Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

BREAKING : ಕಾವೇರಿ ಕಿಚ್ಚು ಸೆಪ್ಟೆಂಬರ್​ 26ಕ್ಕೆ ಬೆಂಗಳೂರು ಬಂದ್

ಬೆಂಗಳೂರು : ಮಂಡ್ಯ ಬಂದ್ ಬೆನ್ನಲ್ಲೇ ಮಂಗಳವಾರ ಅಂದ್ರೆ ಸೆಪ್ಟೆಂಬರ್​ 26 ರಂದು ಬೆಂಗಳೂರನ್ನು ಬಂದ್ ಗೆ ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟಿವೆ. ಹೌದು ತಮಿಳುನಾಡಿಗೆ ನಿರಂತರವಾಗಿ ಕಾವೇರಿ ನೀರನ್ನು ಹರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರನ್ನು ಬಂದ್ ಮಾಡುವುದಾಗಿ ಕನ್ನಡ ಪರ ಸಂಘಟನೆಗಳು ಘೋಷಣೆ ಮಾಡಿವೆ. ಇಂದು ಮಂಡ್ಯ ಜಿಲ್ಲೆಯನ್ನು ಬಂದ್ ಮಾಡಿ ಬೃಹತ್ ಹೋರಾಟ ಮಾಡಲಾಗುತ್ತಿದ್ದು ರೈತ ಸಂಘಟನೆ ಹಾಗೂ ಕನ್ನಡಪರ ಸಂಘಟನೆಗಳಿಗೆ ರಾಜಕೀಯ ಗಣ್ಯರು ಕೂಡ ಸಾಥ್ ನೀಡಿದ್ದಾರೆ. ಬೆಂಗಳೂರಿನ ಮೈಸೂರು ಬ್ಯಾಂಕ್​ ಬಳಿ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಸೇರಿದಂತೆ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಮಂಡ್ಯದಲ್ಲಿ ರೈತರು ತಮ್ಮ ಜಾನುವಾರು ಎತ್ತು, ಎಮ್ಮೆ ಹಾಗೂ ಶ್ವಾನಗಳನ್ನು ಕರೆದುಕೊಂಡು ಬಂದು ವಿನೂತನ ರೀತಿಯಲ್ಲಿ ಪ್ರತಿಭಟಿಸಲಾಗುತ್ತಿದೆ.