ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ ಡಾ.ಕೆ.ಸುಧಾಕರ್ ಅವರು. ಅವರ ಪರ ಮತ ಯಾಚನೆ ಹಾಗೂ ಪ್ರಚಾರಕ್ಕಾಗಿ ಕಳೆದ ಒಂದು ವಾರದಿಂದಲೂ ಕೂಡಾ ಸ್ಯಾಂಡಲ್ ವುಡ್ ನ ಜನಪ್ರಿಯ ತಾರೆಯರಾದ ದಿಗಂತ್, ಭುವನ್ ಪೊನ್ನಣ್ಣ, ಹರಿಪ್ರಿಯಾ, ಹರ್ಷಿಕಾ ಪೂಣಚ್ಚ ಅವರು ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದು, ವಿವಿಧ ಕಡೆಗಳಲ್ಲಿ ಸುಧಾಕರ್ ಅವರ ಪರವಾಗಿ ಪ್ರಚಾರ ಕಾರ್ಯವನ್ನು ನಡೆಸುತ್ತಾ ಚುನಾವಣಾ ಕಣಕ್ಕೆ ತಾರಾ ಮೆರುಗನ್ನು ನೀಡುತ್ತಿದ್ದರು‌‌. ಇಂದು ಅದಕ್ಕೆ ಇನ್ನಷ್ಟು ಮೆರಗು ನೀಡಲು ತೆಲುಗು ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಬ್ರಹ್ಮಾನಂದಂ ಅವರು ಚಿಕ್ಕಬಳ್ಳಾಪುರ ನಗರ ಮತ್ತು ಇತರೆಡೆಗಳಲ್ಲಿ ಮತ ಯಾಚನೆ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಆಂಧ್ರಪ್ರದೇಶದ ಗಡಿ ಭಾಗದ ಜಿಲ್ಲೆಯಾಗಿದ್ದು, ಇಲ್ಲಿನ ಪರಿಸರದಲ್ಲಿ ತೆಲುಗು ಮಾತನಾಡುವ ಜನರು ಅಧಿಕವಾಗಿದ್ದು ಅವರನ್ನು ಗಮನದಲ್ಲಿಟ್ಟುಕೊಂಡು ಬ್ರಹ್ಮಾನಂದಂ ಅವರಿಂದ ಚುನಾವಣಾ ಪ್ರಚಾರ ಕಾರ್ಯ ನಡೆಸಲಾಗಿದೆ. ಬ್ರಹ್ಮಾನಂದಂ ಅವರು ಚಿಕ್ಕಬಳ್ಳಾಪುರದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾ , ಸುಧಾಕರ್ ನನಗೆ ತುಂಬಾ ಆತ್ಮೀಯ ಗೆಳೆಯ. ಒಳ್ಳೆಯ ವ್ಯಕ್ತಿ ,ರಾಜಕಾರಣಿ ಹಾಗೂ ವಿದ್ಯಾವಂತ. ಇಂತಹವರಿಗೆ ಪವಿತ್ರವಾದ ಮತವನ್ನು ನೀಡಿದರೆ ನಮಗೆ ಒಳ್ಳೆಯದು ಎಂದಿದ್ದಾರೆ ಬ್ರಹ್ಮಾನಂದಂ.

ಸುಧಾಕರ್ ಅಂತಹ ವ್ಯಕ್ತಿಗೆ ಮತ ನೀಡಿದರೆ ಮುಂದೆ ನಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಅನುಕೂಲವಾಗಿರುತ್ತದೆ. ಅಂತಹ ಸಮರ್ಥ ನಾಯಕನ ಬಗ್ಗೆ ನಿಮಗೆ ತಿಳಿಸಲು ನಾನು ಹೈದರಾಬಾದ್ ನಿಂದ ಬಂದಿದ್ದೇನೆ. ಎಲ್ಲರೂ ತಪ್ಪದೇ ಸುಧಾಕರ್ ಅವರಿಗೆ ಮತ ನೀಡಿ‌, ಮತ್ತೆ ಅವರು ಚುನಾವಣೆಯಲ್ಲಿ ಗೆದ್ದು ನಡೆಸುವ ವಿಜಯಯಾತ್ರೆಯಲ್ಲಿ ನಾನು ಮತ್ತೆ‌ ನಿಮ್ಮ ಮುಂದೆ ಬರಲು ಇಚ್ಛಿಸುತ್ತೇನೆ ಎಂದು ಹೇಳಿದ್ದಾರೆ ಬ್ರಹ್ಮಾನಂದಂ. ಅವರ ಮಾತನ್ನು ಕೇಳಲು ಅಪಾರ ಸಂಖ್ಯೆಯಲ್ಲಿ ಜನರು ನೆರೆದಿದ್ದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here