ಐ.ಲವ್ ಯೂ ಸಿನಿಮಾ ಈಗಾಗಲೇ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಒಂದು ಕಡೆ ಚಿತ್ರದ ಬಗ್ಗೆ ಜನರಿಂದ ಒಳ್ಳೆಯ ಅಭಿಪ್ರಾಯ ಬರುತ್ತಿದೆ. ಈಗ ಈ ಸಿನಿಮಾ ನಿರ್ದೇಶಕ ಚಂದ್ರು ಅವರ ಸಂತೋಷಕ್ಕೆ ಕೂಡಾ ಕಾರಣವಾಗಿದೆ . ಅವರ ಸಂತೋಷ ಅಥವಾ ನಗುವಿಗೆ ಕಾರಣವಾಗಿರುವ ಅಂಶಗಳು ಚಿತ್ರದ ಯಶಸ್ವಿ ಪ್ರದರ್ಶನ ಹಾಗೂ ಗಲ್ಲಾಪೆಟ್ಟಿಗೆಯಲ್ಲಿ ಚಿತ್ರ ಮಾಡುತ್ತಿರುವ ಸದ್ದು‌. ಹೌದು ರಿಯಲ್ ಸ್ಟಾರ್ ಅಭಿನಯದ ಈ ಸಿನಿಮಾ ಆರ್ಥಿಕವಾಗಿ ಕೂಡಾ ಯಶಸ್ವಿಯಾಗಿ ಮುನ್ನಡೆಯನ್ನು ಇಟ್ಟಿದೆ. ಸಿನಿಮಾ ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ಬಿಡುಗಡೆ ಹೊಂದಿತ್ತು.

ಸಿನಿಮಾ ಬಿಡುಗಡೆ ಆಗಿ ಎರಡು ವಾರ ಕಳೆದಿದೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಿಂದ ಚಿತ್ರ ಗಳಿಸಿರುವ ಹಣ ಒಟ್ಟು 22 ಕೋಟಿ ಎಂದು ಚಿತ್ರತಂಡ ಹೇಳಿದೆ. ಇದರ ಜೊತಗೆ ಈ ವಾರದಿಂದ ಥಿಯೇಟರ್ ಗಳ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ಸಿನಿಮಾ‌ ಅಮೆರಿಕದಲ್ಲಿ ಕೂಡಾ ಬಿಡುಗಡೆಯಾಗಲಿದೆ ಎಂಬುದು ಮತ್ತೊಂದು ವಿಶೇಷವಾಗಿದೆ. ಇದರಿಂದ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಆಗಿರುವ ಚಂದ್ರು ಅವರಿಗೆ ಸಿನಿಮಾ ಹೆಚ್ಚಿನ ಸಂತೋಷವನ್ನೇ ನೀಡಿದೆ. ಬಿಡುಗಡೆ ಆದ ದಿನದಿಂದಲೂ ಚಿತ್ರಕ್ಕೆ ಒಳ್ಳೆಯ ಫಾರ್ಮ್ ಸಿಕ್ಕಿದೆ .

ಬಿಡುಗಡೆ ನಂತರ ನಿರ್ಮಾಪಕರಾದ ಚಂದ್ರು ಅವರು ಚಿತ್ರ ಎಷ್ಟು ಗಳಿಸಿದೆ, ಏನು ಎಂಬುದನ್ನು ಅಧಿಕೃತವಾಗಿ ಎಲ್ಲೂ ಹೇಳಿರಲಿಲ್ಲ. ಆದರೆ ಚಿತ್ರ ತಂಡದ ಮೂಲಗಳ ಪ್ರಕಾರ ಎರಡು ಭಾಷೆಯಿಂದ ಸಿನಿಮಾ ಗಳಿಸಿರುವ ಮೊತ್ತ 22 ಕೋಟಿ ಎಂದು ತಿಳಸಲಾಗಿದೆ. ಈ ವಾರಾಂತ್ಯಕ್ಕೆ ಇದು ಇನ್ನೂ ಹೆಚ್ಚಾಗಬಹುದು. ಚಂದ್ರು ಅವರು ಒಬ್ಬ ನಿರ್ಮಾಪಕನಾಗಿ ಯಶಸ್ವಿಯಾಗಿದ್ದಾರೆ. ಮುಂದೆ ದೊಡ್ಡ ಬಜೆಟ್ ಸಿನಿಮಾಗಳನ್ನು ಮಾಡಲು ಈ ಸಿನಿಮಾ ಅವರಿಗೆ ಸ್ಪೂರ್ತಿಯಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here