ರಾಜ್ಯ ಸರ್ಕಾರದ ವಿರುಧ್ಧ ಭ್ರಷ್ಟಾಚಾರದ ಆರೋಪವನ್ನು ಮಾಡಿರುವ ಕಾಂಗ್ರೆಸ್ ವಿರುದ್ಧ ಕಾನೂನು ಹೋರಾಟವನ್ನು ನಡೆಸಲು ನಿರ್ಧರಿಸಿದೆ ಬಿಜೆಪಿ. ಮಲ್ಲೇಶ್ವರಂ ನ ಬಿಜೆಪಿ ಕಛೇರಿಯಲ್ಲಿ ಇಂದು ವಿಧಾನಪರಿಷತ್ ಸದಸ್ಯ ಎನ್. ರವಿ ಕುಮಾರ್ ಹಾಗೂ ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ್​​‌ನಾರಾಯಣ್‌ ಅವರಯ ಜಂಟಿ ಸುದ್ದಿಗೋಷ್ಟಿ ನಡೆಸಿದ ಸಂದರ್ಭದಲ್ಲಿ ಮಾತನಾಡಿ ಈ ಬಗ್ಗೆ ತಿಳಿಸಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪನವರ ಸರ್ಕಾರವು ಒಂದು ವರ್ಷದ ಆಡಳಿತವನ್ನು ಪೂರೈಸಿದ್ದು, ಅದು ಜನರ ಮೆಚ್ಚುಗೆ ಪಡೆದಿದೆ. ಆದರೆ ವಿಪಕ್ಷ ಕಾಂಗ್ರೆಸ್‌ ಇದನ್ನು ಸಹಿಸಲು ಸಾಧ್ಯವಾಗದೇ , ಹೊಟ್ಟೆ ಉರಿಯಿಂದ ಪ್ರತಿಭಟನೆ, ಆರೋಪಗಳನ್ನು ಮಾಡಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಯತ್ನ ಮಾಡುತ್ತಿದೆ ಎಂದು ಟೀಕೆ ಮಾಡಿದ್ದಾರೆ.

ಸರ್ಕಾರಕ್ಕೆ ಇಪ್ಪತ್ತು ಪತ್ರಗಳನ್ನು ಬರೆದರೂ ಉತ್ತರ ನೀಡಿಲ್ಲ ಎನ್ನುವ ಸಿದ್ಧರಾಮಯ್ಯನವರು ಯಾವ ಅಂಕಿ ಅಂಶಗಳ ಆಧಾರದ ಮೇಲೆ 4 ಸಾವಿರ ಕೋಟಿ ಖರ್ಚಾಗಿದೆ, 2 ಸಾವಿರ ಕೋಟಿ ಅಕ್ರಮವಾಗಿದೆ ಎಂದು ಹೇಗೆ ಹೇಳುತ್ತಿದ್ದಾರೆ? ಎಂದು ಪ್ರಶ್ನೆ ಮಾಡುತ್ತಲೇ ಅವರು ತಮ್ಮ ಹ್ಯೂಬ್ಲೋಟ್ ವಾಚ್ ಬಗ್ಗೆ ಉತ್ತರ ನೀಡಿದ್ದಾರೆಯೇ? ಎಂದು ಕಾಲೆಳೆದಿದ್ದಾರೆ ಎನ್.ರವಿಕುಮಾರ್ ಅವರು. ಅಲ್ಲದೇ ಈ ಸಂದರ್ಭದಲ್ಲಿ ಅವರು ಲೀಗಲ್ ನೋಟಿಸನ್ನು ಕೂಡಾ ಪ್ರದರ್ಶಿಸಿ , ಸತ್ಯಕ್ಕೆ ದೂರವಾದ ಆರೋಪ ಮಾಡಿರುವ ಡಿಕೆ ಶಿವಕುಮಾರ್​​ ಹಾಗೂ ಸಿದ್ದರಾಮಯ್ಯ ಅವರಿಗೆ ಲೀಗಲ್ ನೋಟಿಸ್ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here