ನನ್ನ ಬಜೆಟ್ ನಲ್ಲಿ ಯಾವುದೇ ಮುಚ್ಚು ಮರೆಯಿಲ್ಲ, ಕೇಂದ್ರದಿಂದ ಬರಬೇಕಾದ ಪಾಲು ಕಡಿಮೆಯಾಗಿದೆ ಎಂದು ಹೇಳಿದ್ದಾರೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು. ಬಜೆಟ್ ಮಂಡನೆಯ ನಂತರ ಅವರು ಸುದ್ದಿ ಗೋಷ್ಟಿಯಲ್ಲಿ ಮಾತನಾಡುತ್ತ ಬಜೆಟ್ ಗೆ ಸಂಬಂಧಿಸಿದ ವಿಚಾರಗಳನ್ನು ಹೇಳುವ ಸಂದರ್ಭದಲ್ಲಿ ಮೇಲಿನಂತೆ ಹೇಳಿದ್ದಾರೆ. ಯಡಿಯೂರಪ್ಪ ಅವರು ಮಾತನಾಡುತ್ತಾ ಈ ಬಾರಿ ಬಜೆಟ್ ನಲ್ಲಿ ದೂರದೃಷ್ಟಿಯುಳ್ಳ ಹಾಗೂ ಕೃಷಿಕರ ಆರ್ಥಿಕ ಸ್ಥಿತಿಯನ್ನು ಅರ್ಥೈಸಿಕೊಂಡು ಬಜೆಟನ್ನು ಮಂಡನೆ ಮಾಡಲಾಗಿದೆ ಎಂದು ಅವರು ತಮ್ಮ ಬಜೆಟ್ ರೈತರ ಪದವಾಗಿದೆ ಎಂಬುದಾಗಿ ಹೇಳಿದ್ದಾರೆ.

ಬಜೆಟ್ ನಲ್ಲಿ ಜಲಕ್ಷಾಮ ಮತ್ತು ಬರ ಪೀಡಿತ ಪ್ರದೇಶಗಳಲ್ಲಿ ಕೃಷಿಗೆ ಒತ್ತು ನೀಡುವ ಮೊದಲ ಬಜೆಟ್ ಇದಾಗಿದೆ ಎಂದ ಅವರು ಇದೇ ಮೊದಲ ಬಾರಿಗೆ ಏತ ನೀರಾವರಿಗೆ ಎಂದು 5 ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಆಡಳಿತ ಸಾಧಾರಣ ಅವರ ಕೂಡಾ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕೆಲವು ಇಲಾಖೆ ಗಳನ್ನು ಬೆಳಗಾವಿಯ ಸುವರ್ಣ ಸೌಧಕ್ಕೆ ವರ್ಗಾಯಿಸುವ ಬಗ್ಗೆ ಬೇಡಿಕೆ ಇತ್ತು. ನಮ್ಮ ಸರ್ಕಾರ ಅದರ ಬಗ್ಗೆ ನಿರ್ಧಾರ ಮಾಡಿದೆ ಎಂದವರು ಹೇಳಿದ್ದಾರೆ.

ಮಹದಾಯಿ ಸಂಬಂಧಿಸಿದಂತೆ ಗೆಜೆಟ್ ನೊಟಿಫಿಕೇಷನ್ ಹೊರಡಿಸಿರುವ ಕಾರಣ ಅದಕ್ಕಾಗಿ 500 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿರುವುದಾಗಿ ಕೂಡಾ ತಿಳಿಸಿದ್ದಾರೆ. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಾದ ಹಣ 15 ನೇ ವೇತನ ಆಯೋಗದಿಂದ ಬರಬೇಕಾಗಿದೆಯೆಂದೂ, ಅಲ್ಲದೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆಯ ಪಾಲು ಕೂಡಾ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಸಂಪನ್ಮೂಲದಲ್ಲಿ 15 ಸಾವಿರ ಕೋಟಿಯಷ್ಟು ಇಳಿಕೆಯಾಗಿದೆ ಎಂದು ಹೇಳುತ್ತಾ, ನನ್ನ ಬಜೆಟ್ ನಲ್ಲಿ ಯಾವುದೇ ಮುಚ್ಚುಮರೆಯಿಲ್ಲ ಎಂದು ಅವರು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here