ಸಮರ್ಥನೆ ಮಾಡಿಕೊಳ್ಳುವ ಭರದಲ್ಲಿ ನೀಡಿರುವ ವಿಲಕ್ಷಣ ಹೇಳಿಕೆಯೊಂದರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ ಬಿಜೆಪಿಯ ಸಂಸದರೊಬ್ಬರು. ಹೌದು ತಮ್ಮ ಕಾರ್ಯ ವೈಖರಿಯನ್ನು ಸಮರ್ಥನೆ ಮಾಡಿಕೊಳ್ಳಲು ಹೋಗಿ ಬಿಜೆಪಿ ಸಂಸದರೊಬ್ಬರು ಒಂದು ಹೇಳಿಕೆ ನೀಡಿದ್ದು, ಅದರಿಂದ ಈಗ ಅವರೇ ಮುಜುಗರ ಪಡುವಂತೆ ಆಗಿದೆ. ಅಸ್ಸಾಂನ ಬಿಜೆಪಿ ಸಂಸದರಾದ ಪಲ್ಲಾಬ್ ಲೋಚನ್ ದಾಸ್ ಅವರು ಮಾತನಾಡುತ್ತಾ,”ರಸ್ತೆಗಳು ಚೆನ್ನಾಗಿದ್ದರೆ ಅಪಘಾತಗಳು ಹೆಚ್ಚುತ್ತವೆ” ಎಂದು ಹೇಳಿಕೆ ನೀಡುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿರುವುದು ಮಾತ್ರವಲ್ಲದೆ ಅವರ ವಿರುದ್ಧ ಹಲವರು ತಮ್ಮ ಆಕ್ರೋಶ‌ ಹೊರಹಾಕಿದ್ದಾರೆ.

ಮಾನ್ಯ ಸಂಸದರು ಅಸ್ಸಾಂನ ತೇಜ್‍ಪುರದಲ್ಲಿ ನಡೆದಂತಹ ಒಂದು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ತಮ್ಮ ಭಾಷಣ ನಡೆಯುವಾಗ, ಅಸ್ಸಾಂನ ಕಳಪೆ ರಸ್ತೆಗಳ ದುಸ್ಥಿತಿಯ ಕುರಿತಾದ ವಿಚಾರವಾಗಿ ಅವರು ಉತ್ತರ ನೀಡುತ್ತಾ, ಇಂತಹುದೊಂದು ವಿಚಿತ್ರವಾದ ಹೇಳಿಕೆಯನ್ನು ಅವರು ನೀಡಿದ್ದಾರೆ. ಸಂಸದರು ಅಷ್ಟಕ್ಕೆ ಸುಮ್ಮನಾಗದೇ ಉತ್ತಮ ರಸ್ತೆಗಳನ್ನು ನಿರ್ಮಾಣ ಮಾಡುವುದರಿಂದ ಪ್ರಯೋಜನಗಳಿಗಿಂತ ಹೆಚ್ಚಾಗಿ, ಅಪಘಾತಗಳೇ ಹೆಚ್ಚೆಂದು ಅವರು ಹೇಳಿದ್ದಾರೆ.

ಸಚಿವರ ಈ ಹೇಳಿಕೆಯನ್ನು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕೆಟ್ಟ ರಸ್ತೆಗಳಲ್ಲಾದರೆ ಯುವಕರು ವಾಹನಗಳನ್ನು ನಿಧಾನವಾಗಿ ಚಲಾಯಿಸುವುದರಿಂದ ರಾಜ್ಯದಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತದೆ. ಆದ ಕಾರಣ ಹೆಚ್ಚು ಉತ್ತಮ ರಸ್ತೆಗಳು ಇರಬಾರದೆಂಬ ಅಸಂಬದ್ಧ ಹೇಳಿಕೆಯನ್ನು ನೀಡಿದ್ದಾರೆ. ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ಈಗಾಗಲೇ ಉತ್ತಮ ರಸ್ತೆಗಳನ್ನು ನಿರ್ಮಿಸಿದ್ದು, ಅದರಿಂದ ರಾಜ್ಯದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಿದೆ ಎಂದು ಪಲ್ಲಾಬ್ ಲೋಚನ್ ದಾಸ್ ಅವರು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here