ಚುನಾವಣೆಗೆ ಇನ್ನು ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿಯಿದ್ದು ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿದೆ!! ಇಂದು ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಬಿಜೆಪಿಯೂ ಕೂಡ “ನಮ್ಮ ಕರ್ನಾಟಕ ನಮ್ಮ ವಚನ” ಎಂಬ ಶೀರ್ಷಿಕೆಯಡಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ!! ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಮುನ್ನ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ತನ್ನ ಇಡೀ ಜೀವನವನ್ನು ಬಿಜೆಪಿ ಮತ್ತು ಆರ್‍ಎಸ್‍ಎಸ್‍ಗೆ ಮುಡಿಪಾಗಿಟ್ಟಿರುವ ವಿಜಯ್ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿ ನಂತರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು!!

-: ಪ್ರಣಾಳಿಕೆ ಮುಖ್ಯಾಂಶಗಳು :-

ರೈತರ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ

ನೀರಾವರಿ ಯೋಜನೆಗೆ 1 ಲಕ್ಷ ಕೋಟಿ ರೂ ಅನುದಾನ

1 ಲಕ್ಷದವರೆಗೆ ಕೃಷಿಸಾಲ ಮನ್ನಾ

ಸರಕಾರಿ ಸಂಘಗಳಲ್ಲಿನ 1 ಲಕ್ಷದವರೆಗೆ ಸಾಲ ಮನ್ನಾ

ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲಾಪ್‍ಟಾಪ್ ವಿತರಣೆ

* ಕೆ.ಎಂಎಫ್ ಮೂಲಕ ಹೈನುಗಾರಿಕೆ, ಪಶುಸಂಗೋಪನೆಗೆ ಹಣ ಮೀಸಲು

* ರೈತ ಬಂಧು ನಿಧಿ ಸ್ಥಾಪನೆ

* ರೈತರಿಗೆ ಚೀನಾ ಇಸ್ರೇಲ್ ಪ್ರವಾಸ

* ಗೋ ಹತ್ಯಾ ನಿಷೇಧಕ್ಕೆ ಮರುಜೀವ- ಗೋ ಸೇವಾ ಆಯೋಗ ಪುನರಾರಂಭ

* ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಮಂಗಳ ಭಾಗ್ಯ

* ಲೋಕಾಯುಕ್ತ ಸಂಸ್ಥೆ ಬಲವರ್ಧನೆ

* ಜಿಲ್ಲೆಯ ಮೂರು ತಾಲೂಕಿಗೆ ಒಂದು ಮುಖ್ಯಮಂತ್ರಿ ಅನ್ನದಾನ ಕ್ಯಾಂಟೀನ್

* ಒಣ ಭೂಮಿ ರೈತರಿಗೆ 10 ಸಾವಿರ ನಗದು

* ಬಿಪಿಎಲ್ ಕಾರ್ಡ್‍ದಾರರಿಗೆ ಧಾನ್ಯಗಳ ವಿತರಣೆ

* ಎಲ್ಲಾ ತಾಲೂಕಗಳಿಗೆ 108 ಸೇವೆ

* ರೈತ ಹೆಣ್ಣು ಮಕ್ಕಳಿಗೆ ಸ್ಮಾರ್ಟ್‍ಫೋನ್ ವಿತರಣೆ

* 8,9,10 ನೇ ತರಗತಿಯ ಎಸ್‍ಸಿ /ಎಸ್‍ಟಿ ಹೆಣ್ಣು ಮಕ್ಕಗಳಿಗೆ ನಗದು

* ಡಾ.ಬಿ.ಆರ್ ಅಂಬೇಡ್ಕರ್ ಸಂಬಂಧಿಸಿದ ಕ್ಷೇತ್ರಗಳ ತೀರ್ಥಕ್ಷೇತ್ರಗಳಿಗೆ ಹಣ

* ಎಸ್‍ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ಮತ್ತು

* ಎಸಿಬಿ ರದ್ದು ಮತ್ತೆ ಲೋಕಾಯುಕ್ತಕ್ಕೆ ಪೂರ್ಣಾಧಿಕಾರ

* ರಾಜ್ಯದ ಸರಕಾರಿ ಕಾಲೇಜುಗಳಲ್ಲಿ ಉಚಿತ ಶಿಕ್ಷಣದ ಭರವಸೆ

* ಪ್ರತೀ ಜಿಲ್ಲೆಗೆ ಮೆಡಿಕಲ್ ಕಾಲೇಜು ಭರವಸೆ

*ಬಿಪಿಎಲ್ ಕಾರ್ಡ್‍ದಾರರಿಗೆ 3 ಗ್ರಾಮ್ ಚಿನ್ನ 25 ಸಾವಿರ ರೂ ಹಣ ವಿತರಣೆ!!

* ಗ್ರಾಮೀಣ ಪ್ರದೇಶದಲ್ಲಿ 24*7 3 ಪೇಸ್ ವಿದ್ಯುತ್ ಪೂರೈಕೆ.

* ಜೆ.ಪಿ.ಸದನ’ ಯೋಜನೆಯಡಿ ಹಿಂದುಳಿದ ವರ್ಗ ಹಾಗೂ ಇತರೆ ವರ್ಗದವರಿಗೆ 2 ಲಕ್ಷ ರೂ. ವಸತಿ ನಿರ್ಮಾಣ.

*ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಅಡಿ ಬಿಪಿಎಲ್ ಕುಟುಂಬಕ್ಕೆ 3 ಲಕ್ಷದವರೆಗೆ ಉಚಿತ ಚಿಕಿತ್ಸೆ ವ್ಯವಸ್ಥೆ.

*1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಪಾಹಾರ ಯೋಜನೆ ಜತೆಗೆ 2 ಜತೆ ಸಮವಸ್ತ್ರ ವಿತರಣೆ.

*ಭಾಗ್ಯ ಲಕ್ಷ್ಮೀ ಯೋಜನೆಯ ಪೆÇ್ರೀತ್ಸಾಹ ಧನ 1 ಲಕ್ಷದಿಂದ 2 ಲಕ್ಷಕ್ಕೆ ಏರಿಕೆ ಮತ್ತು

*ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಕ್ರೀಡಾ ಸೌಲಭ್ಯಕ್ಕೆ 100 ಕೋಟಿ ಮೀಸಲು.

* ವಾಲ್ಮೀಕಿ ಯೋಜನೆಯಡಿ 400 ಎಸ್ಟಿ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಶಿಕ್ಷಣ ಹಾಗೂ ಮದಕರಿನಾಯಕ ಯೋಜನೆಯಡಿ ವಸತಿಗೆ 6000 ಕೋಟಿ ಮೀಸಲು.

* ರಾಜ್ಯಾದ್ಯಂತ 300 ಅನ್ನಪೂರ್ಣ ಕ್ಯಾಂಟೀನ್ ನಿರ್ಮಾಣ.

* ಸೌಭಾಗ್ಯ ಯೋಜನೆಯಡಿ ಪ್ರತಿ ಮನೆಗೂ ವಿದ್ಯುತ್ ಸಂಪರ್ಕ. ರಾಜ್ಯದಲ್ಲಿ ಸೌರಶಕ್ತಿ ಉತ್ಪಾದನೆ ಹೆಚ್ಚಿಸಲು ಸಹಾಯಧನ. ಕರ್ನಾಟಕ ಮೂಲ ಹೆದ್ದಾರಿಯ ನಿರ್ಮಾಣ. ಕೈಗಾರಿಕಾ ಅಭಿವೃದ್ಧಿಯ ಪುನಶ್ಚೇತನ ಹಾಗೂ ಶೌಚಗೃಹಗಳ ನಿರ್ಮಾಣ.

* ಬೆಂಗಳೂರನ್ನು ವಿಶ್ವದರ್ಜೆಗೆ ಏರಿಸಲು ಬೆಂಗಳೂರು ಕಾಯ್ದೆ ಎಂಬ ಹೊಸ ಕಾಯ್ದೆ ಜಾರಿ. ಬೆಂಗಳೂರಿನ ಉಪನಗರ ರೈಲ್ವೆ ಕಾಮಗಾರಿ ಪೂರ್ಣಕ್ಕೆ ಕ್ರಮ. ಬೆಂಗಳೂರು ಕೆರೆಗಳನ್ನು ಸ್ವಚ್ಛಗೊಳಿಸಿ ಅಭಿವೃದ್ಧಿ. ಕಸದ ಸಮಸ್ಯೆಯನ್ನು ನಿವಾರಿಸಲು ಕ್ರಮ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here