ಚುನಾವಣಾ ದಿನಾಂಕಕ್ಕೆ ಕ್ಷಣಗಣನೆ ಶುರುವಾಗಿರುವಂತೆಯೇ ರಾಜಕೀಯ ಪಕ್ಷಗಳಲ್ಲಿ ಪ್ರಚಾರದ ಚಟುವಟಿಕೆಗಳು ಗರಿಗೆದರಿವೆ ಹಾಗೆಯೇ ರಾಜ್ಯದ ಪ್ರಮುಖ ಪಕ್ಷಗಳಾದ ಬಿ.ಜೆ.ಪಿ , ಕಾಂಗ್ರೆಸ್ , ಮತ್ತು ಜೆ.ಡಿ.ಎಸ್ ಪಕ್ಷಗಳಲ್ಲಿ ಒಳಗೊಳಗೇ ತಳಮಳ ಶುರುವಾಗಿದೆ. ಹಲವಾರು ಟಿ‌.ವಿ ಚಾನೆಲ್ ಗಳು ಮತ್ತು ರಾಷ್ಟೀಯ ಮಾದ್ಯಮಗಳ ಸಮೀಕ್ಷೆಗಳಲ್ಲಿ ಕೆಲವು ಕಾಂಗ್ರೆಸ್ ಗೆ ಬಹುಮತ ಸಿಗಲಿವೆ ಎಂದು ಹೇಳಿದರೆ ಇನ್ನೂ ಕೆಲವು ಮಾದ್ಯಮಗಳು ಬಿ.ಜೆ.ಪಿ ಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ವರದಿ ಮಾಡಿದೆ ಆದರೆ ಅತಿ ಹೆಚ್ಚು ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿ ಅತಂತ್ರ ಪಲಿತಾಂಶ ಸಿಗಲಿವೆ ಎಂದೇ ವರದಿಯಾಗಿದೆ.

ಆದರೆ ಮೇ ೧೨ ರಂದು ಮತದಾರ ಯಾರ ಪರ ಮತ ಚಲಾಯಿಸಲಿದ್ದಾನೆ ಎಂಬುದು ಮಾತ್ರ ನಿಗೂಢವಾಗಿಯೇ ಉಳಿದಿರುತ್ತದೆ.ಕಳೆದ ಬಾರಿಯ ವಿಧಾನಸಭಾ ಚುನಾವಣೆಯ ಫಲಿತಾಂಶ ಮತ್ತು ಶೇಖಡವಾರು ಮತದಾನ ಮತ್ತು ಯಾವ ಪಕ್ಷ ಹೆಚ್ಚು ಮತ ತೆಗೆದುಕೊಂಡಿದೆ ಎಂಬ ಅಂಕಿ ಅಂಶಗಳನ್ನು ಪರಿಗಣಿಸಿದರೆ ಈ ಭಾರಿ ಬಿ.ಜೆ.ಪಿ ಯೇ ಅಧಿಕಾರ ಹಿಡಿಯುವ ಲಕ್ಷಣಗಳು ಹೆಚ್ಚಾಗಿವೆ ಎಂದು ಹೇಳಲಾಗುತ್ತಿದೆ.

ಕಳೆದ ಬಾರಿ ಯಡಿಯೂರಪ್ಪ ನೇತೃತ್ವದಿಂದ ವಂಚಿತವಾಗಿದ್ದ ಬಿ.ಜೆ.ಪಿ ಹಾಗು ಹೆಚ್ಚು ಸ್ಥಾನಗಳನ್ನು ಗಳಿಸಲು ವಿಫಲವಾಗಿತ್ತು. ಕೆ.ಜೆ.ಪಿ ಎಂಬ ಹೊಸ ಪಕ್ಷ ಸ್ಥಾಪಿಸಿದ್ದ ಬಿ.ಎಸ್.ಯಡಿಯೂರಪ್ಪ ಲಿಂಗಾಯತ ಮತ್ತು ವೀರಶೈವ ಸಮುಧಾಯದ ಹಾಗೂ ತನ್ನದೇ ಆದ ಮತವರ್ಗವನ್ನು ತನ್ನತ್ತ ಸೆಳೆದಿದ್ದರು ಅದರ ಪರಿಣಾಮ ಬಿ‌ಜೆ‌ಪಿಗೆ ಬರಬೇಕಾಗಿದ್ದ ಮತಗಳು ಹರಿದು ಹಂಚಿಹೋಗಿದ್ದವು ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಆದರೆ ಯಡಿಯೂರಪ್ಪ ಅವರು ಈ ಬಾರಿ ಮತ್ತೆ ಬಿ.ಜೆ.ಪಿ ಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದು ಸಹಜವಾಗಿಯೇ ಬಿ‌.ಜೆ‌.ಪಿ ಗೆ ಆನೆಬಲ ತಂದುಕೊಟ್ಟಿದೆ.

ಜೊತೆಗೆ ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯ ಸಮಯದಲ್ಲಿ ಮೋದಿ ಹವಾ ಇರಲೇ ಇಲ್ಲ ಯಾಕೆಂದರೆ ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಮೋದಿ ಎಂಬ ಹೆಸರು ಹವಾ ಸೃಷ್ಠಿಸಿತ್ತು. ಅದು ಈಗಲು ಇದ್ದು ಮೋದಿ ಮೇನಿಯಾ ರಾಜ್ಯ ಬಿಜೆಪಿಗೆ ವರದಾನವಾಗುವ ಸಾದ್ಯತೆ ಹೆಚ್ಚಿದೆ. ಅದೂ ಅಲ್ಲದೆ ಕರ್ನಾಟಕ ರಾಜ್ಯದಲ್ಲಿ ಸದ್ಯದ ಮಟ್ಟಿಗೆ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಇಬ್ಬರೂ ತನ್ನದೇ ಆದ ಮತಗಳನ್ನು ಸೃಷ್ಟಿಸಿಕೊಂಡಿರುವ ನಾಯಕರು.

ಇನ್ನು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ಸುಗಮವಾಗಿದ್ದರೂ ಕೂಡ ಈ ಬಾರಿ ಚುನಾವಣೆಗೂ ಮುನ್ನವೇ ಡಿ.ಕೆ.ಶಿವಕುಮಾರ್ , ಜಿ‌.ಪರಮೇಶ್ವರ್ ಮತ್ತು ಮಲ್ಲಿಕಾರ್ಜುನ ಖರ್ಗೆ ತಾವೇಕೆ ಮುಖ್ಯಮಂತ್ರಿ ಆಗಬಾರದು ಎಂದು ಹೇಳಿರುವುದು ಮತ್ತು ದಲಿತ ಮುಖ್ಯಮಂತ್ರಿ ಕೂಗು ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಗಾದಿಗೆ ಮಾರಕವಾಗಿರುವುದು ಪ್ರಬಲ ಕುರುಬ ಸಮುದಾಯದ  ಮತಗಳ ಮೇಲೆ ಪರಿಣಾಮ ಬೀರಿದೆ ಎಂದು ರಾಷ್ಟ್ರೀಯ ವಾಹಿನಿ ವರದಿ ಮಾಡಿದೆ.

ಇನ್ನು ಜೆ.ಡಿ.ಎಸ್ ಮೂರನೇ ಸ್ಥಾನ ಅಲಂಕರಿಸುವುದು ಎಂದು ಮಾದ್ಯಮಗಳ ಸಮೀಕ್ಷೆ ಹೇಳುತ್ತಿದ್ದು ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ಎದುರಾದರೆ ಜೆ.ಎಂದು. ಎಸ್ ಪಕ್ಷವೇ ನಿರ್ಣಾಯಕ ಎಂಬುದನ್ನು ಯಾರೂ ಮರೆಯುವಂತಿಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here