ರವಿವರ್ಮ‌ ನಿರ್ದೇಶನದ , ಡಾ. ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಚಿತ್ರ ರುಸ್ತುಂ. ಟಗರು ಮಫ್ತಿಯ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾಗಳ ಬಳಿಕ ಮತ್ತೊಮ್ಮೆ ಮಾಸ್ ಅವತಾರ ಎತ್ತಿರುವ ಶಿವಣ್ಣನ ರುಸ್ತುಂ ಈಗಾಗಲೇ ಸ್ಯಾಂಡಲ್ ವುಡ್ ಪ್ರೇಕ್ಷಕರು ತುದಿಗಾಲಿನಲ್ಲಿ ಕಾಯುವಂತೆ ಮಾಡಿರುವುದು ಗೊತ್ತೇ ಇದೆ.ಇದೀಗ ಹೊಸ ವಿಷಯ ಏನೆಂದರೆ ಈ  ಚಿತ್ರ ಕೇವಲ ಅಭಿಮಾನಿಗಳು ಹಾಗೂ ಸಿನಿ ರಸಿಕರು ಮಾತ್ರವಲ್ಲದೆ ಬಾಲಿವುಡ್ ಸ್ಟಾರ್ ಗಳು ಕೂಡಾ ಈ ಚಿತ್ರವನ್ನು ನೋಡಲು ಕಾಯುತ್ತಿದ್ದಾರೆ ಎಂದು ಖುದ್ದು ನಿರ್ದೇಶಕ ರವಿವರ್ಮ ಅವರೇ ಹೇಳಿದ್ದಾರೆ. ಬಾಲಿವುಡ್ ನ ಸೂಪರ್ ಸ್ಟಾರ್ ಗಳಾದ ಸಲ್ಮಾನ್ ಖಾನ್ , ಶಾರುಖ್ ಖಾನ್ , ಅಜಯ್ ದೇವಗನ್, ಪ್ರಭುದೇವ ಹಾಗೂ ತೆಲುಗು ನಟ ನಾಗಾರ್ಜುನ ಕೂಡಾ ಈ ಸಿನಿಮಾ ನೋಡಲು ಕಾತುರರಾಗಿದ್ದಾರೆ ಎಂದು ನಿರ್ದೇಶಕರು ಹೇಳಿದ್ದಾರೆ.

ಸ್ಟಂಟ್ ಮಾಸ್ಟರ್ ಆಗಿ ತನ್ನ ಪ್ರತಿಭೆಯನ್ನು ತೋರಿಸುತ್ತಿದ್ದ ರವಿ ವರ್ಮ ಅವರು ಇದೇ ಮೊದಲ ಬಾರಿಗೆ ಚಿತ್ರವೊಂದರ ನಿರ್ದೇಶನಕ್ಕೆ ಕೈ ಹಾಕಿದ್ದು, ರುಸ್ತುಂ ಅವರ ಮೊದಲ ಸಿನಿಮಾ ಆಗಲಿದೆ. ತಮ್ಮ ಚೊಚ್ಚಲ ಚಿತ್ರಕ್ಕೆ ಅಗತ್ಯ ಇರುವ ಎಲ್ಲಾ ಕಮರ್ಷಿಯಲ್ ಹಂಗುಗಳನ್ನು ಹಾಗೂ ಮಾಸ್ ಶೈಲಿಯನ್ನು ಅಚ್ಚುಕಟ್ಟಾಗಿ ಈ ಚಿತ್ರಕ್ಕೆ ಅಳವಡಿಸಿದ್ದು, ಜನರನ್ನು ರಂಜಿಸಲು ಬೇಕಾಗಿರುವ ಎಲ್ಲಾ ಅಂಶಗಳನ್ನು ಈ ಚಿತ್ರದಲ್ಲಿ ಇಟ್ಟಿದ್ದಾರೆ. ಇದರಲ್ಲಿ ಪೊಲೀಸ್ ಕಥಾನಕ ಇರುವುದರಿಂದ ಇದೊಂದು ಪಕ್ಕಾ ಆ್ಯಕ್ಷನ್ ಎಂಟರ್ಟೈನ್ಮೆಂಟ್ ನೀಡುವುದರಲ್ಲಿ ಅನುಮಾನವೇ ಇಲ್ಲ.

ಬಾಲಿವುಡ್ ನ ಖ್ಯಾತ ನಟರಾದ ವಿವೇಕ್ ಓಬೆರಾಯ್ ಕೂಡಾ ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಟಂಟ್ ಮಾಸ್ಟರ್ ಆಗಿ ಬಾಲಿವುಡ್ ನಲ್ಲಿ ಕೆಲಸ ಮಾಡಿರುವ ರವಿವರ್ಮ ಅವರು ಚೊಚ್ಚಲ ಸಿನಿಮಾ‌ ನಿರ್ದೇಶನ ಮಾಡುತ್ತಿರುವುದರಿಂದ , ಬಾಲಿವುಡ್ ನಟರೊಂದಿಗೆ ಗೆಳತನ ಇರುವ ಅವರು, ಆ ನಟರಿಗೆ ತಮ್ಮ ಸಿನಿಮಾ ತೋರಿಸುವ ಆಸೆಯನ್ನು ಹೊಂದಿದ್ದಾರೆ‌ ನಿರ್ದೇಶಕ ರವಿವರ್ಮ. ರುಸ್ತುಂ ಇದೇ ಜೂನ್ 28 ರಂದು ತೆರೆಗೆ ಬರಲು ಸಿದ್ಧವಾಗಿದ್ದು, ನಿರ್ದೇಶಕ ಮುಂಬೈನಲ್ಲಿ ನಟರಿಗೆ ತಮ್ಮ ಚಿತ್ರವನ್ನು ತೋರಿಸುವ ಆಲೋಚನೆಯಲ್ಲಿ ಇದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here