ತಾವು ಯಾವುದೇ ಕಾರಣಕ್ಕೂ ಜೈ ಶ್ರೀರಾಮ್ ಎಂದಾಗಲೀ ಮತ್ತು ವಂದೇ ಮಾತರಂ ಘೋಷಣೆಯನ್ನಾಗಲೀ ಕೂಗುವುದಿಲ್ಲವೆಂದು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು ಹೇಳಿಕೆ ನೀಡುವ ಮೂಲಕ ಎಲ್ಲರ ಗಮನವನ್ನು ತಮ್ಮತ್ತ ಸೆಳೆದಿದ್ದಾರೆ. ಅಲ್ಲದೆ ಈ ಎರಡು ಘೋಷಣೆಗಳ ಕುರಿತಾಗಿ ಅವರು ತಮ್ಮದೇ ಆದ ಅಭಿಪ್ರಾಯವನ್ನು ಹಾಗೂ ತಾನೇಕೆ ಆ ಘೋಷಣೆಗಳನ್ನು ಕೂಗುವುದಿಲ್ಲ ಎಂಬುದನ್ನು ಕೂಡಾ ಅವರು ಮಾದ್ಯಮಗಳ ಮುಂದೆ ಹೇಳಿದ್ದಾರೆ. ಅವರ ಹೇಳಿಕೆ ಈಗಾಗಲೇ ಮಾದ್ಯಮಗಳ‌‌ ಮುಖಾಂತರ ಎಲ್ಲರ ಮುಂದೆ ಬಂದಿದೆ.

ಓವೈಸಿ ಅವರು ಮಾತನಾಡುತ್ತಾ ಜೈ ಶ್ರೀರಾಮ್ ಮತ್ತು ವಂದೇ ಮಾತರಂ ಈ ಎರಡು ಘೋಷಣೆಗಳ ಮೂಲಕ, ಭಾರತದಲ್ಲಿರುವ ಭಾರತೀಯ ಮುಸಲ್ಮಾನರಲ್ಲಿ ಭಯ ಹುಟ್ಟಿಸುವಂತಹ ಒಂದು ಷಡ್ಯಂತ್ರವನ್ನು ನಡೆಸಲಾಗಿದೆ ನಡೆದಿದೆ ಎಂದು ಅವರು ಆರೋಪವನ್ನು ಮಾಡಿದ್ದಾರೆ. ಮಾತು ಮುಂದುವರೆಸುತ್ತಾ ಅವರು ಈ ಜೈ ಶ್ರೀರಾಮ್ ಹಾಗೂ ವಂದೇ ಮಾತರಂ ಘೋಷಣೆಯನ್ನು ಯಾರು ಬೇಕಾದರೂ ಹೇಳಬಹುದು ಆದರೆ ಅದನ್ನು ಹೇಳಬೇಕೆಂದು ಭಾರತೀಯ ಮುಸ್ಲಿಮರ ಮೇಲೆ ಒತ್ತಡ ಹೇರುತ್ತಿದ್ದಾರೆ.

ಇಂತಹ ಒಂದು ಬೆಳವಣಿಗೆ ಅಪಾಯಕಾರಿ ಹಾಗೂ ಆಘಾತಕಾರಿ ಎಂದು ಒವೈಸಿಯವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಘೋಷಣೆಯನ್ನು ಕೂಗದಿರುವ ಹಾಗೂ ಅದನ್ನು ನಿರಾಕರಿಸುತ್ತಿರುವ ಕಾರಣವನ್ನು ಮುಂದಿಟ್ಟುಕೊಂಡು, ಸಮಾಜದಲ್ಲಿ ಮುಸ್ಲಿಮರ ಬಗ್ಗೆ ಜನರಲ್ಲಿ ದ್ವೇಷ ಭಾವನೆಯನ್ನು ಹುಟ್ಟು ಹಾಕಲಾಗುತ್ತಿದ್ದು, ಆರ್.ಎಸ್.ಎಸ್. ಮತ್ತು ಬಿಜೆಪಿಯು ನೀಡಿರುವ ನಿರ್ದೇಶನದ ಮೇರೆಗೆ ಇದೆಲ್ಲಾ ನಡೆಯುತ್ತಿದೆಯೆಂದು ಒವೈಸಿ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here