು

ಇದರಿಂದ ರಾಚಯ್ಯ ಮಸೂಧೆ ಅಂಗೀಕಾರ ಕೈ ಬಿಟ್ಟರು ಸಾವಿರಾರು ರೈತರು ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದರು.ರಾಜ್ಯದ ಇತಿಹಾಸದಲ್ಲಿ ಈ ರೀತಿಯ ಮಾನವೀಯತೆಯ ಘಟನೆ ಎಂದೂ ನಡೆದಿರಲಿಲ್ಲ.! ಜೀತದಾಳು ವಿಮುಕ್ತಿಯಿಂದ ಕಾವೇರಿ ಹೋರಾಟದವರೆಗೂ ಯಡಿಯೂರಪ್ಪ ನಡೆಸಿದ ಹೋರಾಟ ಒಂದೆರಡಲ್ಲ ೧೯೮೩ ರಿಂದ ವಿಧಾನಸಭೆಯಲ್ಲಿ ಯಡಿಯೂರಪ್ಪ ಸದ್ದು ಮಾಡಿದರೆ ಆಡಳಿತ ಪಕ್ಷಗಳು ನಡುಗುತ್ತಿದ್ದವು ವಿರೋಧ ಪಕ್ಷದ ನಾಯಕನೂ ತನ್ನ ಹೋರಾಟದ ಮೂಲಕ ಸರ್ಕಾರದ ಕಿವಿ ಹಿಂಡಬಹುದು ಎಂಬುದನ್ನು ತೋರಿಸಿಕೊಟ್ಟ ನಿಪುಣ ಯಡಿಯೂರಪ್ಪ.! ಕೇವಲ ಎರಡು ಸ್ಥಾನಗಳಲ್ಲಿದ್ದ ಬಿ.ಜೆ‌.ಪಿ ಯನ್ನು ೧೧೫ ಸ್ಥಾನವನ್ನು ಗೆಲ್ಲುವ ಹಾಗೆ ಮಾಡಿದ ಛಲದಂಕ ಮಲ್ಲ ಯಡಿಯೂರಪ್ಪ.!

ಯಡಿಯೂರಪ್ಪ ಹಿಡಿದ ಹಠ ಸಾದಿಸೋರು ೨೦೦೪ ರಲ್ಲಿ ಅತಂತ್ರ ಸ್ಥಿತಿ ನಿರ್ಮಟಣವಾಗಿತ್ತು ಜೆ.ಡಿ.ಎಸ್ ಜೊತೆ ಕಾಂಗ್ರೆಸ್ ಮೈತ್ರಿ ಸರ್ಕಾರ ನಿರ್ಮಿಸಿ ನಂತರ ಬಿರುಕು ಮೂಡಿದ ಸಮಯದಲ್ಲಿ ಕುಮಾರಸ್ವಾಮಿ ಜೊತೆಗೂಡಿ ಯಡಿಯೂರಪ್ಪ ಸರ್ಕಾರ ರಚಿಸಿದರು ನಂತರ ಇಪ್ಪತ್ತು ತಿಂಗಳ ಆಡಳಿತ ನಡಿಸಿದ ಕುಮಾರಸ್ವಾಮಿ ನಂತರ ಯಡಿಯೂರಪ್ಪ ಅವರಿಗೆ ಅಧಿಕಾರ ಕೊಡಲು ಹಿಂದೇಟು ಹಾಕಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಯಡಿಯೂರಪ್ಪ ೨೦೦೮ ರಲ್ಲಿ ಕಂಡು ಕೇಳರಿಯದ ರೀತಿ ಬಿ.ಜೆ.ಪಿ ಸರ್ಕಾರ ನಿರ್ಮಿಸಿ ದಕ್ಷಿಣದ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ತಂದಿದ್ದರು. ರಾಜ್ಯದಲ್ಲಿ ಬಿ.ಜೆ.ಪಿ ಅಧಿಕಾರ ಬಂದಾಗ ರಾಷ್ಟ್ರೀಯ ಮಟ್ಟದಲ್ಲಿ ಹೈಕಮಾಂಡ್ ವಿಜಯೋತ್ಸವ ಆಚರಿಸಿತ್ತು.! ಇಡೀ ದೇಶದಲ್ಲಿ ರೈತರ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ತಮಗಿರುವ ರೈತಪ್ರೇಮವನ್ನು ದೇಶಕ್ಕೇ ಸಾರಿದರು.

ನಂತರ ಸರ್ಕಾರ ಜನಪ್ರಿಯ ಯೋಜನೆಗಳ ಮೂಲಕ ಲೋಕಸಭಾ ಚುನಾವಣೆಯಲ್ಲಿ ೧೯ ಸ್ಥಾನ ಗೆಲ್ಲುವ ಮೂಲಕ ಯಡಿಯೂರಪ್ಪ ಇಡೀ ದೇಶಕ್ಕೆ ತನ್ನ ಪವರ್ ತೋರಿಸಿಕೊಟ್ಟಿದ್ದರು ನಗರ , ಸ್ಥಳೀಯ ಚುನಾವಣೆಯಲ್ಲಿ ಕೂಡ ಯಡಿಯೂರಪ್ಪ ವರ್ಚಸ್ಸು ಹೆಚ್ಚಿಸಿತ್ತು. ಯಡಿಯೂರಪ್ಪ ಬೆಳವಣಿಗೆ ಕಂಡು ರಾಜ್ಯ ಬಿಜೆಪಿಯಲ್ಲೇ ಸಹಿಸಲಾಗಲಿಲ್ಲ. ರಾಜ್ಯದ ಅಭಿವೃದ್ಧಿಗಾಗಿ ಯಡಿಯೂರಪ್ಪ ತಂದ ಜನಪ್ರಿಯ ಯೋಜನೆಗಳು ರಾಷ್ಟ್ರ ವ್ಯಾಪಿ ಜನಬೆಂಬಲ ಪಡೆದಿದ್ದವು ,ರೈತ ಪರವಾಗಿ ಕೃಷಿ ಬಜೆಟ್ , ಭಾಗ್ಯಲಕ್ಷ್ಮಿ , ಮಿಷನ್ 20 ಅಂತಹ ಯೋಜನೆಗಳಿಗೆ ಸಿಕ್ಕ ಜನಪ್ರಿಯತೆ ಅಷ್ಟಿಷ್ಟಲ್ಲ.!

ಯಡಿಯೂರಪ್ಪ ಜನಪ್ರಿಯತೆ ಸ್ವತಃ ಬಿಜೆಪಿ ನಾಯಕರನ್ನು ಕಂಗೆಡಿಸಿತ್ತು ಜೊತೆಗೆ ಕಾಂಗ್ರೆಸ್ ಪಕ್ಷವನ್ನೂ ಚಿಂತೆಗೀಡಾಗುವಂತೆ ಮಾಡಿದ್ದು ಸುಳ್ಳಲ್ಲ ನಂತರ ನಡೆದ ಅಚ್ಚರಿಯ ಬೆಳವಣಿಗೆಗಳಲ್ಲಿ ಭ್ರಷ್ಟಾಚಾರ ಅರೋಪದಡಿ ಬಂಧನಕ್ಕೊಳಗಾದ ಯಡಿಯೂರಪ್ಪ ೨೩ ದಿನ ಜೈಲುವಾಸ ಅನುಭವಿಸಿದರು ಕೆಲವು ದಿನಗಳ ನಂತರ ಆರೋಪದಿಂದ ಮುಕ್ತಹೊಂದಿ ಕ್ಲೀನ್ ಚಿಟ್ ಕೂಡ ಪಡೆದರು ಆದರೆ ಅಷ್ಟರಲ್ಲಾಗಲೇ ರಾಜ್ಯ ಬಿ.ಜೆ‌.ಪಿ ಯಡಿಯೂರಪ್ಪ ಅವರನ್ನು ದೂರ ತಳ್ಳಿತ್ತು.

ಅತ್ಯಂತ ವಿಷಾದನೀಯ ಎಂಬಂತೆ ರಾಷ್ಟ್ರದ ನಾಯಕ ಎಲ್.ಕೆ ಅಡ್ವಾಣಿ ಕೂಡ ಯಡಿಯೂರಪ್ಪ ಅವರನ್ಜು ಅರ್ಥ ಮಾಡಿಕೊಳ್ಳದೆ ರಾಜ್ಯದ ನಾಯಕರ ಮಾತು ಕೇಳಿ ಯಡಿಯೂರಪ್ಪ ಅವರ ಮಾತಿಗೆ ಮನ್ನಣೆ ಕೊಟ್ಟಿರಲಿಲ್ಲ ಇದರಿಂದ ಬೇಸತ್ತ ಬಿ.ಎಸ್.ವೈ ನಂತರ ಬಿ.ಜೆ.ಪಿ ಯಿಂದ ಹೊರಬಂದ ಯಡಿಯೂರಪ್ಪ ಕೆ.ಜೆ‌.ಪಿ ಪಕ್ಷ ಸ್ಥಾಪಿಸಿ ಕಳೆದ ಚುನಾವಣೆಯಲ್ಲಿ ಪ್ರಭಲವಾದ ಮತಗಳನ್ನು ತನ್ನತ್ತ ಸೆಳೆದು ಬಿಜೆಪಿ ಗೆ ತಕ್ಕ ಪಾಠ ಕಲಿಸಿದ್ದರು.

ಇದನ್ನು ಅರಿತ ಬಿ‌ಜೆಪಿ ಯಡಿಯೂರಪ್ಪ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡಿತು ನಂತರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಯಡಿಯೂರಪ್ಪ ದೇಶದಲ್ಲೇ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದ ಎರಡನೇ ಅಭ್ಯರ್ಥಿಯಾದರು ಯಡಿಯೂರಪ್ಪ ಶಕ್ತಿ ಮನಗಂಡ ಮೋದಿ ಮತ್ತು ಅಮಿತ್ ಷಾ ಯಡಿಯೂರಪ್ಪ ಅವರನ್ನು ಮತ್ತೆ ರಾಜ್ಯಾದ್ಯಕ್ಷರನ್ನಾಗಿ ಮಾಡಿ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿದರು ಈಗ ಮತ್ತೆ ಚುನಾವಣೆ ಎದುರಿಸುತ್ತಿರುವ ಬಿ‌.ಎಸ್.ಯಡಿಯೂರಪ್ಪ ಮತ್ತೆ ಗೆಲುವಿನ ನಗೆ ಬೀರಲಿ ಎಂಬುದೇ ಅವರ ಅಭಿಮಾನಿಗಳ ಆಶಯ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here