ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾಗಳೆಂದ್ರೆ ಅಭಿಮಾನಿಗಳ ಪಾಲಿಗೆ ಹಬ್ಬದೂಟ. ಅದರಲ್ಲೂ ಈ ವರ್ಷ ಡಿ ಬಾಸ್ ಅಭಿಮಾನಿಗಳು ಮರೆಯಲಾಗದ ವರ್ಷ. ಚಾಲೇಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಬ್ಲಾಕ್ ಬಸ್ಟರ್ ಆದ ಬೆನ್ನಲ್ಲೇ ಡಿ ಬಾಸ್ ಅಭಿನಯದ ಐವತ್ತನೇ ಸಿನಿಮಾ ಕುರುಕ್ಷೇತ್ರ ತೆರೆಗೆ ಬಂದಿತ್ತು. ತೆರೆಗೆ ಬಂದ ಬಳಿಕ ಕುರುಕ್ಷೇತ್ರ ಅಬ್ಬರ ಜೋರಾಗಿದೆ. ಕುರುಕ್ಷೇತ್ರ ತೆರೆಗೆ ಬಂದು ಒಂದು ತಿಂಗಳು ಕಳೆದರೂ ಸಹ baxoffice ನಲ್ಲಿ ದರ್ಶನ್ ಅಬ್ಬರ ಮಾತ್ರ ಕಮ್ಮಿ ಆಗಿಲ್ಲ. ಇದರ ನಡುವೆಯೇ ಕುರುಕ್ಷೇತ್ರ ಹೊಸ ರೆಕಾರ್ಡ್ ಒಂದನ್ನು ಮಾಡಿದೆ.

ಅದೇನೆಂದರೆ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ರವರ 50ನೇ ಚಿತ್ರ ‘ಕುರುಕ್ಷೇತ್ರ’ ಚಿತ್ರವು ಬುಕ್ ಮೈ ಶೋ ನಲ್ಲಿ 70 ಸಾವಿರಕ್ಕೂ ಹೆಚ್ಚು ವೋಟ್ ಪಡೆದು ಅತಿಹೆಚ್ಚು ವೋಟ್ ಪಡೆದ ಮೊದಲ ಚಿತ್ರಕ್ಕೆ ಪಾತ್ರವಾಗಿದೆ.ಈ ಕುರಿತಂತೆ ದರ್ಶನ್ ಫ್ಯಾನ್ಸ್ ಟ್ವಿಟರ್ ನಲ್ಲಿ ಖುಷಿ ವಿಚಾರವನ್ನು ಹಂಚಿಕೊಳ್ಳುತ್ತಿದ್ದಾರೆ.ಕುರುಕ್ಷೇತ್ರ’ ಚಿತ್ರದಲ್ಲಿ ಡಿ ಬಾಸ್ ಕೌರವರ ಅಧಿಪತಿ ದುರ್ಯೋಧನನ ಪಾತ್ರ ನಿರ್ವಹಿಸಿದ್ರು. ಕುರುಕ್ಷೇತ್ರ ಚಿತ್ರಕ್ಕೆ ಎಲ್ಲಾ ಕಡೆಯೂ ಮೆಚ್ಚುಗೆ ವ್ಯಕ್ತವಾಗಿದೆ.

ಗಳಿಕೆಯಲ್ಲೂ ಸಿನಿಮಾ ದಾಖಲೆ ಮಾಡ್ತಿದೆ. ಕುರುಕ್ಷೇತ್ರ ಸಿನಿಮಾದ ಪ್ರಮುಖ ಆಕರ್ಷಣೆಯೇ 3ಡಿ. ಈ ಚಿತ್ರವನ್ನ 3ಡಿ ವರ್ಷನ್ ನಲ್ಲಿ ನೋಡಿದ್ರೆನೇ ಮಜಾ.ಮಹಾಭಾರತದಲ್ಲಿ ದುರ್ಯೋಧನ, ಭೀಮ, ಶಕುನಿ ಹೀಗೆ ಸಾಕಷ್ಟು ಪಾತ್ರಗಳು ಬರುತ್ತವೆ. ಹೀಗಾಗಿ ಸಾಕಷ್ಟು ಕಲಾವಿದರು ಕುರುಕ್ಷೇತ್ರ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ದರ್ಶನ್​, ನಿಖಿಲ್​ ಕುಮಾರಸ್ವಾಮಿ, ರೆಬೆಲ್​​ ಸ್ಟಾರ್​ ಅಂಬರೀಶ್​, ರವಿಚಂದ್ರನ್​ ಸೇರಿ ಸಾಕಷ್ಟು ಜನರು ನಟಿಸಿದ್ದಾರೆ. ಇದು ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಆಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here