ರಾಜ್ಯದ ಜನತೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮನವಿಯೊಂದನ್ನು ಮಾಡಿದ್ದಾರೆ. ಅಲ್ಲದೆ ಇದೇ ಸಂದರ್ಭದಲ್ಲಿ ಅವರು, ಇನ್ನೊಂದೆಡೆ ಕೋವಿಡ್-19 ವಿರುದ್ಧದ ಹೋರಾಟಕ್ಕೆ ದೇಣಿಗೆಯಾಗಿ ತಮ್ಮ ಒಂದು ವರ್ಷದ ವೇತನವನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈ ವಿಷಯವಾಗಿ ಪ್ರಕಟಣೆ ಹೊರಡಿಸಿರುವ ಸಿಎಂ ಅವರು ಕೋವಿಡ್-19 ನಿರ್ವಹಣೆಗೆ ಒಂದು ವರ್ಷದ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿರುವುದಾಗಿ ತಿಳಿಸಿದ್ದಾರೆ. ಮುಖ್ಯ ಮಂತ್ರಿ ಅವರ ಒಂದು ವರ್ಷದ ವೇತನ ಎಂದರೆ ಅದು ಸುಮಾರು 24 ಲಕ್ಷ ರೂ. ಗಳಾಗಿರುತ್ತದೆ.

ಈ ವೇತನವನ್ನು ಕೊರೊನಾ ವಿರುದ್ಧ ಹೋರಾಟಕ್ಕೆ ಅವರು ದೇಣಿಗೆಯಾಗಿ ನೀಡಿದ್ದಾರೆ. ಇದೇ ಸಮಯದಲ್ಲಿ ಸಿಎಂ ಅವರು ಶಾಸಕರು, ಸಂಸದರು ಹಾಗೂ ಅಧಿಕಾರಿಗಳಿಗೂ ಕೂಡ ತಮ್ಮ ಕೈಲಾದ ದೇಣಿಗೆಯನ್ನು ಈ ಸಮಯದಲ್ಲಿ ನೀಡುವಂತೆ ಕರೆ ನೀಡಿದ್ದಾರೆ. ಕೋವಿಡ್-19 ತಡೆಗೆ ಇನ್ನು 14 ದಿನಗಳ ಕಾಲ ಲಾಕ್ ಡೌನ್ ನಿಯಮ ಪಾಲನೆ ಮಾಡುವುದು ಕಡ್ಡಾಯವಾಗಿದೆ ಎಂದು, ಅದಕ್ಕೆ ಈ ಸಮಯದಲ್ಲಿ ಯಾರೂ ಮನೆಯಿಂದ ಹೊರಬರದಂತೆ ಎಚ್ಚರಿಕೆ ವಹಿಸುವಂತೆ ರಾಜ್ಯದ ಜನರಿಗೆ ಅವರು ಸಂದೇಶ ನೀಡುವ ಜೊತೆಗೆ ಮನವಿಯನ್ನು ಕೂಡಾ ಮಾಡಿದ್ದಾರೆ.

ಮುಖ್ಯಮಂತ್ರಿಯವರು ನಮ್ಮ ರಾಜ್ಯವು ಕೊರೊನಾ ತಡೆಯುವಲ್ಲಿ ಸಾಕಷ್ಟು ಯಶಸ್ವಿಯಾಗಿದೆಯಾದರೂ . ಇನ್ನೂ ನಮಗೆ ಅಪಾಯ ಮಾತ್ರ ತಪ್ಪಿಲ್ಲ. ಪ್ರಸ್ತುತ ರಾಜ್ಯವು ಸೋಂಕಿತರ ಸಂಖ್ಯೆಯಲ್ಲಿ ಮೂರನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಬಂದಿರುವುದು ಸಮಾಧಾನ ಹಾಗೂ ಸಂತೋಷವನ್ನು ತಂದಿದೆ. ಮುಂದಿನ 14 ದಿನ ಲಾಕ್ ಡೌನ್ ಕಟ್ಟು ನಿಟ್ಟಿನಿಂದ ಪಾಲನೆ ಆಗಬೇಕೆಂದು ಅವರು ಹೇಳುತ್ತಾ, ಜನರಿಗೆ ಸುರಕ್ಷತೆಯಿಂದ ಮನೆಯಲ್ಲಿರಿ ಎಂದಿದ್ದು, ಸರ್ಕಾರ ಆದೇಶವನ್ನು ಜನರು ಪಾಲಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here