ಪಾಕಿಸ್ತಾನ ಎಂದೊಡನೆ ಅದು ಭಯೋತ್ಪಾದಕರ ಸ್ವರ್ಗವೆಂಬುದು ಇಡೀ ಜಗತ್ತೇ ಒಪ್ಪಿರುವಂತಹ ಸತ್ಯ ‌ ಆದರೆ ಪಾಕ್ ನ ಆಡಳಿತ ವ್ಯವಸ್ಥೆ ಮಾತ್ರ ನಾವು ಉಗ್ರವಾದಕ್ಕೆ ಯಾವುದೇ ಕಾರಣಕ್ಕೂ ಪ್ರೋತ್ಸಾಹನ್ನು ನೀಡುವುದಿಲ್ಲವೆಂದು ಮೊದಲಿನಿಂದಲೂ ಹೇಳಿಕೊಂಡು ಬರುತ್ತಿತ್ತು. ಆದರೆ ಸತ್ಯವೆಂಬುದನ್ನು ಒಂದಲ್ಲ ಒಂದು ದಿನ ಜಗತ್ತಿನ ಮುಂದೆ ತೆರೆದಿಡಲೇಬೇಕಾಗುತ್ತದೆ. ಈಗ ಅದೇ ಹಾದಿಯಲ್ಲಿ ಪಾಕಿಸ್ತಾನ ತನ್ನಲ್ಲಿ ಭಯೋತ್ಪಾದಕರ ದೊಡ್ಡ ದಂಡೇ ಇದೆಯೆಂದು ಹೇಳಿದೆ. ಇದನ್ನು ಹೇಳಿರುವುದು ಸ್ವತಃ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್. ಆದರೆ ಅದರಲ್ಲೂ ಅವರು ಕುಟಿಲತೆಯನ್ನು ಮೆರೆದು ಉಗ್ರರ ತರಬೇತಿ ಮಾತ್ರ ಬೇರೆಡೆ ನಡೆದಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಸುಮಾರು 40 ಸಾವಿರ ಉಗ್ರರಿದ್ದಾರೆ ಎಂಬುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬಹಿರಂಗವಾಗಿಯೇ ಒಪ್ಪಿಕೊಂಡಿರುವುದು ಈಗ ಗಮನ ಸೆಳೆದಿದೆ. ಪ್ರಸ್ತುತ ಅವರು ಅಮೆರಿಕ ಪ್ರವಾಸದಲ್ಲಿದ್ದು, ಯುನೈಟೆಡ್ ಸ್ಟೇಟ್ಸ್ ಇನ್ಸ್ಟಿಟ್ಯೂಟ್ ಆಫ್ ಪೀಸ್ ಸಂಸ್ಥೆಯ ಕಾರ್ಯಕ್ರಮದಲ್ಲಿ ಮಾತನಾಡುವ ಸಂದರ್ಭದಲ್ಲಿ ಅವರು ಪಾಕ್‌ನಲ್ಲಿ ಭಯೋತ್ಪಾದಕರಿದ್ದಾರೆ ಎಂಬುದರ ಕುರಿತು ಹೇಳಿಕೆಯೊಂದನ್ನು ನೀಡುವ ಮೂಲಕ ತಾವೇ ಭಯೋತ್ಪಾದಕರ ಇರುವಿಕೆಯನ್ನು ಒಪ್ಪಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಇಮ್ರಾನ್ ಖಾನ್ ಅವರು 40 ಸಾವಿರ ಉಗ್ರರು ಭಾರತದಲ್ಲಿ ಇದ್ದರೂ ಸಹಾ , ಆ ಎಲ್ಲಾ ಉಗ್ರರು ನೆರೆಯ ಅಫ್ಘಾನಿಸ್ತಾನ್ ಹಾಗೂ ಕಾಶ್ಮೀರದಲ್ಲಿ ತರಬೇತಿಯನ್ನು ಪಡೆದಿದ್ದು, ಅವರು ಪಾಕಿಸ್ತಾನದಲ್ಲಿ ಇದ್ದುಕೊಂಡು ತಮ್ಮ ಚಟುವಟಿಕೆ ನಡೆಸಿದ್ದಾರೆ ಎನ್ನುವ ಮೂಲಕ ಉಗ್ರರಿಗೆ ತರಬೇತಿ ಸಿಕ್ಕಿರುವುದು ಕಾಶ್ಮೀರ ಹಾಗೂ ಆಫ್ಘಾನಿಸ್ತಾನದಲ್ಲಿ ಎನ್ನುವ ಮೂಲಕ ಪರೋಕ್ಷವಾಗಿ ಭಾರತದ ಮೇಲೆ ದೂರನ್ನು ಹಾಕುವ ಯತ್ನವನ್ನು ಮಾಡಿದ್ದಾರೆ. ಉಗ್ರರನ್ನು ಮಟ್ಟ ಹಾಕಲು ಪಾಕ್ ನಲ್ಲಿ ಎಲ್ಲಾ ರಾಜಕೀಯ ಪಕ್ಷಗಳೂ ಒಗ್ಗೂಡಿ ಐಕಮತ್ಯದಿಂದ ಕೆಲಸ ಮಾಡಲಿವೆ ಎಂದು ಪಾಕ್ ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here