ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಸುಮಲತ ಅವರ ಗೆಲುವಿನ ನಂತರ ಮಾತನಾಡುತ್ತಾ ಸುಮಲತ ಅವರ ಗೆಲುವು ಸಾಮಾನ್ಯವಲ್ಲ, ಆದರೆ ಬಿಜೆಪಿ ಅವರಿಗೆ ಬೇಷರತ್ ಆಗಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತ ಅವರಿಗೆ ಬೆಂಬಲ ನೀಡಿತ್ತು. ಆದ್ದರಿಂದ ಸುಮಲತಾ ಅವರು ತಾವಾಗಿಯೇ ನಿರ್ಧರಿಸಿ ಎನ್ಡಿಎ ಗೆ ಬೆಂಬಲ ನೀಡದರೆ, ಅದು ಎಲ್ಲರಿಗೂ ಗೌರವ ಬರುವುದೆಂದು ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು ಸುಮಲತ ಅವರು ಕರ್ನಾಟಕದ ಸರ್ಕಾರವನ್ನು ಎದುರಿಸಿ ವಿಜಯ ಸಾಧಿಸಿದ್ದಾರೆ. ಈ ಮೂಲಕ ಮಂಡ್ಯ ಸ್ವಾಭಿಮಾನದ ಜಿಲ್ಲೆ ಎಂಬುದನ್ನು ಜನರು ಸಾಬೀತು ಮಾಡಿದ್ದಾರೆ. ಸುಮಲತ ಅವರ ಗೆಲುವು ಮೈತ್ರಿ ಸರ್ಕಾರಕ್ಕೆ ಕಪಾಳ ಮೋಕ್ಷದಂತಾಗಿದೆ ಎಂದಿದ್ದಾರೆ.

ಬಿಜೆಪಿಯು ಸುಮಲತಾ ಅವರಿಗೆ ಬೆಂಬಲ ನೀಡುವಾಗ ಸಂದರ್ಭದಲ್ಲಿ ಯಾವುದೇ ಷರತ್ತನ್ನು ವಿಧಿಸಿರಲಿಲ್ಲ. ಅವರಿಂದ ನಮ್ಮ ಅಪೇಕ್ಷೆಯೇನಿಲ್ಲ, ಅವರೊಂದಿಗೆ ಯಾವ ಕರಾರು ಮಾಡಿಕೊಂಡಿಲ್ಲ. ಫಲಿತಾಂಶದ ನಂತರ ಕೂಡಾ ನಿಲುವಿಗೆ ಬದ್ಧವಾಗಿದ್ದೇವೆಂದ ಶ್ರೀನಿವಾಸ್ ಅವರು, ಈಗ ಸುಮಲತ ಅವರು, ತಾವಾಗಿಯೇ ಎನ್ ಡಿ ಎಗೆ ಬೆಂಬಲ ಕೊಟ್ಟರೆ ಎಲ್ಲರಿಗೂ ಗೌರವ ಬರುತ್ತದೆ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಅವರು ಗುಡುಗಿದರಾದರೂ, ಮೈತ್ರಿ ಸರ್ಕಾರವನ್ನು ಬೀಳಿಸುವುದು ಬೇಡ ಎಂದಿದ್ದಾರೆ. ಏಕೆಂದರೆ ಸರ್ಕಾರ ತಾನಾಗಿಯೇ ಬೀಳುತ್ತದೆ ಎಂದು ಅವರ ಅಭಿಪ್ರಾಯವಾಗಿದೆ.

ಚುನಾವಣಾ ಫಲಿತಾಂಶದ ನಂತರ ಕುಮಾರ ಸ್ವಾಮಿಯವರು ಮತ್ತು ಸಿದ್ದರಾಮಯ್ಯನವರಿಗೆ ಪ್ರಮಾದವಾಗಿದೆ ಎಂದು ಈಗ ಹೇಳುತ್ತಿದ್ದಾರೆ. ಇವರ ನಡುವೆ ಆಗಿದ್ದ ಹೊಂದಾಣಿಕೆ ಕೇವಲ ಅಧಿಕಾರ ದಾಹಕ್ಕಾಗಿ ಕುರ್ಚಿಗಾಗಿ ಎಂಬ ಸತ್ಯವನ್ನು ರಾಜ್ಯದ ಜನರು ಅರಿತುಕೊಂಡು, ಅವರನ್ನು ಜನರೇ ಮನೆಗೆ ಕಳುಹಿಸಿದ್ದಾರೆ. ಅಲ್ಲದೆ ಘಟನಾನುಘಟಿಗಳು ಎನಿಸಿಕೊಂಡವರು ಈ ಬಾರಿ ಸೋಲು ಅನುಭವಿಸಿದ್ದು, ಅವರ ಸೋಲಿಗೂ ಕೂಡಾ ಅಧಿಕಾರದ ಆಸೆಯೇ ಒಂದು ಕಾರಣ ಎಂದು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here