ಅತೃಪ್ತರ ರಾಜೀನಾಮೆ ಬಗ್ಗೆ ಉಂಟಾದ ಸಮಸ್ಯೆ ಸುಪ್ರೀಂ ಕೋರ್ಟ್ ಅಂಗಳಕ್ಕೆ ಹೋಗಿ ಅದರ ಬಗ್ಗೆ ಒಂದು ತೀರ್ಮಾನ ಕೂಡಾ ಹೊರ ಬಿದ್ದ ಹಿನ್ನೆಲೆಯಲ್ಲಿ, ಎಲ್ಲಾ ಅತೃಪ್ತ ಶಾಸಕರು ತಾವೇ ಖುದ್ದಾಗಿ ಬಂದು ವಿಧಾನ ಸಭಾ ಸ್ಪೀಕರ್ ಅವರಿಗೆ ರಾಜೀನಾಮೆ ನೀಡಬೇಕೆಂದು ಸುಪ್ರೀಂ‌ ಕೋರ್ಟ್ ಆದೇಶ ನೀಡಿರುವುದರಿಂದ, ಎಲ್ಲಾ ಶಾಸಕರು ಸ್ಪೀಕರ್ ಕಚೇರಿಗೆ ಆಗಮಿಸಲಿದ್ದು, ಹೀಗೆ ಬರಲಿರುವ ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆಯನ್ನು ಮಾಡಲಾಗಿದೆ.
ರಾಜೀನಾಮೆಯನ್ನು ನೀಡಲು ಶಾಸಕರೆಲ್ಲ ವಿಶೇಷ ವಿಮಾನದಲ್ಲಿ ಇಂದು ಸಂಜೆ ಎಚ್‍ಎಎಲ್ ತಲುಪಲಿದ್ದಾರೆ ಎನ್ನಲಾಗಿದೆ. ಬಳಿಕ ಅವರು ಆದಷ್ಟು ಬೇಗ ಸ್ಪೀಕರ್ ಕಚೇರಿ ತಲುಪಿ ರಾಜೀನಾಮೆ ನೀಡಬೇಕು.

ಅದಕ್ಕಾಗಿ ಅವರ ಸಂಚಾರಕ್ಕೆ ಯಾವುದೇ ತೊಂದರೆ ಆಗಬಾರದೆಂಬ ಉದ್ದೇಶದಿಂದ ಅವರಿಗೆ ಎಚ್‍ಎಎಲ್‍ನಿಂದ ವಿಧಾನಸೌಧದವರೆಗಿನ ಅವರು ಪಯಣಕ್ಕೆ ಜೀರೋ ಟ್ರಾಫಿಕ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಎಲ್ಲಾ ಶಾಸಕರಿಗೆ ಭದ್ರತೆ ಒದಗಿಸಬೇಕು ಎಂದು ಕೂಡಾ ಸುಪ್ರೀಂ ಕೋರ್ಟ್ ಪೊಲೀಸ್ ಇಲಾಖೆಗೆ ಆದೇಶ ನೀಡಿದೆ. ಇದರಿಂದಾಗಿ ಸುಮಾರು ಐನೂರಕ್ಕಿಂತ ಅಧಿಕ ಪೋಲಿಸರನ್ನು ವಿಧಾನ ಸೌಧದ ಸುತ್ತ ಮುತ್ತ ಈಗಾಗಲೇ ನಿಯೋಜಿಸಲಾಗಿದೆ.

ಮಾರ್ಷಲ್‍ ಗಳ  ಜೊತೆಗೆ  ಮಫ್ತಿಯಲ್ಲೂ ಕೂಡಾ ಪೊಲೀಸರು ಶಾಸಕರ ಭದ್ರತೆಗೆ ಸಜ್ಜಾಗಿದ್ದಾರೆ. ರಾಜಕೀಯ ಹೈಡ್ರಾಮದಲ್ಲಿ ಇದೀಗ ಅತೃಪ್ತ ಶಾಸಕರು ಭಾರೀ ಭದ್ರತೆಯಲ್ಲಿ ವಿಧಾನ ಸೌಧ ಕ್ಕೆ ಬಂದು ವಿಧಾನ ಸಭಾ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆಯನ್ನು ಸಲ್ಲಿಸಲಿದ್ದಾರೆ. ಇನ್ನೂ ಏನೆಲ್ಲಾ ನಡೆಯಲಿದೆ ಎಂಬುದು ಕಾದು ನೋಡಲೇಬೇಕಿದೆ. ಕರ್ನಾಟಕ ರಾಜಕೀಯ ಒಟ್ಟಾರೆ ಇಡೀ ದೇಶದ ಗಮನವನ್ನು ಸೆಳೆದಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here