ಮಾನವೀಯತೆಗೆ ದೇಶ, ಭಾಷೆಗಳ ಗಡಿಯಿಲ್ಲ, ಜಾತಿ , ಧರ್ಮಗಳ ಕಟ್ಟಳೆಯಿಲ್ಲ ಹಾಗೂ ಸಂಸ್ಕೃತಿ, ಸಂಪ್ರದಾಯಗಳ ತಡೆಯಿಲ್ಲ. ಕೇವಲ ಒಳ್ಳೆಯ ಮನಸ್ಸಿದ್ದರೆ ಸಾಕು ಎಂಬುದನ್ನು ಆಗಾಗ ಕೆಲವರು ನಮಗೆ ತೋರಿಸಿಕೊಡುತ್ತಾರೆ. ಆ ಮೂಲಕ ಮಾನವೀಯತೆಯೆಂಬ ಒರತೆ ಇನ್ನೂ ಬತ್ತಿಲ್ಲ ಎಂಬುದನ್ನು ಸಾಬೀತು ಪಡಿಸುತ್ತಾರೆ. ಈಗ ಅಂತಹುದೇ ಒಂದು ಮಾನವೀಯತೆಯನ್ನು ಮೆರೆದಿರುವ ಘಟನೆಯ ವಿವರವನ್ನು ನಾವು ನೀಡಲು ಹೊರಟಿದ್ದೇವೆ. ಆಸ್ಟ್ರೇಲಿಯಾ ಕ್ರಿಕೆಟ್‌ನ ಆಲ್ ರೌಂಡರ್ ಎಂದೇ ಖ್ಯಾತರಾದ ಬ್ರೆಟ್ ಲೀ ಯವರೇ ಈಗ ಮಾನವೀಯತೆ ಮೆರೆದು, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ರಾಯಚೂರಿನ ಕಿವಿ ಕೇಳದ ಹಾಗೂ ಮಾತು ಬಾರದ ಪುಟ್ಟ ಹುಡುಗಿಯ ಚಿಕಿತ್ಸೆಗಾಗಿ ಧನ ಸಹಾಯ ಮಾಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ರಾಯಚೂರಿನ ಬಾಲನ ಗೌಡ ಹಾಗೂ ಕವಿತಾ ಎಂಬ ದಂಪತಿಗಳ ಪುತ್ರಿ ಸಾಕ್ಷಿ. ರಾಯಚೂರು ಸಿಂಧನೂರ ತಾಲ್ಲೂಕಿನ ಜವಳಗೇರಾ ಗ್ರಾಮದಲ್ಲಿ ವಾಸವಿರುವ ಈ ದಂಪತಿಗಳ ಮಗಳು, ಒಂದು ವರ್ಷದ ಮಗುವಾದಾಗಿನಿಂದಲೂ ಕಿವಿ ಕೇಳಿಸುವುದಿಲ್ಲ ಹಾಗೂ ಮಾತನಾಡಲು ಬರುವುದಿಲದಲ್ಲ. ಆದರೆ ಮುದ್ದಿನ ಕೂಸು ಇತರೆ ಮಕ್ಕಳಂತೆ ಮಾತನಾಡಬೇಕು ಎಂಬುದು ಆ ತಂದೆ ತಾಯಿಯರ ಆಸೆ ಹಾಗೂ ಕನಸು. ಅದಕ್ಕಾಗಿ ಅವರು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಆದರೆ ಚಿಕಿತ್ಸೆಗೆ ಎಲ್ಲದಕ್ಕಿಂತ ಅತ್ಯುಗತ್ಯವಾಗಿದದ್ದು ಹಣ.

ಇವರ ಸಹಾಯಕ್ಕೆ ಮುಂದೆ ಬಂದ ಆಸ್ಟ್ರೇಲಿಯಾದ ಕ್ರಿಕೆಟಿಗ ಬ್ರೆಟ್ ಲೀ ಆ ಮಗುವಿನ ಚಿಕಿತ್ಸೆಗಾಗಿ ಒಟ್ಟು 16 ಲಕ್ಷ ರೂಪಾಯಿಗಳ ದೊಡ್ಡ ಮೊತ್ತವನ್ನು ನೀಡಿದ್ದಾರೆ. ಅವರು ನೀಡಿದ ಸಹಾಯದಿಂದ ಮೂರು ವರ್ಷಗಳಲ್ಲಿ ಮೊದಲು ಸ್ಥಳೀಯ ಆಸ್ಪತ್ರೆಯಲ್ಲಿ, ಆನಂತರ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಚಿಕಿತ್ಸೆ ಕೊಡಿಸಿ ಪ್ರಯೋಜನವಾಗದ ಕಾರಣ, ಮಗುವನ್ನು ಬೆಂಗಳೂರಿಗೆವ ಕರೆತಂದು ಇಲ್ಲಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆಯಡಿಯಲ್ಲಿ ಚಿಕಿತ್ಸೆ ನೀಡಲಾಗಿ, ಈಗ ಸಾಕ್ಷಿ ಚೆನ್ನಾಗಿ ಮಾತನಾಡುವ ಹಂತಕ್ಕೆ ತಲುಪಿದ್ದಾಳೆ. ಎಲ್ಲೋ ಆಸ್ಟ್ರೇಲಿಯಾದಲ್ಲಿ ಇರುವ ಈ ಕ್ರಿಕೆಟಿಗನ ಮನಸ್ಸು, ಕೋಟಿಗಟ್ಟಲೆ ಇದ್ದರೂ, ಇಂತಹ ಮಾನವೀಯ ಕಾರ್ಯಗಳಿಗೆ ಬಳಸದ ನಮ್ಮಲ್ಲಿರುವ ಕೋಟ್ಯಾಧೀಶರಿಗಿಂತ ಬಹಳ ದೊಡ್ಡದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here