2009 ರಲ್ಲಿ ತೆಲುಗು ಚಿತ್ರರಂಗದಲ್ಲಿ ಒಂದು ಸಂಚಲವನ್ನು ಸೃಷ್ಟಿಸಿದ್ದ ಸಿನಿಮಾ ಅಂದರೆ ಕೋಡಿ ರಾಮಕೃಷ್ಣ ನಿರ್ದೇಶನದ , ಅನುಷ್ಕ ಶೆಟ್ಟಿ ಅವರ ಅಭಿನಯದ ‘ಅರುಂಧತಿ’ ಈ ಸಿನಿಮಾ ಟಾಲಿವುಡ್ ಮಾತ್ರವಲ್ಲದೆ ದಕ್ಷಿಣ ಭಾರತದಲ್ಲೇ ಸಂಚಲನ ಸೃಷ್ಟಿಸಿದರೆ, ಈ ಸಿನಿಮಾದ ಮೂಲಕ ಅನುಷ್ಕ ತಮ್ಮ ನಟನಾ ಸಾಮರ್ಥದಿಂದಾಗಿ ಒಂದು ಹೊಸ ವರ್ಚಸ್ಸನ್ನು ನೀಡಿದ ಸಿನಿಮಾ ಎಂದರೂ ಕೂಡಾ ತಪ್ಪಾಗಲ್ಲ. ಅದಾದ ನಂತರ ದಕ್ಷಿಣದಲ್ಲಿ ಅನುಷ್ಕ ಅವರಿಗಾಗಿಯೇ ಪಾತ್ರಗಳು ಸೃಷ್ಟಿಯಾಗ ತೊಡಗಿದವು ಎಂಬುದು ಕೂಡಾ ನಿಜ.

ಈಗ ಈ ವಿಷಯ ಏಕೆಂದರೆ ಅರುಂಧತಿ ಬರೋಬ್ಬರಿ ಹತ್ತು ವರ್ಷಗಳಾದರೂ ತನ್ನ ಸ್ಮರಣೆಗಳನ್ನು ಬಿಟ್ಟಿದ್ದು, ಇದೀಗ ಅರುಂಧತಿ ಸಿನಿಮಾವನ್ನು ಬಾಲಿವುಡ್ ನಲ್ಲಿ ರಿಮೇಕ್ ಮಾಡಲು ಸಿದ್ಧತೆಗಳು ನಡೆದಿದ್ದು, ಮತ್ತೊಮ್ಮೆ ಅರುಂಧತಿ ಸದ್ದು ಮಾಡುತ್ತಿದೆ. ಇನ್ನು ಹಿಂದಿಯಲ್ಲಿ ಅನುಷ್ಕ ಅವರ ಪಾತ್ರ ಯಾರು ಮಾಡಲಿದ್ದಾರೆ ಎಂಬ ವಿಚಾರಕ್ಕೆ ಕೂಡಾ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮೊದಲಿಗೆ ಅರುಂಧತಿಯ ಹಿಂದಿ ಮೇಕಿಂಗ್ ನಲ್ಲಿ ಕರೀನಾ ಕಪೂರ್ ನಾಯಕಿಯಾಗಲಿದ್ದಾರೆ ಎಂಬ ಸುದ್ದಿಗಳು ದಟ್ಟವಾಗಿದ್ದವು.

ಇದಾದ ನಂತರ ಒಂದು ವೇಳೆ ಕರೀನಾ ಕಪೂರ್ ಇಲ್ಲ ಎಂದಾದರೆ ಆ ಜಾಗದಲ್ಲಿ ಅನುಷ್ಕ ಶರ್ಮಾ ಅವರನ್ನು ಆರಿಸಲಾಗುತ್ತದೆ ಎಂಬ ಸುದ್ದಿಗಳು ಕೂಡಾ ಹರಿದಾಡಿತ್ತು. ಅದಾದ ನಂತರ ಈಗ ಮತ್ತೊಂದು ಹೊಸ ಸುದ್ದಿ ಹರಡಿದ್ದು, ಅರುಂಧತಿ ಪಾತ್ರಕ್ಕೆ ದೀಪಿಕಾ ಪಡುಕೋಣ್ ಅವರನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ ಎನ್ನಲಾಗಿದ್ದು, ಬಹುತೇಕ ದೀಪಿಕಾ ಈ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆಯಾದರೂ, ಬಾಹುಬಲಿ ನಂತರ ಆಲ್ ಇಂಡಿಯಾ ಫೇಮಸ್ ಆಗಿರುವ ಅನುಷ್ಕಾ ಅವರೇ ತಮ್ಮ ಪಾತ್ರವನ್ನು ನಿರ್ವಹಿಸುವ ಅವಕಾಶ ದೊರೆತರೂ ವಿಶೇಷವೇನಿಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here