ವಿಶ್ವದ ಕ್ರಿಕೆಟ್ ಲೋಕದಲ್ಲಿ ವೆಸ್ಟ್ ಇಂಡೀಸ್ ತಂಡದ ಬ್ರಿಯಾನ್ ಲಾರಾ ಅವರಿಗೆ ತನ್ನದೇ ಆದ ಹೆಸರು ಕೀರ್ತಿ ಇದೆ. ಒಂದು ಕಾಲದಲ್ಲಿ ಬ್ರಿಯಾನ್ ಲಾರಾ ಬ್ಯಾಟ್ ಹಿಡಿದು ಸ್ಕ್ರೀಜ್ ಗೆ ಬಂದರೆ ಎದುರಾಳಿ ತಂಡದ ಬೌಲರ್ಗಳಿಗೆ ನಡುಕ ಹುಟ್ಟಿಸುತ್ತಿದ್ದರು. ಇಂದಿಗೂ ಸಹ ಬ್ರಿಯಾನ್ ಲಾರಾ ಹೆಸರಲ್ಲಿ ಹಲವಾರು ದಾಖಲೆಗಳು ಅಚ್ಚಳಿಯದೆ ಹಸಿರಾಗಿ ಇವೆ. ವೆಸ್ಟ್ ಇಂಡೀಸ್ ತಂಡದಲ್ಲಿ ಬ್ರಿಯಾನ್ ಲಾರಾ ಅವರಿಂದಾಗಿ ಹೊಸ ಹುರುಪು ಬಂದಿತ್ತು. ಅಷ್ಟೇ ಅಲ್ಲ ಕ್ರಿಕೆಟ್ ಲೋಕದ ದಿಗ್ಗಜರಾದ ನಮ್ಮ ಭಾರತ ತಂಡದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೂ ಸಹ ಬ್ರಿಯಾನ್ ಲಾರಾ ಬ್ಯಾಟಿಂಗ್ ಎಂದರೆ ಅಚ್ಚುಮೆಚ್ಚು. ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್

ಲಾರಾ ನಡುವೆ ಇಂದಿಗೂ ಸಹ ಉತ್ತಮ ಸ್ನೇಹ ಸಂಬಂಧ ಹಾಗೆಯೇ ಇದೆ. ಬ್ರಿಯಾನ್ ಲಾರಾ ಅವರಿಗೆ ನಮ್ಮ ಭಾರತ ಕ್ರಿಕೆಟ್ ತಂಡದಲ್ಲಿ ಹಲವಾರು ಆಟಗಾರರು ಅಚ್ಚುಮೆಚ್ಚು ಎಂದು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. ಬ್ರಿಯಾನ್ ಲಾರಾ ಅವರು ಸದ್ಯ ಭಾರತದಲ್ಲಿ ನಡೆಯುತ್ತಿರುವ ರೋಡ್ ಸೇಫ್ಟಿ ಕ್ರಿಕೆಟ್ ಲೆಜೆಂಡ್ಸ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ವೇಳೆ ಲಾರ ಅವರು ಟಿವಿ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ವೆಸ್ಟ್ ಇಂಡೀಸ್ ಕ್ರಿಕೆಟ್ ಲೋಕದ ದಂತಕಥೆ ಬ್ರಿಯಾನ್ ಲಾರಾ ಅವರು ವಿಶ್ವ ಕ್ರಿಕೆಟ್ ಲೋಕದಲ್ಲಿ ಸದ್ಯಕ್ಕೆ ಇರುವ ಆಟಗಾರರ ಪೈಕಿ ನನಗೆ ಕೆಎಲ್ ರಾಹುಲ್ ಎಂದರೆ ಅಚ್ಚುಮೆಚ್ಚು ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸ್ಟೀವನ್ ಸ್ಮಿತ್ ಇವರೆಲ್ಲರೂ ಸದ್ಯ ಕ್ರಿಕೆಟ್ ನಲ್ಲಿ ಮಿಂಚುತ್ತಿರುವ ಆಟಗಾರರು ಇವರೆಲ್ಲರೂ ಉತ್ತಮವಾಗಿ ಆಡುತ್ತಿದ್ದಾರೆ ಆದರೆ ನನಗೆ ಕೆಎಲ್ ರಾಹುಲ್ ಎಂದರೆ ವಿಶೇಷವಾದ ಪ್ರೀತಿ ಇದೆ ಎಂದು ಬ್ರಿಯಾನ್ ಲಾರಾ ಅವರು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here