ಕೊರೊನಾ ವೈರಸ್​ ಸೋಂಕಿಗೆ ಔಷಧಕ್ಕಾಗಿ ಜಗತ್ತು ಎದುರು ನೋಡುತ್ತಿದೆ. ಈ ಔಷಧಿ ಕಂಡುಹಿಡಿಯಲು ವಿಶ್ವದೆಲ್ಲೆಡೆ ಪ್ರಯೋಗಗಳು ಕೂಡಾ ನಡೆಯುತ್ತಿವೆ. ಇಂಥಹ ಕ್ಲಿಷ್ಟಕರ ಸಂದರ್ಭದಲ್ಲಿ ಕೊರೊನಾ ಸೋಂಕಿಗೆ ತುತ್ತಾದ ಬ್ರಿಟನ್ನಿನ ರಾಜ ಚಾರ್ಲ್ಸ್ ಅವರು ಆಯುರ್ವೇದ ಮತ್ತು ಹೋಮಿಯೋಪಥಿ ಚಿಕಿತ್ಸೆಯ ಮುಖಾಂತರ ಸಂಪೂರ್ಣವಾಗಿ ಗುಣಮುಖ ಆಗಿದ್ದು ಇಲ್ಲಿ ಮತ್ತೊಂದು ವಿಶೇಷ ಏನೆಂದರೆ ಬೆಂಗಳೂರು ಮೂಲದ ವೈದ್ಯರು ಬೆಂಗಳೂರಿನಿಂದಲೇ ಅವರಿಗೆ ಈ ಚಿಕಿತ್ಸೆ ನೀಡಿದ್ದಾರೆ ಎಂಬುದು ಕರ್ನಾಟಕಕ್ಕೆ ಒಂದು ಗೌರವದ ವಿಷಯವಾಗಿದೆ.

 

ಕೇಂದ್ರದ ಆಯುಷ್​ನ ರಾಜ್ಯ ಸಚಿವ ಶ್ರೀಪಾದ್​ ನಾಯಕ್​ ಅವರು ಈ ವಿಶೇಷ ಮಾಹಿತಿಯನ್ನು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸೌಖ್ಯ ಎಂಬ ಆಯುರ್ವೇದ ರೆಸಾರ್ಟ್ ನಡೆಸುತ್ತಿರುವ ಡಾ. ಐಸಾಕ್​ ಮಥಾಯ್​ ಈ ವಿಷಯವನ್ನು ತಮಗೆ ತಿಳಿಸಿದ್ದಾಗಿ ಶ್ರೀಪಾದ್​ ನಾಯಕ್​ ಗುರುವಾರ ಈ ವಿಷಯವನ್ನು ತಿಳಿಸಿದ್ದಾರೆ. ಬ್ರಿಟನ್ ನ ರಾಜ ಚಾರ್ಲ್ಸ್ ಅವರು ಕೆಲವು ದಿನಗಳಿಂದ ಅಂದರೆ ಸೋಂಕಿನ ಲಕ್ಷಣ ಕಂಡು ಬಂದಾಗಿನಿಂದ ಸ್ಕಾಟ್ಲೆಂಡ್ ನಲ್ಲಿ ಸ್ವತಃ ಕ್ವಾರಂಟೈನ್ ನಲ್ಲಿ ಇದ್ದರು.

ರಾಜ ಚಾರ್ಲ್ಸ್​ ಅವರಿಗೆ ಕರೊನಾ ವೈರಸ್​ ಸೋಂಕು ತಗುಲಿರುವುದು ಖಚಿತವಾದ ನಂತರ ಅವರು ಬೆಂಗಳೂರಿನಿಂದ ಆಯುರ್ವೇದ ಮತ್ತು ಹೋಮಿಯೋಪಥಿ ಚಿಕಿತ್ಸೆ ಪಡೆದುಕೊಂಡರೆಂದು ತಿಳಿದು ಬಂದಿದೆ. ರಾಜ ಚಾರ್ಲ್ಸ್​ ಅವರಿಗೆ ನೀಡಲಾದಂತಹ ಚಿಕಿತ್ಸೆಯ ವಿವರವನ್ನು ಡಾ. ಐಸಾಕ್​ ಮಥಾಯ್​ ಅವರಿಂದ ಪಡೆಯುವುದು ಮಾತ್ರವೇ ಅಲ್ಲದೇ ಅದರ ಸಮಗ್ರ ಅಧ್ಯಯನವನ್ನು ಕೂಡಾ ನಡೆಸಲು, ವರದಿಯನ್ನು ನೀಡಲು ಕಾರ್ಯಪಡೆಯನ್ನು ರಚಿಸಲಾಗಿದೆ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here