ನಟಿಯರು ತೆರೆಯ ಮೇಲೆ ಅಂದವಾಗಿ ಕಾಣುವಂತೆ ಮಾಡುವಲ್ಲಿ ಮೇಕಪ್ ಮ್ಯಾನ್ ಗಳ ಶ್ರಮ ಸಾಕಷ್ಟಿರುತ್ತದೆ. ತೆರೆಯ ಹಿಂದಿನ ಅವರ ಶ್ರಮ ತೆರೆಯ ಮೇಲೆ ನಟಿ ಮಣಿಯರ ಅಂದವನ್ನು ದುಪ್ಪಟ್ಟು ಮಾಡಿರುತ್ತದೆ.‌ ಇಂತಹ ಮೇಕಪ್ ಮ್ಯಾನ್ ಆಗಿ ಬಾಲಿವುಡ್ ನಲ್ಲಿ ಸ್ಟಾರ್ ನಟಿಯರಿಂದ ಹಿಡಿದು ಟಾಪ್ ನಟಿಯರವರೆಗೆ ಎಲ್ಲರಿಗೂ ಮೇಕಪ್ ಮಾಡಿ ಸಾಕಷ್ಟು ಹೆಸರು ಮಾಡಿದ್ದ, ಖ್ಯಾತ ಮೇಕಪ್ ಆರ್ಟಿಸ್ಟ್ ಸುಭಾಷ್ ವಾಗಲ್ ಇಂದು ನಿಧನರಾಗಿದ್ದಾರೆ. ಬಾಲಿವುಡ್ ನಲ್ಲಿ ಸುಬ್ಬು ಎಂದೇ ಜನಪ್ರಿಯರಾದ ಈ ಮೇಕಪ್ ಆರ್ಟಿಸ್ಟ್ ನಿಧನದ ಹಿನ್ನೆಲೆಯಲ್ಲಿ ಅನೇಕ ಬಾಲಿವುಡ್ ನಟಿಯರು ಸಂತಾಪ ಸೂಚಿಸಿದ್ದು, ಅನುಷ್ಕ ಶರ್ಮ ಮತ್ತು ಕತ್ರೀನಾ ಕೈಪ್ ಇಬ್ಬರೂ ಕೂಡಾ ಕಣ್ಣೀರು ಸುರಿಸಿದ್ದಾರೆ.

ಈ ಇಬ್ಬರೂ ಸ್ಟಾರ್ ನಟಿ ಮಣಿಯರು ಸುಭಾಷ್ ಅವರ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಭಾವನಾತ್ಮಕವಾದ ಪೋಸ್ಟ್ ಗಳನ್ನು ಹಾಕುವ ಮೂಲಕ ಅಗಲಿದ ಮೇಕಪ್ ಮ್ಯಾನ್ ಗೆ ಶ್ರದ್ಧಾಂಜಲಿ ಯನ್ನು ಕೋರಿದ್ದಾರೆ. ಅನುಷ್ಕಾ ಶರ್ಮ ಸುಭಾಷ್ ಅವರೊಂದಿಗಿನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ಅವರ ಬಗ್ಗೆ ತಮ್ಮ ನುಡಿ ನಮನವನ್ನು ಒಂದು ದೀರ್ಘವಾದ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. ಅನುಷ್ಕ ತಮ್ಮ ಪೋಸ್ಟ್ ನಲ್ಲಿ ಸುಭಾಷ್ ಒಬ್ಬ ಕರುಣಾಮಯಿ, ಸರಳ ಹಾಗೂ ಪ್ರತಿಭಾವಂತ ಮೇಕಪ್ ಆರ್ಟಿಸ್ಟ್ ಎಂದು ಹೊಗಳಿದ್ದಾರೆ.

ಕತ್ರೀನಾ ಕೈಫ್ ಕೂಡಾ ಸುಭಾಷ್ ಅವರೊಬ್ಬ ಅದ್ಭುತ ಮೇಕಪ್ ಮ್ಯಾನ್, ತನ್ನ ಆರಂಭದ ದಿನಗಳಲ್ಲಿ ಅವರ ಜೊತೆ ಕೆಲಸ ಮಾಡಿದ್ದೆ. ಅವರಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೆ ಎಂದು ತಮ್ಮ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ. ಸುಭಾಷ್ ಅವರ ಅಂತಿಮ ದರ್ಶನವನ್ನು ಬಾಲಿವುಡ್ ನ ಅನೇಕ ನಟ ನಟಿಯರು ಇಂದು ಪಡೆಯುವ ಮೂಲಕ ಅಗಲಿದ ಮೇಕಪ್ ಆರ್ಟಿಸ್ಟ್ ಗೆ ತಮ್ಮ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here