ಸುಪ್ರೀಂ ಕೋರ್ಟ್ ಆದೇಶದಂತೆ ನಾಳೆ ವಿಧಾನಸಭೆಯಲ್ಲಿ ಸಂಜೆ 4 ಗಂಟೆಗೆ ಬಹುಮತ ಸಾಬೀತುಪಡಿಸಲು ಉಭಯ ಪಕ್ಷದ ಶಾಸಕರು ಮ್ಯಾಜಿಕ್ ನಂಬರ್ ಗಾಗಿ ಸರ್ಕಸ್ ಮಾಡುತ್ತಿದ್ದಾರೆ‌.ಮೇಲ್ನೋಟಕ್ಕೆ ಜೆಡಿಎಸ್ ಗೆ ಬೆಂಬಲಿಸಿರುವ ಕಾಂಗ್ರೆಸ್ ಶಾಸಕರು ಸೇರಿ ಎರಡು ಪಕ್ಷಗಳಿಂದ ಕುಮಾರಸ್ವಾಮಿ ನೇತೃತ್ವದಲ್ಲಿ ಸರ್ಕಾರ

ರಚಿಸಲು ಅವಕಾಶ ಇರುವುಂತೇ ಕಂಡುಬರುತ್ತಿದೆ.ಅತ್ತ ಬಿಜೆಪಿಗೆ ಇರುವುದು 104 ಜನರ ಶಾಸಕರ ಬೆಂಬಲ ಮಾತ್ರ.ಹೀಗಾಗಿ ಯಡಿಯೂರಪ್ಪ ಕೇವಲ ಎರಡು ದಿನದ ಮುಖ್ಯಮಂತ್ರಿಯಾದರಾ ? ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡಯತ್ತಿರುವಾಗಲೇ ಬಿಜೆಪಿ ಪಕ್ಷದಿಂದ ಆಪರೇಷನ್ ಕಮಲ ನಡೆಸಲು ಇನ್ನಿಲ್ಲದ ಕಸರತ್ತು ನಡೆಯುತ್ತಿದೆ.

ಈಗ ಬಿಜೆಪಿ ಪಕ್ಷಕ್ಕೆ ಜೆಡಿಎಸ್ ದೊಡ್ಡ ಶಾಕ್ ಕೊಡಲು ರೆಡಿಯಾಗಿದೆ.ಬಿಜೆಪಿಯ ಹಾಸನದ ಶಾಸಕ ಪ್ರೀತಂ ಗೌಡ ಅವರನ್ನು ಜೆಡಿಎಸ್ ಸಂಪರ್ಕಿಸಿದ್ದು ಹಾಸನನ ನವ ಬಿಜೆಪಿ ಶಾಸಕ ಪ್ರೀತಂ ಗೌಡ ಜೆಡಿಎಸ್ ಬೆಂಬಲಿಸಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿದ್ದು ಬಿಜೆಪಿಗೆ ಇದು ತೀವ್ರ ಹಿನ್ನಡೆಯಾಗಲಿದೆ.

ಈಗಾಗಲೇ ಜೆಡಿಎಸ್ ರಾಜ್ಯಾದ್ಯಕ್ಷ ಕುಮಾರಸ್ವಾಮಿ ಅವರು ಹಾಸನದ ಪ್ರೀತಂ ಗೌಡ ಅವರ ಜೊತೆ ಚರ್ಚೆ ನಡೆದಿದ್ದು ಜೆಡಿಎಸ್ ಗೆ ಬೆಂಬಲಿಸುವಂತೆ ಮಾತುಕತೆಯಾಗಿದೆ ಎನ್ನಲಾಗಿದೆ. ಹಾಸನದವರೇ ಆಗಿರುವುದರಿಂದ ಪ್ರೀತಂ ಗೌಡ ಜೆಡಿಎಸ್ ಗೆ ಬೆಂಬಲ ನೀಡುವ ಸಾಧ್ಯತೆ ಕೂಡ ಹೆಚ್ಚಾಗಿದೆ ಎನ್ನಲಾಗುತ್ತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here