ರಾಜ್ಯ ರಾಜಕೀಯದ ಗತಿ ಎತ್ತ ಸಾಗಿದೆ ಎಂಬುದೇ ತಿಳಿಯದಾಗಿದೆ. ಶಾಸಕರ ರಾಜೀನಾಮೆಯ ನಂತರ ಅಸ್ತಿತ್ವದಲ್ಲಿರುವ ದೋಸ್ತಿ ಸರಕಾರವು ರಾಜ್ಯದಲ್ಲಿ ತನ್ನ ಬಹುಮತವನ್ನು ಕಳೆದುಕೊಂಡಿರುವಾಗ, ಬಹುಮತ ಕುಸಿದು ಪತನದ ಕಡೆ ಮುಖ ಮಾಡಿರುವಗಾ, ಸರ್ಕಾರವನ್ನು ಉಳಿಸಿಕೊಳ್ಳಲು ಭರ್ಜರಿ ಪ್ರಯತ್ನಗಳು ನಡೆಯುತ್ತಿರುವಾಗಲೇ, ದುರಾದೃಷ್ಟ ಎಂಬಂತೆ ಮೈತ್ರಿ ಸರ್ಕಾರಕ್ಕೆ ಮತ್ತೊಂದು ಬರಸಿಡಿಲಿನಂತಹ ಆಘಾತ ಉಂಟಾಗಿದೆ. ಈಗಾಗಲೇ ರಾಜೀನಾಮೆ ನೀಡಿ ಮುಂಬೈ ಸೇರಿರುವ ಅತೃಪ್ತ ಶಾಸಕರ ಪಟ್ಟಿಗೆ ಈಗ ಹೊಸದಾಗಿ ಇನ್ನೂ ಎರಡು ಹೆಸರು ಸೇರಿ ಕೊಂಡಿದೆ. ದೋಸ್ತಿ ಉಳಿಸಲು ಶತಾಯ ಗತಾಯ ಪ್ರಯತ್ನದಲ್ಲಿರುವ ದೋಸ್ತಿ ನಾಯಕರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.

ಹೊಸಕೋಟೆಯ ಶಾಸಕರಾದ ಎಂಟಿಬಿ ನಾಗರಾಜ್ ಹಾಗೂ ಚಿಕ್ಕಬಳ್ಳಾಪುರ ಶಾಸಕರಾದ ಡಾ. ಸುಧಾಕರ್ ಅವರು ತಮ್ಮ ರಾಜೀನಾಮೆ ನೀಡಿದ್ದಾರೆ. ಈ ಇಬ್ಬರು ಶಾಸಕರು ಸ್ಪೀಕರ್ ರಮೇಶ್ ಕುಮಾರ್‌ ಅವರನ್ನು ಭೇಡಿ ಮಾಡಿ, ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಈ ಮೂಲಕ ಅತೃಪ್ತ ಶಾಸಕರ ಪಟ್ಟಿಗೆ ಈ ಇಬ್ಬರೂ ಶಾಸಕರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ದೋಸ್ತಿ ಸರ್ಕಾರದ ಉಳಿವಿಗೆ ರಾಜೀನಾಮೆಗಳು ಮುಳುವಾಗಿ ಪರಿಣಮಿಸಿದ್ದು ರಾಜ್ಯ ರಾಜಕೀಯ ಅತಂತ್ರವಾಗಿದೆ‌.

ರಾಜೀನಾಮೆ ಪರ್ವ ಇಲ್ಲಿಗೆ ಮುಗಿದಿಲ್ಲ.. ಇವರು ಮಾತ್ರವಲ್ಲದೆ, ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಹಾಗೂ ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಕೂಡಾ ರಾಜೀನಾಮೆ ನೀಡಿವರೆಂಬ ಅನುಮಾನಗಳು ದಟ್ಟವಾಗಿದೆ. ಒಂದೆಡೆ ದೋಸ್ತಿ ನಾಯಕರು ಮುಂಬೈ ಸೇರಿ ಅಲ್ಲಿ ಅತೃಪ್ತರ ಮನವೊಲಿಸಲು ಸಂಕಷ್ಟ ಗಳನ್ನು ಎದುರಿಸುತ್ತಿದ್ದರೆ, ಇಲ್ಲಿ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here