ದೇಶದಾದ್ಯಂತ ಸಿಎಎ ಮತ್ತು ಎನ್.ಸಿ.ಆರ್‌. ತೀವ್ರ ವಿರೋಧ ವ್ಯಕ್ತವಾಗಿರುವುದು, ಈ ಹಿನ್ನೆಲೆಯಲ್ಲಿ ದೇಶದ ಹಲವೆಡೆಗಳಲ್ಲಿ ಪ್ರತಿಭಟನೆಗಳು ನಡೆಸು, ಹಿಂಸಾಚಾರಗಳಿಗೆ ಕಾರಣವಾಗಿ, ಸಾಕಷ್ಟು ಸಾರ್ವಜನಿಕ ಆಸ್ತಿ ನಷ್ಟವಾಗುವುದರ ಜೊತೆಜೊತೆಗೆ ಪ್ರಾಣಕ್ಕೂ ಸಂಚಕಾರವನ್ನು ತಂದೊಡ್ಡಿದ ಸನ್ನಿವೇಶಗಳು ಮಾದ್ಯಮಗಳಲ್ಲಿ ಸುದ್ದಿಯಾಗುವ ಮೂಲಕ ದೇಶದಲ್ಲಿ ಎಂತಹ ಪರಿಸ್ಥಿತಿ ಇದೆ ಎಂಬುದನ್ನು ಜನರ ಮುಂದೆ ಇಟ್ಟಿದ್ದವು‌. ಕೆಲವರು ಸಿಎಎ ಯನ್ನು ಅನುಮೋದಿಸಿದರೆ, ಇನ್ನೂ ಕೆಲವರು ಅದನ್ನು ವಿರೋಧಿಸಿದ್ದಾರೆ. ವಿರೋಧವು ತೀವ್ರವಾಗಿ ವ್ಯಕ್ತವಾಗುತ್ತಿದೆ‌.

ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜಕೀಯ ನಾಯಕರು ಕೂಡಾ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತ ಇರುವಾಗ, ಬಾಲಿವುಡ್ ನ ನಟರು ಕೂಡಾ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಹಲವರು ಸಿಎಎ ವಿರುದ್ಧ ಹಾಗೂ ಜೆ.ಎನ್.ಯು ನಲ್ಲಿ ನಡೆದಂತಹ ಹಿಂಸಾಚಾರದ ಬಗ್ಗೆ ಕೂಡಾ ಮಾತನಾಡಿದ್ದರು‌. ಹೀಗೆ ಸಿಎಎ ವಿರುದ್ಧ ಹೇಳಿಕೆಗಳನ್ನು ನೀಡಿದ ಬಾಲಿವುಡ್ ಮಂದಿಗೆ ನಟಿ ಕಂಗನಾ ರಾಣವತ್ ಅವರ ಸಹೋದರಿ ರಂಗೋಲಿ ಚಾಂಡೇಲ್ ಬಹಳ ಖಡಕ್ಕಾಗಿ ಪ್ರತಿಕ್ರಿಯೆ ನೀಡುತ್ತಾ, ತಿರುಗೇಟು ನೀಡಿದ್ದಾರೆ. ಅವರು ತಮ್ಮ ಟ್ವೀಟ್ ನಲ್ಲಿ ಬಾಲಿವುಡ್ ಅನ್ನು ನಿಂದನೆ ಮಾಡಿದ್ದಾರೆ.

ಬಾಲಿವುಡ್ ಸಣ್ಣ ಮಟ್ಟದಲ್ಲಿ ಚರಂಡಿಯಾಗಿದೆ. ಇಲ್ಲಿ ಬಹಳಷ್ಟು ಅತ್ಯಾಚಾರ, ಕಿರುಕುಳ, ಲಿಂಗಭೇದಭಾವ, ಭೂಗತ ಕಪ್ಪು ಹಣ ಬಳಕೆ, ಹೊರಗಿನವರ ಬೆದರಿಸುವಿಕೆ ಮತ್ತು ಕಲೆಯ ಹೆಸರಿನಲ್ಲಿ ಅತ್ಯಂತ ದುಷ್ಕೃತ್ಯಗಳು ನಡೆಯುತ್ತವೆ, ಈ ಸ್ಥಳದಲ್ಲಿ ಸಿನಿಮಾ ಗಳ ಹೆಸರಿನಲ್ಲಿ ಧರ್ಮವನ್ನು ನಾಶ ಮಾಡಲಾಗುತ್ತದೆ.
ಇಂತಹ ಚಿಲ್ಲರೆಗಳು ನಮಗೆ ದೇಶ ಹೇಗೆ ನಡೆಯಬೇಕೆಂದು ಹೇಳುತ್ತಾರೆ ಎಂದು ಬಾಲಿವುಡ್ ಮಂದಿಗೆ ಆವಾಜ್ ಹಾಕಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here