ಈಗಾಗಲೇ ಭಾರತ ಲಾಕ್​ಡೌನ್​ ಆಗಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಇದು ಬಡವರು, ನಿರ್ಗತಿಕರಿಗೆ ಹಾಗೂ ಕೂಲಿ ಕಾರ್ಮಿಕರ ಪಾಲಿಗೆ ಸಮಸ್ಯೆಗಳ ಸಾಗರವನ್ನೇ ಸೃಷ್ಟಿಸಿ, ನಿತ್ಯ ಜೀವನವನ್ನು ದುರ್ಬರ ಮಾಡಿದೆ. ಅಗತ್ಯ ವಸ್ತುಗಳ ಕೊರತೆ ಅವರನ್ನು ಬಾಧಿಸುತ್ತಿದೆ. ಕೆಲಸವಿಲ್ಲದೆ, ಹಣವಿಲ್ಲದೆ ಅವುಗಳನ್ನು ಪಡೆಯುವುದು ಅಸಾಧ್ಯ ಎನಿಸಿದೆ. ಈ ಸಮಯದಲ್ಲಿ ಜನರ ಸಂಕಷ್ಟದಲ್ಲಿ ಅವರ ಜೊತೆ ನಿಂತು ಅವರಿಗೆ ಸಹಾಯ ನೀಡುವ ಉದ್ದೇಶದಿಂದ ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಿದೆ. ಅದೇ ಹಿನ್ನಲೆಯಲ್ಲಿ ಇದೀಗ ರಾಜ್ಯಸರ್ಕಾರ ಈ ಮತ್ತೊಂದು ಮಹತ್ವದ ಹೆಜ್ಜೆಯನ್ನು ಇಟ್ಟಿದ್ದು, ಸಾಮಾನ್ಯ ಜನರ ನೆರವಿಗೆ ಮುಂದಾಗಿದೆ.

ಸರ್ಕಾರದ ಹೊಸ ಪರಿಹಾರ ಕಾರ್ಯದಲ್ಲಿ ಪ್ರತಿದಿನ ಕೆಎಂಎಫ್​ನಲ್ಲಿ 3 ಲಕ್ಷ ಲೀಟರ್​ ಹಾಲು ಉಳಿಯುತ್ತಿದ್ದು, ಹೀಗೆ ಉಳಿಯುತ್ತಿರುವ ಹಾಲನ್ನು ಸರ್ಕಾರವೇ ಖರೀದಿ ಮಾಡಿ ಅದನ್ನು ಅಗತ್ಯವಿರುವ ಬಡಬಗ್ಗರಿಗೆ ನೀಡಲು ರಾಜ್ಯಸರ್ಕಾರ ತೀರ್ಮಾನ ಮಾಡಿದೆ. ಈ ವಿಷಯವನ್ನು ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸುದ್ಧಿಗೋಷ್ಟಿಯಲ್ಲಿ ಮಾತನಾಡುತ್ತಾ ರಾಜ್ಯದ ಜನರಿಗೆ ವಿತರಿಸುವ ನಂದಿನಿ ಹಾಲಿನ ಸರಬರಾಜಿನಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗಲಾರದು ಎಂದು ತಿಳಿಸಿದ್ದಾರೆ.

ಪ್ರತಿನಿತ್ಯ ಹಾಲು ಉತ್ಪಾದಕ ಘಟಕಗಳಲ್ಲಿ ಮಾರಾಟ ಆಗದೇ ಉಳಿಯುವ ಹಾಲನ್ನು ಆ ಜಿಲ್ಲೆಯ ಜಿಲ್ಲಾಡಳಿತದ ಸರ್ಕಾರವೇ ಖರೀದಿ ಮಾಡಲು ನಿರ್ಧಾರವನ್ನು ಮಾಡಲಾಗಿದೆ. ಹೀಗೆ ಖರೀದಿಸಿದ ಹಾಲನ್ನು ಬಡವರಿಗೆ, ಬಡ ಕೂಲಿ ಕಾರ್ಮಿಕರಿಗೆ ಹಾಗೂ ಸ್ಲಂ ಗಳಲ್ಲಿ ವಾಸವಾಗಿರುವ ಜನರಿಗೆ ವಿತರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here